ಬೆಟ್ಟಹಲಸೂರು ಗ್ರಾಮಸ್ಥರಿಂದ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮ :

ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನದ ನಡುವೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ :

ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರು ಗ್ರಾಮಸ್ಥರ ವತಿಯಿಂದ ಭಾನುವಾರ ಆಯೋಜಿಸಿದ್ದ ಸಾಮೂಹಿಕ ಗಣೇಶೋತ್ಸವ ಮತ್ತು ವಿಸರ್ಜನಾ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ಡೊಳ್ಳು ಕುಣಿತ, ತಮಟೆ, ವೀರಗಾಸೆ, ಪಟದ ಕುಣಿತ ಮುಂತಾದ ವಿವಿಧ ಜಾನಪದ ಕಲಾತಂಡಗಳ ಕಲಾಪ್ರದರ್ಶನದ ನಡುವೆ ವಿಜೃಂಭಣೆಯ ಮೆರವಣಿಗೆ ನೆರವೇರಿಸಲಾಯಿತು. ಈ ವೇಳೆ ಗ್ರಾಮಸ್ಥರು ತಮಟೆ ವಾದನಕ್ಕೆ ಹೆಜ್ಜೆ ಹಾಕಿ ಹರ್ಷೊದ್ಘಾರ ವ್ಯಕ್ತಪಡಿಸಿದರು. ನಂತರ ಸಾಮೂಹಿಕ ಗಣೇಶ ವಿಸರ್ಜನೆ ನೆರವೇರಿಸಲಾಯಿತು.

ವಿಜೃಂಭಣೆಯ ಈ ಸಾಮೂಹಿಕ ಗಣೇಶೋತ್ಸವ ಮತ್ತು ವಿಸರ್ಜನೆ ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಹೇಮಾವತಿ ನಾಗರಾಜ್ ಬಾಬು, ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ಮಾಜಿ ಅಧ್ಯಕ್ಷರಾದ ಬಿ.ಎಸ್.ಅನಿಲ್ ಕುಮಾರ್, ಬಿ.ಎಂ.ನಾಗೇಶ್, ಬೆಟ್ಟಹಲಸೂರು ಕೃ.ಪ.ಸ.ಸಂಘದ ಅಧ್ಯಕ್ಷ ಪಂಚಮಿ ಶ್ರೀನಿವಾಸ್, ಬಿ.ಕೆ.ರವೀಂದ್ರನಾಥ್ ಗೌಡ, ಎಸ್.ಕೆ.ಬಿ.ಮಂಜುನಾಥ್, ಬಿ.ಬಿ.ಉಮೇಶ್, ರಾಜಗೋಪಾಲ್, ಬಿ.ಸಿ.ಶಿವರಾಜ್ (ಶಿವು), ಗ್ರಾ.ಪಂ.ಸದಸ್ಯರಾದ ಬಿ.ಆರ್.ರಾಮಾಂಜಿನಿ, ಮುನಿರಾಜು, ಪ್ರಶಾಂತ್ ಸೇರಿದಂತೆ ಗ್ರಾಮದ ಹಲವು ಮುಖಂಡರು ಮತ್ತು ಗ್ರಾಮಸ್ಥರಿದ್ದರು.

Leave a Reply

Your email address will not be published. Required fields are marked *