





ಬಡವರ ಸೇವೆಯೊಂದಿಗೆ ಸಹಕಾರ ಸಂಘದ ಏಳಿಗೆ ನಮ್ಮ ಗುರಿ : ಜಕ್ಕೂರು ರವಿಕುಮಾರ್
ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ :
ಬ್ಯಾಟರಾಯನಪುರ : ಬಡವರ ಸೇವೆಯೊಂದಿಗೆ ಸಹಕಾರ ಸಂಘದ ಏಳಿಗೆ ನಮ್ಮ ಗುರಿಯಾಗಿದ್ದು, ಕಳೆದ ಏಳು ವರ್ಷಗಳಿಂದ ನಮ್ಮ ಸೊಸೈಟಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು ತೃಪ್ತಿಕರವಾದ ಬೆಳವಣಿಗೆ ಕಾಣುತ್ತಿದೆ ಎಂದು ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ಜಕ್ಕೂರು ರವಿಕುಮಾರ್ ಅಭಿಪ್ರಾಯಪಟ್ಟರು.
ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ. 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಸೊಸೈಟಿಯು 2136 ಸದಸ್ಯರನ್ನು ಹೊಂದಿದ್ದು,, 1.41 ಕೋಟಿ ರು.ಗಳಷ್ಟು ದುಡಿಯುವ ಬಂಡವಾಳವಿದೆ. ಪ್ರಸಕ್ತ ವರ್ಷದಲ್ಲಿ ಸುಮಾರು 12.87 ಲಕ್ಷ ರು. ರು.ಗಳಷ್ಟು ಲಾಭಾಂಶ ಬಂದಿದೆ. ಈ ಪೈಕಿ ಶೇ. 8% ರಂತೆ 10 ಷೇರಿಗೆ 800 ರು.ಗಳ ಡಿವಿಡೆಂಟ್ ಹಂಚಿಕೆ ಮಾಡಲಾಗಿದೆ. ಕಳೆದ 7 ವರ್ಷಗಳಲ್ಲಿ ಸುಮಾರು 883 ಜನರಿಗೆ 6.5 ಕೋಟಿ ರು.ಗಳಷ್ಟು ಸಾಲವನ್ನು ನೀಡಲಾಗಿದೆ. ವರ್ಷದಿಂದ ವರ್ಷಕ್ಕೆ ಸದಸ್ಯರ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತಾ, ಜೊತೆಗೆ ಬಡವರ ಸೇವೆ ಮಾಡುತ್ತಾ ಏಳಿಗೆ ಹೊಂದುತ್ತಿದ್ದು, ಸೇವೆಯನ್ನೇ ಮಹತ್ವದ ಗುರಿಯನ್ನಾಗಿಸಿಕೊಂಡು ಕಳೆದ ಎರಡು ವರ್ಷಗಳಿಂದಲೂ ‘ಎ’ ದರ್ಜೆಯ ಸಹಕಾರ ಸಂಘವಾಗಿ ಮುನ್ನಡೆದಿದೆ, ಮುಂದಿನ ದಿನಗಳಲ್ಲಿ ನಮ್ಮ ಸೊಸೈಟಿ ವತಿಯಿಂದ ಐ.ಎ.ಎಸ್., ಯು.ಪಿ.ಎಸ್.ಸಿ.,ನೀಟ್ ಪರೀಕ್ಷೆ ಬರೆಯಲಿಚ್ಛಿಸುವ ವಿದ್ಯಾವಂತರಿಗೆ ಕೋಚಿಂಗ್ ಸೆಂಟರ್ ತೆರೆಯಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ವಿತರಣೆ, ಮರಣ ಹೊಂದಿದ ಸದಸ್ಯರ ಕುಟಬಸ್ಥರಿಗೆ 5 ಸಾವಿರ ರು.ಗಳ ಸಹಾಯಧನ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಸೊಸೈಟಿಯ ಉಪಾಧ್ಯಕ್ಷ ನಾಗರಾಜಪ್ಪ ವಿ., ನಿರ್ದೇಶಕರಾದ ವಿನೋದ್ ಕುಮಾರ್ ವ್ಯಾಸ, ರಮೇಶ್ ಬಿ.ಜಿ., ರತ್ಮಮ್ಮ, ಸುಮಿತ್ರ, ವೀಣಾ ವೆಂಕಟೇಶ್, ರವೀಂದ್ರನಾಥಗೌಡ ಬಿ.ಕೆ., ಮಾರುತಿ ಎಸ್., ಸಿ.ಎ.ಚಿಕ್ಕಣ್ಣ, ಬಿ.ಎಂ.ಚಂದ್ರಶೇಖರ್, ಆಂಜಿನಪ್ಪ ಜಿ., ಇ.ಕೃಷ್ಣಪ್ಪ, ಮಂಜುನಾಥ್ ಆರ್., ಶ್ರೀಮಾಲಾ ವಿ.ಭಟ್, ಹಿರಿಯ ಕಾನೂನು ಸಲಹೆಗಾರ ರಾಮಚಂದ್ರಪ್ಪ ಎಸ್.ವಿ., ಸಿಇಒ ರಾಕೇಶ್ ಎಸ್.ಟಿ., ಯಶೋಧ, ಲಾವಣ್ಯ ಸೇರಿದಂತೆ ಸೊಸೈಟಿಯ ಅಸಂಖ್ಯಾತ ಸದಸ್ಯರಿದ್ದರು.
