ಬೆಟ್ಟಹಲಸೂರು ಗ್ರಾಮ ಪಂಚಾಯಿತಿ : 2025-26ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆ :

ಬ್ಯಾಟರಾಯನಪುರ : ಕ್ಷೇತ್ರದ ಬೆಟ್ಟಹಲಸೂರು ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಆಯೋಜಿಸಿದ್ದ 2025-26ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ಎಸ್. ನಾಗರಾಜ್ ಬಾಬು ಉದ್ಘಾಟಿಸಿದರು.

ನಂತರ ಅವರು ಮಾತನಾಡಿ ‘ಗ್ರಾಮ ಸಭೆಗಳು ಸಾರ್ವಜನಿಕರು ಮತ್ತು ಗ್ರಾಮ ಪಂಚಾಯಿತಿ ನಡುವಿನ ಸಂಪರ್ಕ ಸೇತುವೆಗಳಿದ್ದಂತೆ. ಸಾರ್ವಜನಿಕರು ಗ್ರಾಮ ಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತಮ್ಮ ಹಾಗೂ ತಮ್ಮ ಗ್ರಾಮಗಳಿಗೆ ಸಂಬಂಧ ಪಟ್ಟ ಮೂಲಭೂತ ಸಮಸ್ಯೆಗಳನ್ನು ಹೇಳಿಕೊಳ್ಳುವುದರಿಂದ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು.

ಗ್ರಾಮಸಭೆಯಲ್ಲಿ ಬೆಟ್ಟಹಲಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಒಟ್ಟು10 ಅಂಗನವಾಡಿಗಳಿಗೆ ಸ್ಮಾರ್ಟ್ ಟಿ.ವಿ.ವಿತರಿಸಲಾಯಿತು. ಗ್ರಾಮಸಭೆಯ ಅಂಗವಾಗಿ ಉಚಿತ ಆರೋಗ್ಯ ಶಿಬಿರ, ಕಣ್ಣಿನ ತಪಾಸಣೆ, ಉಚಿತ ಕನ್ನಡಕಗಳ ವಿತರಣೆ ಮುಂತಾದ ಸವಲತ್ತುಗಳನ್ನು ವಿತರಿಸಲಾಯಿತು.

ಗ್ರಾಮಸಭೆಯಲ್ಲಿ ವಿವಿಧ ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಕುರಿತು ಜನತೆ ಮುಕ್ತವಾಗಿ ಚರ್ಚಿಸಿ, ಪರಿಹರಿಸಿಕೊಡುವಂತೆ ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಪಿಡಿಓ ಅವರಿಗೆ ಒತ್ತಾಯಿಸಿದರು.

ವಿಶೇಷವಾಗಿ ಬೆಟ್ಟಹಲಸೂರು ಕ್ರಾಸ್ ಬಳಿ ಮೆಟ್ರೋ ರೈಲು ನಿಲ್ದಾಣ ನಿರ್ಮಾಣ ಕುರಿತಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸಭೆ ನಡೆಸಿ ನಿರ್ಣಯ ಕೈಗೊಂಡು, ನಿರ್ಣಯವನ್ನು ಸರ್ಕಾರದ ಗಮನಕ್ಕೆ ತರಬೇಕೆಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಜಿ.ನಂಜುಂಡಪ್ಪ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪರವಾಗಿ ಒತ್ತಾಯಿಸಿದರು.

ಗ್ರಾಮಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ಮಾಜಿ ಅಧ್ಯಕ್ಷರಾದ ಬಿ.ಎಸ್.ಅನಿಲ್ ಕುಮಾರ್, ಬಿ.ಎಂ.ನಾಗೇಶ್, ಮಾಜಿ ಉಪಾಧ್ಯಕ್ಷೆ ವಿಮಲಾ ಗಣೇಶ್, ಗ್ರಾ.ಪಂ.ಸದಸ್ಯರಾದ ಬಿ.ಆರ್.ರಾಮಾಂಜಿನಿ, ತುಳಸಮ್ಮ ವೆಂಕಟರಮಣಪ್ಪ, ಮಮತಾ ಪ್ರಶಾಂತ್, ಬಾಲರಾಜ್, ಮುನಿಕೃಷ್ಣ, ರಮ್ಯ ವೇಣುಗೋಪಾಲ್, ಬಿ.ಕೆ.ರತ್ನಮ್ಮ ಆಂಜಿನಪ್ಪ, ಮೋಹನ್ ಸಿದ್ಧರಾಜು, ಟಿ.ಎಸ್.ನವೀನ್ ಕುಮಾರ್, ಸಾವಿತ್ರಮ್ಮ ಮುನಿರಾಜು, ಬಿ.ವೈ.ಮಂಜುನಾಥ್, ನಾಗರತ್ನ ಸುಬ್ರಮಣಿ, ಸವಿತಾ ಕೃಷ್ಣಮೂರ್ತಿ, ಪ್ರೇಮ ಮಂಜುನಾಥ್, ಸುವರ್ಣ ಜಯಣ್ಣ, ಅಮರನಾಥ್, ಸುಮಿತ್ರಮ್ಮ ರಾಜಣ್ಣ, ರಾಜಣ್ಣ, ಆನಂದ್, ರಾಮಮೂರ್ತಿ, ಪ್ರೇಮ ಚಂದ್ರಮೂರ್ತಿ, ಪಿಡಿಓ ಲೋಕನಾಥ್ ಪಿ.ಎಸ್., ಕಾರ್ಯದರ್ಶಿ ಸುಬ್ರಮಣ್ಯ, ಲೆಕ್ಕ ಸಹಾಯಕ ಗಣಪತಿ ಹೆಗಡೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *