ಯಲಹಂಕದ ಮಹೇಶ್ವರಮ್ಮದೇವಿ ಕರಗ ಇಂದು :
ಯಲಹಂಕ : ಯಲಹಂಕದ ಬಜಾರ್ ರಸ್ತೆಯಲ್ಲಿರುವ ಐತಿಹಾಸಿಕ ದೇವಾಲಯ ಶ್ರೀ ಮಹೇಶ್ವರಮ್ಮದೇವಿ ಹೂವಿನ ಕರಗ ಮತ್ತು ಹೂವಿನ ಪಲ್ಲಕ್ಕಿ ಉತ್ಸವ ಬುಧವಾರ ಮಧ್ಯರಾತ್ರಿ ನಡೆಯಲಿದೆ ಎಂದು ರಾಜ್ಯ ವಹ್ನಿಕುಲ ಕ್ಷತ್ರಿಯ ಸಂಘದ ಅಧ್ಯಕ್ಷ, ಮಹೇಶ್ವರಮ್ಮದೇವಿ ಕರಗ ಮಹೋತ್ಸವ ಸಮಿತಿ ಅಧ್ಯಕ್ಷ ಮು.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಮಹೇಶ್ವರಮ್ಮದೇವಿ ಹೂವಿನ ಕರಗ ಮಹೋತ್ಸವದ ಪೂರ್ವಭಾವಿ ಕಾರ್ಯಗಳಿಗೆ ಭಾನುವಾರ ಚಾಲನೆ ದೊರೆತಿದ್ದು, ಇದರ ಭಾಗವಾಗಿ ಹಸಿ ಕರಗ ನೆರವೇರಿಸಲಾಗಿದೆ. ಮಂಗಳವಾರ ರಾತ್ರಿ 10 ಗಂಟೆಗೆ ಸುತ್ತಮುತ್ತಲ ಗ್ರಾಮಗಳ ಮಹಿಳೆಯರು ಆರತಿ ದೀಪಗಳ ಸಮೇತ ದೇವಾಲಯಕ್ಕೆ ಆಗಮಿಸಿ, ದೇವಿಗೆ ಆರತಿ ಬೆಳಗಿದ ಬಳಿಕ ಅಗ್ನಿಕುಂಡ ಹಾಯುವ ಕಾರ್ಯ ನೆರವೇರಲಿದೆ. ಬುಧವಾರ ಮಧ್ಯರಾತ್ರಿ ಮಹೇಶ್ವರಮ್ಮದೇವಿ ಮಹೋತ್ಸವ ಹಾಗೂ ಗ್ರಾಮದ 24 ದೇವರುಗಳಿಗೆ ಹೂವಿನ ಪಲ್ಲಕ್ಕಿ ಉತ್ಸವ ನೆಡೆಯಲಿದೆ ಎಂದು ಮು.ಕೃಷ್ಣಮೂರ್ತಿ ಕರಗ ಮಹೋತ್ಸವ ಕುರಿತು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *