

ಆಕ್ಸ್ಫರ್ಡ್ ಆವರಣದಲ್ಲಿ ವಿಜೃಂಭಣೆಯ ಸ್ವಾತಂತ್ರ್ಯೋತ್ಸವ
ಯಲಹಂಕ ಕೋಗಿಲು ರಸ್ತೆಯಲ್ಲಿರುವ ಆಕ್ಸ್ಫರ್ಡ್ ಆಂಗ್ಲ ಶಾಲೆ ಸಂಯುಕ್ತ ಪದವಿಪೂರ್ವ ಹಾಗೂ ಪದವಿ ಕಾಲೇಜಿನಲ್ಲಿ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15 ಶುಕ್ರವಾರ 2025 ರಂದು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಕ್ಸ್ಫರ್ಡ್ ಶಾಲೆ ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿಗಳಾದ ಡಾ. ರಾಜು , ಶ್ರೀಮತಿ ಸುಜಾತ, ಶ್ರೀಮತಿ ಪ್ರಮೀಳಾ ರಾಜೇಶ್ , ಶ್ರೀಮತಿ ಶೋಭಾ ರಾಜ್ ಉಪಸ್ಥಿತರಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ಪ್ರಮೀಳಾ ರಾಜೇಶ್ ಅವರು ಈ ಸ್ವಾತಂತ್ರ್ಯ ಆಚರಣೆಯು ನಮ್ಮ ಭವಿಷ್ಯದ ಬಗ್ಗೆ ಮಾತ್ರವಲ್ಲ ನಮ್ಮ ದೇಶವನ್ನು ಪ್ರೀತಿಸುವ ನಮ್ಮ ದನಿಯು ಆಗಿದೆ .ಸ್ವಾತಂತ್ರ್ಯ ಎಂದರೆ ನಿಜವಾದ ಅರ್ಥ ನಮಗೆ ಬೇಕಾದವರನ್ನು ಪ್ರೀತಿಸುವುದು, ಪ್ರಾಮಾಣಿಕವಾಗಿ ಮಾತನಾಡುವುದು ಹಾಗೂ ಸಮರ್ಪಕ ಉದ್ದೇಶಕ್ಕಾಗಿ ನಿಲ್ಲುವ ಧೈರ್ಯ ಮಾಡುವುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿ ಪರಿಷತ್ತಿನ ಸದಸ್ಯರು ಮೆರವಣಿಗೆಯನ್ನು ನಡೆಸಿದರು.
ಎಲ್ ಕೆ ಜಿ , ಯು ಕೆ ಜಿ ವಿದ್ಯಾರ್ಥಿಗಳು ತಮ್ಮ ಪುಟ್ಟ ಪುಟ್ಟ ಕೈಗಳ ವ್ಯಾಯಾಮ ದಿಂದ ಎಲ್ಲರ ಗಮನ ಸೆಳೆದರೆ, ಒಂದು ಹಾಗೂ ಎರಡನೇ ತರಗತಿ ವಿದ್ಯಾರ್ಥಿಗಳು ಛತ್ತರಿ ವ್ಯಾಯಾಮ ಹಾಗೂ 3 ಹಾಗೂ 4ನೇ ತರಗತಿ ವಿದ್ಯಾರ್ಥಿಗಳು ಬಾರ್ಸ್ಟಿಕ್ ಹಾಗೂ ಐದು ಮತ್ತು ಆರನೇ ತರಗತಿ ವಿದ್ಯಾರ್ಥಿಗಳು ಹ್ಯಾರ್ಟ್ ಅಂಡ್ ಗ್ಲೌಸ್ ವ್ಯಾಯಾಮ ಪ್ರದರ್ಶಿಸಿದರು.
ಇದರೊಂದಿಗೆ ಪ್ರೌಢಶಾಲಾ ವಿದ್ಯಾರ್ಥಿಗಳು ಸಹ ಡಂಬಲ್ಸ್ ಲೆಸಿಮ್ಸ್ ವ್ಯಾಯಾಮಗಳನ್ನು ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ರು.
ಎಲ್ಲ ಕಾರ್ಯಕ್ರಮಗಳಿಂದ ಹೆಚ್ಚು ಆಕರ್ಷಿಕವಾಗಿದ್ದ ಪಿರಮಿಡ್ ಎಲ್ಲರ ಮನತಣಿಸಿತು.
ಶಾಲೆಯ ವಿದ್ಯಾರ್ಥಿನಿಯರು ತಮ್ಮ ವಿವಿಧ ನೃತ್ಯ ಪ್ರದರ್ಶನಗಳ ಮೂಲಕ ಎಲ್ಲರ ಕಣ್ಮನ ತಣಿಸಿ ಮನಸೂರೆಗೊಂಡರು. ಇದರೊಂದಿಗೆ ಎಲ್ಲ ವಿದ್ಯಾರ್ಥಿಗಳು ತ್ರಿವರ್ಣ ವರ್ಣದ ವಸ್ತ್ರಗಳನ್ನು ಧರಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ವನಿತಾ ಮಾಡಿದರೆ, ಶ್ರೀ ಶಶಿಧರನ್ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು.
ಶ್ರೀಮತಿ ಪ್ರಮೀಳಾ ರಮೇಶ್ ಅವರು ಬೈಬಲ್ ಸುವಾರ್ತೆಯನ್ನು ವಾಚನ ಮಾಡಿದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿ ಮದನ್ ಸ್ವಾತಂತ್ರ ದಿನಾಚರಣೆಯ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಪ್ರಥಮ ಪಿಯುಸಿ ವಿದ್ಯಾರ್ಥಿನಿ ರಿಷಿತ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲ ಶಿಕ್ಷಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು
