
ಸೊನಾಲಿಕಾದಿಂದ ಮೇ ತಿಂಗಳಲ್ಲಿ ಅತ್ಯಂತ ಹೆಚ್ಚು 14,213 ಟ್ರಾಕ್ಟರ್ ಗಳ ಮಾರಾಟದ ಮೂಲಕ 2026ರ ಹಣಕಾಸು ವರ್ಷದಲ್ಲಿ ದಾಪುಗಾಲು
ಸೊನಾಲಿಕಾ ಭಾರತದ ಕೃಷಿ ಕ್ಷೇತ್ರದಲ್ಲಿ ಗರಿಷ್ಠ ಕೃಷಿ ಇಳುವರಿ ನೀಡಲು ಸುಧಾರಿತ ತಂತ್ರಜ್ಞಾನದೊಂದಿಗೆ ಸನ್ನದ್ಧವಾದ ಹೆವಿ ಡ್ಯೂಟಿ ಟ್ರಾಕ್ಟರ್ ಗಳ ಮೂಲಕ ಕೃಷಿ ಕ್ಷೇತ್ರದ ಪರಿವರ್ತನೆಯಲ್ಲಿ ಸತತವಾಗಿ ಮುಂಚೂಣಿಯಲ್ಲಿದೆ
ಬೆಂಗಳೂರು, 12 ಜೂನ್ 2025: ಭಾರತದ ನಂ.1 ಟ್ರಾಕ್ಟರ್ ರಫ್ತು ಬ್ರಾಂಡ್ ಸೊನಾಲಿಕಾ ಟ್ರಾಕ್ಟರ್ಸ್ ತನ್ನ 2026ರ ಮೇ ತಿಂಗಳಲ್ಲಿ 14,213 ಅತ್ಯಂತ ಹೆಚ್ಚು ಟ್ರಾಕ್ಟರ್ ಗಳ ಮಾರಾಟದ ಮೂಲಕ ಹೊಸ ಮೈಲಿಗಲ್ಲು ಸಾಧಿಸಿ ಹಣಕಾಸು ವರ್ಷದ ಪ್ರಯಾಣವನ್ನು ಅತ್ಯಂತ ತೀವ್ರಗೊಳಿಸಿದೆ. ಈ ಹೊಸ ಸಾಧನೆಯು ಸೊನಾಲಿಕಾದ ಗ್ರಾಹಕ-ಕೇಂದ್ರಿತ ವಿಧಾನ ಮತ್ತು ರೈತರಿಗೆ ಅಸಾಧಾರಣ ಫಲಿತಾಂಶಗಳನ್ನು ಪೂರೈಸುವ ಫಲಿತಾಂಶ-ಕೇಂದ್ರಿತ ಆವಿಷ್ಕಾರದಿಂದ ಸಾಧ್ಯವಾಗಿದೆ. ಭಾರತದ ಕೃಷಿ ಕ್ಷೇತ್ರದಲ್ಲಿ ದೊಡ್ಡ ಎಂಜಿನ್ ಗಳು, ಸುಧಾರಿತ ಟ್ರಾನ್ಸ್ ಮಿಷನ್ ಗಳು ಮತ್ತು ನಿಖರ ಹೈಡ್ರಾಲಿಕ್ಸ್ ಹೊಂದಿರುವ ತನ್ನ ಹೆವಿ ಡ್ಯೂಟಿ ಟ್ರಾಕ್ಟರ್ ಗಳು ಭಾರತದ ಪ್ರಾದೇಶಿಕ ಮಣ್ಣಿನ ವೈವಿಧ್ಯತೆಯಲ್ಲಿ ಗರಿಷ್ಠ ಇಳುವರಿ ನೀಡುವ ಮೂಲಕ ಪರಿವರ್ತನೆಯನ್ನು ಮುನ್ನಡೆಸುವುದರಲ್ಲಿ ಈ ಬ್ರಾಂಡ್ ಮುಂಚೂಣಿಯಲ್ಲಿದೆ.
ಬಹಳ ಬೇಗನೆ ಪ್ರಾರಂಭವಾದ ಮಳೆಗಾಲವು ರೈತರಲ್ಲಿ ಉತ್ತಮ ಋತುವಿನ ಆಶಾವಾದ ತಂದಿದೆ. ರೈತ-ಕೇಂದ್ರಿತ ಉಪಕ್ರಮಗಳು ಮತ್ತು ವಿಶ್ವಮಟ್ಟದ ಕೃಷಿ ತಂತ್ರಜ್ಞಾನಗಳ ಅಳವಡಿಕೆಯಿಂದ ಸೊನಾಲಿಕಾ ಪ್ರಯೋಗಾಲಯದಿಂದ ಕೃಷಿಭೂಮಿಗೆ ಇರುವ ಅಂತರವನ್ನು ಯಶಸ್ವಿಯಾಗಿ ತುಂಬಿದ್ದು ಟ್ರಾಕ್ಟರ್ ಗಳ ಪ್ರತಿ ಆವಿಷ್ಕಾರವೂ ದೇಶಕ್ಕೆ ಆಹಾರ ಒದಗಿಸುವವರಿಗೆ ನೇರವಾಗಿ ಪ್ರಯೋಜನ ಉಂಟು ಮಾಡುವುದನ್ನು ದೃಢೀಕರಿಸುತ್ತದೆ. ರೈತರಿಗೆ ಗುಣಮಟ್ಟದ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಗಳಲ್ಲಿ ಖರೀದಿಸಲು ಸಮಾನ ಅವಕಾಶಗಳನ್ನು ಪೂರೈಸುವ ಈ ಬ್ರಾಂಡ್ ತನ್ನ ಉತ್ಸಾಹಕರ `ಸೊನಾಲಿಕಾ ಜೂನ್ ಡಬಲ್ ಜಾಕ್ ಪಾಟ್ ಆಫರ್’ ಪ್ರಾರಂಭಿಸಿದ್ದು ಇದರಲ್ಲಿ ರೈತರಿಗೆ 1,975 ಬಹಮಾನಗಳಿಂದ ಗೆಲ್ಲಲು ಅವಕಾಶ ಕಲ್ಪಿಸುತ್ತದೆ.