

ರಾಷ್ಟ್ರೀಯ ಮೊಬೈಲಿಟಿ ಅವಾರ್ಡ್ಸ್ 2026 ಬೆಂ. ಮ. ಸಾ. ಸಂಸ್ಥೆಗೆ ಮೂರು ಪ್ರತಿಷ್ಠಿತ ಪ್ರಶಸ್ತಿಗಳು
. “ಡಿಜಿಟಲೀಕರಣ, ವಿದ್ಯುತ್ ವಾಹನಗಳ ಪರಿವರ್ತನೆ ಮತ್ತು ಸಮಾವೇಶಿತ ಸಂಚಾರದಲ್ಲಿ ಶ್ರೇಷ್ಠತೆಗೆ ರಾಷ್ಟ್ರೀಯ ಮೊಬೈಲಿಟಿ ಅವಾರ್ಡ್ಸ್ 2026ರಲ್ಲಿ ಬೆಂ.ಮ.ಸಾ.ಸಂಸ್ಥೆಗೆ ಮೂರು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿರುವ ಬಗ್ಗೆ.
ದಿನಾಂಕ 17 ಮಾರ್ಚ್ 2026 ರಂದು ಹೈದರಾಬಾದ್ನ ನೊವೋಟೆಲ್ ಹೋಟೆಲ್ನಲ್ಲಿ ನಡೆದ ನ್ಯಾಷನಲ್ ಮೊಬೈಲಿಟಿ ಸಮಿಟ್ & ಅವಾರ್ಡ್ಸ್ – ತೆಲಂಗಾಣ 2026 ಕಾರ್ಯಕ್ರಮದಲ್ಲಿ, ನ್ಯಾಷನಲ್ ಮೊಬೈಲಿಟಿ ಅವಾರ್ಡ್ಸ್ 2026 ಅಂಗವಾಗಿ, ಹಸಿರು, ಸಮಗ್ರ ಹಾಗೂ ಡಿಜಿಟಲ್ ಆಧಾರಿತ ಸಂಚಾರ ವ್ಯವಸ್ಥೆಯತ್ತ ಭಾರತದ ಪರಿವರ್ತನೆಯನ್ನು ಉತ್ತೇಜಿಸುವ ನಾಯಕತ್ವ ಮತ್ತು ನವೀನತೆಗೆ ಮಾನ್ಯತೆ ನೀಡುವ ಈ ವೇದಿಕೆಯಲ್ಲಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮೂರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದೆ.
ಬೆಂ.ಮ.ಸಾ.ಸಂಸ್ಥೆಯು ಕೆಳಗಿನ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದೆ:
• ಅತ್ಯುತ್ತಮ ಸಾರ್ವಜನಿಕ ಸಾರಿಗೆ ಡಿಜಿಟಲೀಕರಣ ಉಪಕ್ರಮ
• ರಾಜ್ಯ ಸಾರಿಗೆ ಸಂಸ್ಥೆ – ಇವಿ ಕ್ಲೀನ್ ಫ್ಲೀಟ್ ಪರಿವರ್ತನೆ ವರ್ಷದ ಪ್ರಶಸ್ತಿ
• ನಾಗರೀಕರ ತೊಡಗಿಸಿಕೊಳ್ಳುವಿಕೆ – ಸಮಾವೇಶಿತ ಸಂಚಾರದಲ್ಲಿ ನವೀನತೆ
ಈ ಪ್ರಶಸ್ತಿಗಳು ಹಸಿರು, ಸಮಗ್ರ ಮತ್ತು ಡಿಜಿಟಲ್ ಸಬಲೀಕೃತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವಲ್ಲಿ ಸಂಸ್ಥೆಯು ನೀಡಿರುವ ಮಹತ್ವದ ಕೊಡುಗೆಗಳನ್ನು ಗುರುತಿಸುತ್ತವೆ. ಸಂಸ್ಥೆಯು ಆಧುನಿಕ ತಂತ್ರಜ್ಞಾನಗಳ ಅಳವಡಿಕೆ, ವಿದ್ಯುತ್ ವಾಹನಗಳ ಉತ್ತೇಜನ, ಪ್ರಯಾಣಿಕರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವುದು ಹಾಗೂ ಎಲ್ಲ ವರ್ಗದ ಜನರಿಗೆ ಸುಲಭ ಮತ್ತು ಸಮಾನ ಪ್ರವೇಶಯೋಗ್ಯ ಸಾರಿಗೆ ಸೇವೆಗಳನ್ನು ಒದಗಿಸುವ ಬದ್ಧತೆಯನ್ನು ಈ ಗೌರವ ಪ್ರತಿಬಿಂಬಿಸುತ್ತದೆ.
ಈ ಪ್ರಶಸ್ತಿಗಳನ್ನು ಡಾ. ಕೆ. ಇಲಂಬರಿತಿ, ಐಎಎಸ್
ತೆಲಂಗಾಣ ರಾಜ್ಯದ ಸಾರಿಗೆ ಆಯುಕ್ತರು &
ಇಲೆಟ್ಸ್ (Elets) ಸಂಸ್ಥೆಯ ಸಿಇಒ ಶ್ರೀ ರವಿ ಗುಪ್ತಾ. ಅವರು ಪ್ರದಾನ ಮಾಡಿದರು.
ಸಂಸ್ಥೆಯ ಪರವಾಗಿ ಮುಖ್ಯ ಉಗ್ರಾಣ ಮತ್ತು ಖರೀದಿ ನಿಯಂತ್ರಕರಾದ ಶ್ರೀ ಮಂಜುನಾಥ ಕೆ.ವಿ. ಮತ್ತು ಕಾರ್ಯ ವ್ಯವಸ್ಥಾಪಕರು ಶ್ರೀ ಎಂ. ಜಗದೀಶ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ತನ್ನ ನವೀನ ಉಪಕ್ರಮಗಳು ಮತ್ತು ನಿರಂತರ ಪ್ರಯತ್ನಗಳಿಗೆ ದೊರೆತ ಈ ಮಾನ್ಯತೆಯಿಂದ ಸಂಸ್ಥೆಯು ಹರ್ಷಿಸುತ್ತದೆ. ಸ್ಥಿರತೆಯುತ ಕ್ರಮಗಳು, ಡಿಜಿಟಲ್ ಅಭಿವೃದ್ಧಿ ಮತ್ತು ನಾಗರೀಕ ಕೇಂದ್ರೀಕೃತ ಸೇವೆಗಳ ಮೂಲಕ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಂಸ್ಥೆ ಬದ್ಧವಾಗಿದೆ.
ಈ ಸಾಧನೆ, ಸ್ವಚ್ಛ ಮತ್ತು ಸ್ಮಾರ್ಟ್ ಸಾರಿಗೆ ವ್ಯವಸ್ಥೆಯತ್ತ ಭಾರತದ ಪ್ರಯಾಣಕ್ಕೆ ಕೊಡುಗೆ ನೀಡುತ್ತಾ, ಪರಿಣಾಮಕಾರಿ, ಪರಿಸರ ಸ್ನೇಹಿ ಮತ್ತು ಸಮಾವೇಶಿತ ಸಂಚಾರ ಪರಿಹಾರಗಳನ್ನು ಒದಗಿಸುವ ಸಂಸ್ಥೆಯ ದೃಷ್ಟಿಕೋಣವನ್ನು ಮತ್ತೊಮ್ಮೆ ದೃಢಪಡಿಸುತ್ತದೆ.
ಧನ್ಯವಾದಗಳು,
ಸಹಿ/-
ಸಾರ್ವಜನಿಕ ಸಂಪರ್ಕಾಧಿಕಾರಿ
