ವರದಿ: ಮುಬಷೀರ್ ಅಹಮದ್

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ. ಎನ್.ರವೀಂದ್ರ ರವರಿಂದ ಎರಡನೇ ಬಿಗ್ ಡೇ ಹೈಪರ್ ಮಾರ್ಕೆಟ್ ಉದ್ಘಾಟನೆ

ಚಿಕ್ಕಬಳ್ಳಾಪುರ: ನಗರದ ಬಿಬಿ ರಸ್ತೆಯಲ್ಲಿ ಬಿಗ್ ಡೇ ಹೈಪರ್ ಮಾರ್ಕೆಟ್ ಮಳಿಗೆಯ ಎರಡನೇ ಬ್ರಾಂಚ್ ಶನಿವಾರ ಪ್ರಾರಂಭವಾಗಿದೆ.
ಈ ಹೊಸ ಮಳಿಗೆಯನ್ನು ಚಿಕ್ಕಾಬಳ್ಳಾಪುರ ಜಿಲ್ಲಾಧಿಕಾರಿಗಳಾದ ಆರ್.ರವೀಂದ್ರ ರವರು ಕೇಕ್ ಕಟ್ ಮಾಡಿ ಉದ್ಘಾಟಿಸಿದರು.
ಈ ವೇಳೆ ಬಿಗ್ ಡೇ ವ್ಯವಸ್ಥಾಪಕ ಪಾಲುದಾರರಾದ ಮುತ್ತಲಿಬ್, ಯುಸ್ಟರ್, ನಿಯಾಜ್, ಅಸ್ಟರ್ ಜಂಟಿಯಾಗಿ ಬಿಗ್ ಡೇ ಪ್ರಾರಂಭೋತ್ಸವದ ವೇಳೆ ಸುದ್ದಿಗರರೊಂದಿಗೆ ಮಾತನಾಡಿ
ನಮ್ಮ ಬಿಗ್ ಡೇ ಹೈಪರ್ ಮಾರ್ಕೆಟ್ ಮಳಿಗೆಯ ಎರಡನೇ ಬ್ರಾಂಚ್
ಮಳಿಗೆಯಲ್ಲಿ ನೀಡಲಾಗುತ್ತಿರುವ ಹೂಸ ಹೂಸ ಆಫರ್ ಪಡೆಯಲು ನಗರದ ಜನರು ಮಳಿಗೆಗೆ ಆಗಮಿಸಿದ್ದು, ಮಳಿಗೆ ದಿನ ಪೂರ್ತಿ ತುಂಬಿತುಳುಕುವ ದೃಶ್ಯ ಕಂಡು ಬಂದಿದೆ. ದಿನಸಿ, ತರಕಾರಿ, ಆಟದ ಸಾಮಗ್ರಿಗಳು ಇತ್ಯಾದಿ ವಸ್ತುಗಳು ಉತ್ತಮ ಕ್ವಾಲಿಟಿ ಉಳ್ಳಕೈಗೆಟುಕುವ
ದರದಲ್ಲಿ ಬಿಗ್ ಡೇ ಯಲ್ಲಿ ಲಭ್ಯವಿದ್ದು,ನಮ್ಮ ಕಡೆಯಿಂದ ನೀಡಲಾಗುತ್ತಿರುವ ಆಫರ್‌ಗಳನ್ನು
ಸದುಪಯೋಗ ಪಡೆದುಕೊಳ್ಳ ಬೇಕು ಎಂದು ತಿಳಿಸಿದರು.
ನಮ್ಮ ಮಳಿಗೆಯಲ್ಲಿ ಪ್ರತಿ ದಿನ ವಿವಿಧ ವಸ್ತುಗಳ ಮೇಲೆ ಉತ್ತಮ ಆಫರ್ ನೀಡಲಾಗುತ್ತಿದೆ ಇತರೆ ಮಳಿಗೆಗಳಿಗೆ ಹೋಲಿಸಿದರೆ ನಮ್ಮಲ್ಲಿ ಎಲ್ಲ ವಸ್ತುಗಳು ಕಮ್ಮಿ ಬೆಲೆಯಲ್ಲಿ ಲಭ್ಯವಿದೆ. ಇನ್ನು ನಮ್ಮ ಮಳಿಗೆಯಲ್ಲಿ 999 ರೂ ಖರೀದಿ ಮಾಡಿದ್ದಲ್ಲಿ ಲಕ್ಕಿ ಕೂಪನ್ ನೀಡಲಾಗುತ್ತಿದೆ.ಲಕ್ಕಿ ಡ್ರಾ ಮೂಲಕ ಆಯ್ಕೆಯಾಗುವವರಿಗೆ ಬಹುಮಾನ
ನೀಡಲಾಗುವುದು.ಬಂಪರ್ ಬಹುಮಾನ ಮಾರುತಿ ಸುಜುಕಿ ಕಾರ್,ಮೊದಲನೇ ಬಹುಮಾನ ಒಂದು ಜೋಡಿಗೆ ಮಲೇಷಿಯಾ ಟ್ರಿಪ್,ಹಾಗೂ ಇತರರಿಗೆ ಸಮಾಧಾನಕರ ಬಹುಮಾನವಾಗಿ ವಿವಿಧ ವಸ್ತುಗಳುಕೂಡ
ನೀಡಲಾಗುವುದು ಎಂದರು.

Leave a Reply

Your email address will not be published. Required fields are marked *