ಸಹಕಾರ, ಬೆಂಬಲಕ್ಕಾಗಿ ಎಸ್.ಆರ್.ವಿಶ್ವನಾಥ್ ರನ್ನು ಅಭಿನಂದಿಸಿದ ಬೆಂ.ಡೈರಿ ನೂತನ ನಿರ್ದೇಶಕ ಸತೀಶ್ ಕಡತನಮಲೆ :
ಯಲಹಂಕ : ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕರ ಆಯ್ಕೆ ಚುನಾವಣೆಯಲ್ಲಿ ಬೆಂ.ಉತ್ತರ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾಗಿರುವ ಸತೀಶ್ ಕಡತನಮಲೆ ಅವರು ತಮ್ಮ ಗೆಲುವಿಗೆ ನೀಡಿದ ಅತ್ಯಮೂಲ್ಯ ಸಹಕಾರ, ಬೆಂಬಲಕ್ಕಾಗಿ ಶಾಸಕ ಎಸ್.ಆರ್ ವಿಶ್ವನಾಥ್ ಅವರಿಗೆ ಮಂಗಳವಾರ ಸಿಂಗನಾಯಕನಹಳ್ಳಿ ಬಿ.ಜೆ.ಪಿ ಕಚೇರಿಯಲ್ಲಿ ಕೃತಜ್ಞತಾಪೂರ್ವಕ ಅಭಿನಂದನೆ ಸಲ್ಲಿಸಿದರು.
ಅಭಿನಂದನೆ ಸ್ವೀಕರಿಸಿದ ನಂತರ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಮಾತನಾಡಿ ‘ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಚುನಾವಣೆಯಲ್ಲಿ ನಮ್ಮದೇ ಭಾಗದ ರೈತ ಹೋರಾಟಗಾರ, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ ಆಯ್ಕೆಯಾಗಿರುವುದು ಸಂತೋಷದ ಸಂಗತಿ. ಹಾಲು ಉತ್ಪಾದಕ ರೈತರ ಸಮಸ್ಯೆಗಳಿಗೆ ಮತ್ತು ಸಹಕಾರ ಸಂಘಗಳ ಏಳಿಗೆಗಾಗಿ ಅವರು ಪ್ರಾಮಾಣಿಕವಾಗಿ ಶ್ರಮಿಸುವ ಮೂಲಕ ನೆರವಾಗುವ ಕೆಲಸ ಮಾಡಬೇಕಿದೆ. ಸತೀಶ್ ಕಡತನಮಲೆ ಅವರು ರೈತ ಹೋರಾಟದ ಹಿನ್ನೆಲೆಯಿಂದ ಬಂದಿರುವುದರಿಂದ ಅವರಿಗೆ ಹಾಲು ಉತ್ಪಾದಕ ರೈತರ ಸಮಸ್ಯೆಗಳ ಬಗ್ಗೆ ಅಪಾರವಾದ ಅರಿವಿದೆ, ಮುಂಬರುವ ದಿನಗಳಲ್ಲಿ ಅವರು ರೈತ ಉತ್ಪಾದಕ ರೈತರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವುದರ ಜೊತೆಗೆ ಸಹಕಾರ ಸಂಘಗಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸುವಂತಾಗಲಿ ಎಂದು ಶುಭ ಹಾರೈಸಿದರು.
ಬೆಂ.ಡೈರಿ ನೂತನ ನಿರ್ದೇಶಕ ಸತೀಶ್ ಕಡತನಮಲೆ‌ ಮಾತನಾಡಿ ‘ನನ್ನ ಗೆಲುವು ಶಾಸಕ ಎಸ್ ಆರ್ ವಿಶ್ವನಾಥ್‌ ಅವರ ಗೆಲುವು, ಸಮಸ್ತ‌ ಬಿಜೆಪಿ ಕಾರ್ಯಕರ್ತರ ಗೆಲುವು ಎಂದು ತಿಳಿಸಲಿಚ್ಛಿಸ ಲಿಚ್ಛಿಸುತ್ತೇನೆ. ಎಸ್ ಆರ್ ವಿಶ್ವನಾಥ್ ಅವರು ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಂದಾಗಿ ಅವರ ಮೇಲೆ ವಿಶ್ವಾಸವಿಟ್ಟು ಹಾಲು ಉತ್ಪಾದಕ ರೈತರು ನನಗೆ ಮತ ನೀಡಿದ್ದಾರೆ, ಹತ್ತು ವರ್ಷಗಳ ಬಳಿಕ ಬೆಂ. ಉತ್ತರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ನನಗೆ ಗೆಲುವಾಗಿರುವುದು ಹೊಸದೊಂದು ಪರ್ವ, ಈ ಗೆಲುವಿಗೆ ಶಾಸಕರು ನೀಡಿರುವ ಸಹಕಾರವೇ ಮೂಲಕಾರಣ. ನಾನು ಅವರಿಗೆ ಸದಾ ಚಿರ ಋಣಿಯಾಗಿರುತ್ತೇನೆ. ಅವರ ಸಲಹೆ ಮಾರ್ಗದರ್ಶನದಲ್ಲಿ ಹಾಲು ಉತ್ಪಾದಕ ರೈತರ ಮತ್ತು ಸಹಕಾರ ಸಂಘಗಳ ಏಳಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ನನ್ನ ಗೆಲುವಿಗಾಗಿ ಸಹಕಾರ ನೀಡಿರುವ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ದಾಸರಹಳ್ಳಿ ಶಾಸಕ ಮುನಿರಾಜು ಅವರಿಗೆ ಹಾಗೂ ಬೆಂ.ಉತ್ತರ ಭಾಗದ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಮಸ್ತ ಅಧ್ಯಕ್ಷರಿಗೂ ಈ ಶುಭ ಸಂದರ್ಭದಲ್ಲಿ ಅನಂತ ಧನ್ಯವಾದ ತಿಳಿಸಲಿಚ್ಛಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಆರ್ ಎಸ್ ಎಸ್ ಎನ್ ಬ್ಯಾಂಕ್ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್, ಬಿಜೆಪಿ ಯುವ ಮುಖಂಡರು, ವಿಶ್ವವಾಣಿ ಫೌಂಡೇಶನ್ ನ ನಿರ್ದೇಶಕರಾದ ಅಲೋಕ್ ವಿಶ್ವನಾಥ್, ಬಿಜೆಪಿ ಮುಖಂಡರಾದ ಎಸ್ ಎನ್.ರಾಜಣ್ಣ, ದಿಬ್ಬೂರು ಜಯಣ್ಣ, ಡಿ.ಜಿ.ಅಪ್ಪಯ್ಯಣ್ಣ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಚೊಕ್ಕನಹಳ್ಳಿ ವೆಂಕಟೇಶ್, ಯಲಹಂಕ ನಗರ ಮಂಡಲ ಬಿಜೆಪಿ ಪ್ರಭಾರ ಅಧ್ಯಕ್ಷ ಮುರಾರಿರಾಮು, ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ್, ವಿ.ಪವನ್ ಕುಮಾರ್, ಬಿಜೆಪಿ ಮುಖಂಡರಾದ ಕೆ.ಆರ್.ತಿಮ್ಮೇಗೌಡ, ಎಸ್.ಜಿ.ನರಸಿಂಹಮೂರ್ತಿ (ಎಸ್.ಟಿ.ಡಿ.ಮೂರ್ತಿ), ರೈತ ಮೋರ್ಚಾದ ಜಿ.ಜೆ.ಮೂರ್ತಿ, ಎಚ್.ಸಿ.ರಾಜೇಶ್, ಪಿ.ಕೆ.ರಾಜಣ್ಣ, ವಸಂತ್ ಅರಕೆರೆ, ಎಚ್.ಎಸ್. ಕಿರಣ್, ರಾಜೇಂದ್ರ ಬೈರಾಪುರ, ಚೊಕ್ಕನಹಳ್ಳಿ ನಾಗೇಶ್, ರಾಮಚಂದ್ರರೆಡ್ಡಿ, ಮುನಿದಾಸಪ್ಪ, ಸಿಎಲ್ಎನ್ ಗೌಡ, ಬಿ.ಶ್ರೀನಿವಾಸಯ್ಯ, ಜಗದೀಶ್, ಕೆ.ಎಂ.ಅರಸೇಗೌಡ, ಮುನಿಕೃಷ್ಣ ಬೈರಾಪುರ, ಮುನಿರಾಜು, ಸಾದೇನಹಳ್ಳಿ ಪ್ರಕಾಶ್ ಗೌಡ, ಕೆ.ಬಾಬು, ಮುನಿಕೃಷ್ಣ ಸೇರಿದಂತೆ ಹಲವು ಬಿಜೆಪಿ ಮುಖಂಡರಿದ್ದರು.

Leave a Reply

Your email address will not be published. Required fields are marked *