ದಿನಾಂಕ 13 -2 -2025ರ ಬುಧವಾರ ಬಸವೇಶ್ವರ ವಾಣಿಜ್ಯ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಬೆಂಗಳೂರು ಇಲ್ಲಿ 2025-2026 ನೇ ಸಾಲಿನ ನೂತನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಯೋಜನಾ ವ್ಯವಸ್ಥಾಪಕರು… ಐಬಿಎಂ … ಲೇಖಕರು.. ಕವಿಗಳೂ ಆದ ಶ್ರೀಪ್ರಕಾಶ ರಾಜಗೋಳಿಯವರು ನೂತನವಾಗಿ ಪದವಿ ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸೂರ್ತಿದಾಯಕವಾದ ಮಾತುಗಳನ್ನಾಡುತ್ತಾ ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಜಬಸಸಂ (ನಿ) ಅಧ್ಯಕ್ಷರಾದ ಶ್ರೀಎಸ್ ಎಸ್ ದೊಡ್ಡಣ್ಣನವರ ಮಾತನಾಡಿ ಯಶಸ್ವಿ ವಿದ್ಯಾರ್ಥಿಗಳಾಗಬೇಕೆಂದು ತಿಳುವಳಿಕೆ ಮೂಡಿಸಿದರು. ಉಪಾಧ್ಯಕ್ಷರಾದ ಶ್ರೀಬಸವರಾಜ ಬಿರಾದಾರರವರು ನಿರ್ದೇಶಕರಾದ ಶ್ರೀಶಿವಕುಮಾರ ಸರಸೆಟ್ಟಿಯವರು ವಿದ್ಯಾರ್ಥಿಗಳಿಗೆ ಶುಭ ಕೋರಿದರು… ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳಿಮಠರವರು ಪ್ರಾಸ್ತಾವಿಕ ನುಡಿಗಳಲ್ಲಿ ವಿದ್ಯಾರ್ಥಿಗಳು ಕೌಶಲ್ಯಾಧಾರಿತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕೆಂದು ಮನವರಿಕೆ ಮಾಡಿಕೊಟ್ಟರು. ಸಂಚಾಲಕರಾದ ಶ್ರೀಮತಿ ಜ್ಯೋತಿ ಪಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಅವರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು… ನಿರೂಪಣೆ ಶ್ರೀಗಿರೀಶ ಪಿಹೆಚ್.. ಸ್ವಾಗತ ಶ್ರೀಗಿರೀಶ ವೈ.. ನಡೆಯಿಸಿಕೊಟ್ಟರು ವಿದ್ಯಾರ್ಥಿ ಸಂಚಾಲಕರಾದ ಶರಣಪ್ಪ ರೀನಾ ಪ್ರಜ್ವಲ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *