ಪ್ರೇಮಿಗಳ ದಿನಾಚರಣೆಗೆ ಕೊನೆಯ ಕ್ಷಣದಲ್ಲಿ ಪ್ಲಾನ್ ಮಾಡುತ್ತಿದ್ದೀರಾ?
ಕೈಗೆಟಕುವ ದರಲ್ಲಿ ಮನಮೋಹಕ ಸ್ಥಳಕ್ಕೆಭೇಟಿ ನೀಡಲು ವೀಸಾದ ಈ ಸಲಹೆಗಳನ್ನು ಪಾಲಿಸಿ!

ಪ್ರೇಮಿಗಳ ದಿನಾಚರಣೆಗೆ ಎಲ್ಲಾದರೂ ಭೇಟಿ ನೀಡಬೇಕೆಂದು ಕೊನೆಯ ಕ್ಷಣದಲ್ಲಿ ಪ್ಲಾನ್ ಮಾಡುತ್ತಿದ್ದೀರಾ? ಹಾಗಾದರೆ ರೊಮ್ಯಾಂಟಿಕ್ ಆದ ಮತ್ತು ಕೈಗೆಟುಕುವ ದರದಲ್ಲಿ ಹೋಗಿ ಬರಬಹುದಾದ ಸ್ಥಳಗಳಿಗೆ ಭೇಟಿ ನೀಡಲು ಸೂಕ್ತ ಸಲಹೆಗಳನ್ನು ವೀಸಾ ನೀಡುತ್ತಿದೆ. ಆ ಸಲಹೆಗಳು ಈ ಕೆಳಗಿನಂತಿವೆ:

1. ಅಷ್ಟೊಂದು ಜನಪ್ರಿಯವಲ್ಲದ ಸ್ಥಳಗಳನ್ನು ಆರಿಸಿಕೊಳ್ಳಿ: ಸಾಮಾನ್ಯವಾಗಿ ಕಿಕ್ಕಿರಿದು ಜನ ತುಂಬಿಕೊಂಡಿರುವ ಪ್ರವಾಸಿ ಸ್ಥಳಗಳನ್ನು ಬಿಟ್ಟುಬಿಡಿ. ಅಷ್ಟೊಂದು ಜನಪ್ರಿಯವಲ್ಲದ ಆದರೆ ಸೊಗಸಾದ ಸ್ಥಳಗಳನ್ನು ಆರಿಸಿಕೊಳ್ಳಿ. ಅತ್ಯುನ್ನತ ಅನುಭವ ಒದಗಿಸುವ ಅಪರೂಪದ ಸ್ಥಳಗಳನ್ನು ಹುಡುಕಿಕೊಳ್ಳಿ. ಅಲ್ಲಿಗೆ ಹೋಗಿ ಬರುವುದು ಅಷ್ಟೊಂದು ದುಬಾರಿಯೂ ಆಗುವುದಿಲ್ಲ. ಪ್ರಯಾಣ ಮತ್ತು ವಸತಿ ವ್ಯವಸ್ಥೆಯಲ್ಲಿ ಸಾಕಷ್ಟು ಹಣ ಉಳಿತಾಯ ಮಾಡಬಹುದು.
2. ಕಪಲ್ ಆಫರ್ ಗಳಿರುತ್ತವೆ, ನೋಡಿ: ಅನೇಕ ಸ್ಥಳಗಳು ದಂಪತಿಗಳಿಗೆ ಊಟ, ಹಲವು ವಿಶೇಷ ಚಟುವಟಿಕೆಗಳು ಇತ್ಯಾದಿ ರೊಮ್ಯಾಂಟಿಕ್ ಪ್ಯಾಕೇಜ್‌ ಗಳ ಆಫರ್ ನೀಡುತ್ತವೆ. ಈ ಪ್ಯಾಕೇಜ್ ಗಳು ಉತ್ತಮ ಬೆಲೆಯಲ್ಲಿ ದೊರೆಯಲಿದ್ದು, ದುಬಾರಿ ಖರ್ಚಿಲ್ಲದೆ ಶಾಶ್ವತವಾದ ನೆನಪುಗಳನ್ನು ರಚಿಸಲು ನಿಮಗೆ ಸಹಾಯ ಮಾಡುತ್ತವೆ.
3. ಹೆಚ್ಚು ಉಳಿತಾ ಮಾಡಲು ಕ್ರೆಡಿಟ್ ಕಾರ್ಡ್ ರಿವಾರ್ಡ್ ಗಳನ್ನು ಬಳಸಿ: ಪ್ರೇಮಿಗಳ ದಿನಾಚರಣೆಯನ್ನು ಕಡಿಮೆ ಖರ್ಚಿನಲ್ಲಿ ಸಂಭ್ರಮಿಸಲು ವೀಸಾ ಕಾರ್ಡು ಒದಗಿಸುವ ಪ್ರಯಾಣ ಸಂಬಂಧಿತ ವೆಚ್ಚಗಳ ಬೋನಸ್ ಪಾಯಿಂಟ್‌ ಗಳು ಅಥವಾ ಕ್ಯಾಶ್‌ ಬ್ಯಾಕ್‌ ನಂತಹ ವಿಶೇಷ ಆಫರ್ ಗಳ ಲಾಭವನ್ನು ಪಡೆದುಕೊಳ್ಳಿ!
4. ಪರ್ಯಾಯ ವಸತಿ ಆಯ್ಕೆಗಳನ್ನು ನೋಡಿಕೊಳ್ಳಿ: ಹೋಟೆಲ್ ಅನ್ನು ಕಾಯ್ದಿರಿಸುವ ಬದಲು ಖಾಸಗಿ ಕೋಣೆಗಳಿರುವ ಹಾಸ್ಟೆಲ್‌ ಗಳು ಅಥವಾ ವೆಕೇಷನ್ ರೆಂಟಲ್ ಆಯ್ಕೆಯನ್ನು ಪರಿಗಣಿಸಿ. ಸಾಮಾನ್ಯವಾಗಿ ಇವುಗಳಿಗೆ ಕಡಿಮೆ ಬೆಲೆ ಇರುತ್ತವೆ. ನಿಮಗೆ ಮತ್ತು ನಿಮ್ಮ ಸಂಗಾತಿಗೆ ಅವಿಸ್ಮರಣೀಯ ಅನುಭ ಒದಗಿಸುತ್ತವೆ.
5. ಸುಲಭವಾಗಿ ಪಾವತಿ ಮಾಡಲು ಕಾಂಟಾಕ್ಟ್ ಲೆಸ್ ಪೇಮೆಂಟ್ ಸೌಲಭ್ಯ ಬಳಸಿ: ನೀವು ಯಾವುದೇ ಅಂಗಡಿಗಳಲ್ಲಿ, ಮಳಿಗೆಗಳಲ್ಲಿ ಪಾವತಿ ಮಾಡುವ ಸಂದರ್ಭದಲ್ಲಿ ಕಾಂಟಾಕ್ಟ್ ಲೆಸ್ ಕಾರ್ಡ್ ಗಳನ್ನು ಬಳಸಿಕೊಳ್ಳಿ. ಅದರಲ್ಲಿ ವೇಗವಾಗಿ ಪಾವತಿ ಆಗುತ್ತದೆ ಮತ್ತು ಸುರಕ್ಷಿತವಾಗಿ ಪಾವತಿ ಮಾಡಬಹುದಾಗಿದೆ. ನಿಮ್ಮ ಪ್ರವಾಸದ ವೆಚ್ಚಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ನೆರವಾಗುತ್ತವೆ.

ಪ್ರೇಮಿಗಳ ದಿನವನ್ನು ಸಂಭ್ರಮಿಸಲು, ಪ್ರಣಯಾಚರಿಸಲು ದುಬಾರಿ ಖರ್ಚು ಮಾಡಬೇಕಿಲ್ಲ. ಈ ಸಲಹೆಗಳನ್ನು ಪಾಲಿಸಿದರೆ ಕೈಗೆಟಕುವ ದರದಲ್ಲಿ ಅತ್ಯುತ್ತಮ ಅನುಭವ ಪಡೆಯಬಹುದು. ಪ್ರೇಮಿಗಳ ದಿನವನ್ನು ಮನಮೋಹಕಗೊಳಿಸಬಹುದು.

Leave a Reply

Your email address will not be published. Required fields are marked *