
1.5 ಕೋಟಿ ರು. ವೆಚ್ಚದ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಎಸ್ ಆರ್ ವಿಶ್ವನಾಥ್ ಚಾಲನೆ :
ಯಲಹಂಕ : ಕ್ಷೇತ್ರದ ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆವಲಹಳ್ಳಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಅಭಿವೃದ್ಧಿ ಮತ್ತು ಶೌಚಾಲಯ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಭಾನುವಾರ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ‘ಆವಲಹಳ್ಳಿ ಗ್ರಾಮದ ರಸ್ತೆಗಳ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಇಂದು 1.5 ಕೋಟಿ ರು.ಅಂದಾಜು ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಮತ್ತು ಶೌಚಾಲಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಭೂಮಿಪೂಜೆ ನೆರವೇರಿಸಲಾಗಿದ್ದು, ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಇದರೊಂದಿಗೆ ಆವಲಹಳ್ಳಿ ಗ್ರಾಮದಲ್ಲಿ ಇಂದು ಹೊಸ ಪಡಿತರ ವಿತರಣೆಗೂ ಸಹ ಚಾಲನೆ ನೀಡಲಾಗಿದೆ. ಇದುವರೆಗೂ ಆವಲಹಳ್ಳಿ ಗ್ರಾಮಸ್ಥರು ಪಡಿತರ ಧಾನ್ಯ ಪಡೆಯಲು ಸಿಂಗನಾಯಕನಹಳ್ಳಿ ಗ್ರಾಮಕ್ಕೆ ತೆರಳಬೇಕಿತ್ತು, ಇದನ್ನು ತಪ್ಪಿಸಿ ಆವಲಹಳ್ಳಿ ಗ್ರಾಮದಲ್ಲೇ ಪಡಿತರ ವಿತರಣೆಗೆ ವ್ಯವಸ್ಥೆ ಕಲ್ಪಿಸಿ, ಪಡಿತರ ವಿತರಣೆಗೆ ಇಂದು ಚಾಲನೆ ನೀಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಿಂಗನಾಯಕನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಅಮರಾವತಮ್ಮ, ಉಪಾಧ್ಯಕ್ಷ ಜಿ.ಸಿ.ಮಂಜುನಾಥ್, ಮಾಜಿ ಅಧ್ಯಕ್ಷ ಟಿ.ಮುನಿರೆಡ್ಡಿ, ಮಾಜಿ ಉಪಾಧ್ಯಕ್ಷರಾದ ಎಸ್.ಜಿ.ಪ್ರಶಾಂತ್ ರೆಡ್ಡಿ, ಹೇಮಂತ್ ಕುಮಾರ್, ಜೀವಿತಾ ಮುನಿಕೃಷ್ಣ, ಗ್ರಾಮದ ಹಿರಿಯ ಮುಖಂಡರು, ಪ್ರಗತಿಪರ ರೈತರಾದ ಕೆ.ಎನ್.ರಾಜಣ್ಣ, ನಂಜುಂಡೇಗೌಡ, ಕೇಶವಮೂರ್ತಿ, ಯಲಹಂಕ ತಾಲ್ಲೂಕು ಸೊಸೈಟಿ ಉಪಾಧ್ಯಕ್ಷ ಎ.ತಿಮ್ಮರಾಯಿಗೌಡ, ಗ್ರಾ.ಪಂ. ಸದಸ್ಯರಾದ ಪದ್ಮಶ್ರೀ ನಾಗರಾಜ್ ರೆಡ್ಡಿ, ನಂಜೇಗೌಡ, ಭಾಗ್ಯಲಕ್ಷ್ಮಿ ಕಿರಣ್ ಕುಮಾರ್, ವೀಣಾ ಗಿರೀಶ್, ಸುಧಾರಣಿ ಅಂಬರೀಶ್, ಶೋಭಾ ರಮೇಶ್, ಶೋಭಾ ಗೋಪಾಲ್, ಹರೀಶ್, ಕೆ.ಬಾಬು, ಮಲ್ಲೇಶ್, ಸುನಂದಾ ಪ್ರಕಾಶ್, ಚೈತ್ರ ಕೆಂಪೇಗೌಡ, ಗೋವಿಂದರಾಜು, ರಾಜೇಂದ್ರ, ಹನುಮಂತಯ್ಯ ಸೇರಿದಂತೆ ಗ್ರಾಮಸ್ಥರಿದ್ದರು.
