ಚೌಡೇಶ್ವರಿ ವಾರ್ಡ್ ಬಿಜೆಪಿ ಅಧ್ಯಕ್ಷ ವಿ.ವಿ.ರಾಮಮೂರ್ತಿ ಯವರ ಜನ್ಮದಿನ :

ಸೇವಾ ಕಾರ್ಯಗಳ ಮೂಲಕ ಜನ್ಮದಿನ ಆಚರಣೆ :

ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳಿಂದ ಶುಭ ಹಾರೈಕೆ :

ಯಲಹಂಕ : ಯಲಹಂಕ ನಗರ ವ್ಯಾಪ್ತಿಯ ಚೌಡೇಶ್ವರಿ ವಾರ್ಡ್ 2ರ ಬಿಜೆಪಿ ಅಧ್ಯಕ್ಷರಾದ ವಿ.ವಿ.ರಾಮಮೂರ್ತಿ ಅವರು ತಮ್ಮ ಜನ್ಮದಿನಾಚರಣೆಯನ್ನು ವಿವಿಧ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸಾರ್ಥಕ ರೀತಿಯಲ್ಲಿ ಆಚರಿಸಿಕೊಂಡರು.

ಜನ್ಮದಿನಾಚರಣೆ ಪ್ರಯುಕ್ತ ಶನಿವಾರ ಬೆಳಿಗ್ಗೆ ಯಲಹಂಕ ಶಾಸಕರಾದ ಎಸ್ ಆರ್ ವಿಶ್ವನಾಥ್ ಅವರನ್ನು ಭೇಟಿ ಮಾಡಿ, ಅವರ ಆಶೀರ್ವಾದ ಪಡೆದರು.

ಚೌಡೇಶ್ವರಿ ವಾರ್ಡ್ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಅನ್ನದಾನ, ಅನಾಥಾಶ್ರಮಕ್ಕೆ ಭೇಟಿ ನೀಡಿ, ಆಶ್ರಮಕ್ಕೆ ನೆರವು ಕಾರ್ಯ ಕೈಗೊಂಡರು. ಬಿಬಿಎಂಪಿ ಪೌರ ಕಾರ್ಮಿಕರೊಂದಿಗೆ ಕೇಕ್ ಕತ್ತರಿಸುವ ಮೂಲಕ ಜನ್ಮ ದಿನಾಚರಣೆಗೆ ವಿಶೇಷತೆಯ ಮೆರಗು ನೀಡಿದರು.

ಜನ್ಮದಿನಾಚರಣೆ ಪ್ರಯುಕ್ತ ಸ್ನೇಹಿತರು, ಮುಖಂಡರು, ಹಿತೈಷಿಗಳು ಮತ್ತು ಅಭಿಮಾನಿಗಳೊಂದಿಗೆ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಿಸಿದರು.

ಸಂಜೆ ಚೌಡೇಶ್ವರಿ ವಾರ್ಡ್ ನ ವಿವಿಧ ಬಡಾವಣೆಗಳಲ್ಲಿ ವಿ.ವಿ.ರಾಮಮೂರ್ತಿ ಅವರ ಸ್ನೇಹಿತರು, ಹಿತೈಷಿಗಳು ಮತ್ತು ಅಭಿಮಾನಿಗಳು ಏರ್ಪಡಿಸಿದ್ದ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ರಾಮಮೂರ್ತಿ ಅವರ ಸ್ನೇಹಿತರು, ಹಿತೈಷಿಗಳು, ಮುಖಂಡರು ಮತ್ತು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಅಭಿಮಾನದಿಂದ ಜನ್ಮದಿನದ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಯಲಹಂಕ ಸ್ನೇಹ ಬಳಗದ ಲಕ್ಷ್ಮೀನಾರಾಯಣ ರಾಜುಶೆಟ್ಟಿ, ಬಿಜೆಪಿ ಮುಖಂಡರಾದ ವೆಂಕಟ್, ನಾಗೇಶ್, ಜನಾರ್ಧನ, ಶ್ರೀನಿವಾಸ್(ಬ್ರಿಟಿಷ್), ಶಿವಶಂಕರ್, ಆನಂದ್, ರವಿಕುಮಾರ್ ರೆಡ್ಡಿ, ಭರತ್ ಕುಮಾರ್ ಸೇರಿದಂತೆ ವಿ.ವಿ.ರಾಮಮೂರ್ತಿ ಅವರ ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳು ಹಾಗೂ ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರಿದ್ದು, ರಾಮಮೂರ್ತಿ ಅವರಿಗೆ ಜನ್ಮದಿನದ ಶುಭ ಹಾರೈಸಿದರು.

Leave a Reply

Your email address will not be published. Required fields are marked *