





ಯಲಹಂಕ : ಪ್ರಧಾನಿ ನರೇಂದ್ರ ಮೋದಿಯವರು ವಿಶ್ವನಾಯಕರು, ಅಮೇರಿಕಾ, ರಷ್ಯಾ ದಂತಹ ಪ್ರಬಲ ಆರ್ಥಿಕ ಶಕ್ತಿ ಹೊಂದಿರುವ ರಾಷ್ಟ್ರಗಳು ಸಹ ನರೇಂದ್ರ ಮೋದಿಯವರ ನಾಯಕತ್ವದ ಗುಣ, ರಕ್ಷಣಾ ನೀತಿ, ಆರ್ಥಿಕ ನೀತಿ ಮತ್ತು ವಿದೇಶಾಂಗ ನೀತಿಯನ್ನು ಪ್ರಶಂಸೆ ಮಾಡುತ್ತಿವೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನಾಚರಣೆ ಪ್ರಯುಕ್ತ ಯಲಹಂಕ ಉಪನಗರದ ವೀರ ಸಾವರ್ಕರ್ ಮೇಲ್ಸೇತುವೆ ಬಳಿ ಬುಧವಾರ ಆಯೋಜಿಸಿದ್ದ ಸೇವಾ ಪಾಕ್ಷಿಕ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಜಾಗತಿಕ ಮಟ್ಟದಲ್ಲಿ ಹನ್ನೊಂದನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆಯನ್ನು ನಾಲ್ಕನೆಯ ಸ್ಥಾನಕ್ಕೆ ಏರಿಸಿರುವ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಅವರ ಶಿಸ್ತು, ಸಂಯಮ, ಕಠಿಣ ಪರಿಶ್ರಮ, ಸಮಯ ಪಾಲನೆ, ಧೈರ್ಯ, ಆತ್ಮವಿಶ್ವಾಸ, ಸಮಯೋಚಿತ ನಿರ್ಧಾರ ಮುಂತಾದ ಮೌಲ್ಯಾದರ್ಶಗಳು ಜಾಗತಿಕ ಮಟ್ಟದಲ್ಲಿ ಗೌರವಿಸಲ್ಪಡುತ್ತಿವೆ. ಅಮೇರಿಕಾ, ರಷ್ಯಾ ದಂತಹ ವಿಶ್ವದ ದೊಡ್ಡಣ್ಣಗಳಿಗೂ ಸೊಪ್ಪು ಹಾಕದ ಅವರ ಧೈರ್ಯ ಪ್ರಶಂಸಾರ್ಹ ವಾದುದು. ಇತ್ತೀಚೆಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಉತ್ಪನ್ನಗಳಿಗೆ ವಿಧಿಸಿದ್ದ ದುಬಾರಿ ತೆರಿಗೆಯ ವಿಷಯದಲ್ಲಿ ನರೇಂದ್ರ ಮೋದಿ ಯವರು ಟ್ರಂಪ್ ಅವರಿಗೇ ಸೊಪ್ಪು ಹಾಕದೆ, ಸೆಡ್ಡು ಹೊಡೆದು ನಿಲ್ಲುವ ಮೂಲಕ ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿ ದ್ದಾರೆ, ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಭಾರತವನ್ನು ಇತರೆ ದೇಶಗಳು ಬೆರಗು ಗಣ್ಣಿನಿಂದ ನೋಡುವ ರೀತಿ ಮಾಡಿದ್ದಾರೆ ಎಂದರು.
ಮೋದಿಯವರು ಓರ್ವ ಅಪ್ರತಿಮ ದೇಶಭಕ್ತ, ಸಂತನಿದ್ದಂತೆ ಅವರಿಗೆ ದೇಶವೇ ಕುಟುಂಬ, ದೇಶವಾಸಿ ಗಳೇ ಕುಟುಂಬದ ಸದಸ್ಯರಿದ್ದಂತೆ, ಅವರು ಗುಜರಾತಿನ ಮುಖ್ಯಮಂತ್ರಿ ಯಾದಾಗಿನಿಂದ ಇಂದಿನವರೆಗೆ ಒಂದು ದಿನವೂ ರಜೆ ತೆಗೆದು ಕೊಂಡಿಲ್ಲ, ದಿನದ ಹದಿನೆಂಟು ತಾಸು ದೇಶಕ್ಕಾಗಿ ಶ್ರಮಿಸುವ ಅವರ ಕಾರ್ಯ ವೈಖರಿ, ಶ್ರದ್ಧೆ ಯಾರಿಂದಲೂ ಸಾಧ್ಯವಿಲ್ಲ. ಇಂತಹ ಅಪ್ರತಿಮ ದೇಶಭಕ್ತ ಪ್ರಧಾನಿ ಯನ್ನು ಪಡೆದಿರುವ ನಾವೇ ಧನ್ಯರು. ಪ್ರಕ್ಷಬ್ದ ವಾತಾವರಣ ಎದುರಿಸುತ್ತಿರುವ ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಭಾರತದ ರಕ್ಷಣೆ, ಪ್ರಗತಿ ಮೋದಿಯವರಿಂದ ಮಾತ್ರ ಸಾಧ್ಯ, ಮೋದಿಯವರನ್ನು ಹೊರತು ಪಡಿಸಿ ದೇಶವನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸಬಲ್ಲ ಶಕ್ತಿ, ಸಾಮರ್ಥ್ಯ, ಧೈರ್ಯ, ಚಾಣಾಕ್ಷತೆ, ಚಾಕಚಕ್ಯತೆ ನಮ್ಮಲ್ಲಿ ಅತಿ ವಿರಳ, ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗುವತ್ತ ಹೆಜ್ಜೆ ಹಾಕಿರುವುದು ನಮ್ಮೆಲ್ಲರ ಹೆಮ್ಮೆ, ಇಂತಹ ವಿಶ್ವ ನಾಯಕನನ್ನು ಜತನದಿಂದ ಗೌರವಿಸುವುದು ದೇಶವಾಸಿಗಳಾದ ನಮ್ಮೆಲ್ಲರ ಕರ್ತವ್ಯವೆಂದು ಭಾವಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಯಲಹಂಕ ನಗರ ಮಂಡಲ ಬಿಜೆಪಿ ಪ್ರಭಾರ ಅಧ್ಯಕ್ಷ ಮುರಾರಿರಾಮು, ಪ್ರಧಾನ ಕಾರ್ಯದರ್ಶಿ ಗಳಾದ ವಿ.ಪವನ್ ಕುಮಾರ್, ಈಶ್ವರ್, ಬಿಜೆಪಿ ಮುಖಂಡರಾದ ಡಾ.ಶಶಿಕುಮಾರ್, ಚೊಕ್ಕನಹಳ್ಳಿ ವೆಂಕಟೇಶ್, ಎ.ಸಿ.ಮುನಿಕೃಷ್ಣಪ್ಪ, ಮುನಿರಾಜು, ಮಧುಸೂದನ್, ವೈ.ಜಿ.ವಸಂತ್, ವಾರ್ಡ್ ಬಿಜೆಪಿ ಅಧ್ಯಕ್ಷರಾದ ನರಸಿಂಹಮೂರ್ತಿ, ವಿ.ವಿ.ರಾಮಮೂರ್ತಿ, ನಾರಾಯಣಸ್ವಾಮಿ, ರಾಜಣ್ಣ, ಎಸ್ಸಿ ಮೋರ್ಚಾ ಅಧ್ಯಕ್ಷ ಕೆ.ಎಂ.ಮುರಳಿ, ಯುವ ಮೋರ್ಚಾ ಅಧ್ಯಕ್ಷ ಎಚ್.ಎಸ್.ಕಿರಣ್, ಅಕ್ಷತ್, ಮಹಿಳಾ ಮೋರ್ಚಾದ ಬೃಂದಾ ವೀರೇಶ್, ಗೌರಿ ಸೇರಿದಂತೆ ನೂರಾರು ಬಿಜೆಪಿ ಕಾರ್ತಕರ್ತರಿದ್ದರು.
ಬಾಕ್ಸ್ :
ಸೇವಾ ಪಾಕ್ಷಿಕ್ ಅಭಿಯಾಮದ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳು :
ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನಾಚರಣೆ ಪ್ರಯುಕ್ತ ಶಾಸಕ ಎಸ್ ಆರ್ ವಿಶ್ವನಾಥ್ ಅವರ ನೇತೃತ್ವದಲ್ಲಿ ಯಲಹಂಕ ನಗರ ಮಂಡಲ ವತಿಯಿಂದ ಆಯೋಜಿಸಿದ್ದ ಸೇವಾ ಪಾಕ್ಷಿಕ್ ಅಭಿಯಾನದ ಅಡಿಯಲ್ಲಿ ಕಿಲ್ ಬಿಲ್ ಅಭಿಯಾನದ ಮೂಲಕ ಗೋಡೆ, ಸೇತುವೆ, ಮರಗಳ ಮೇಲೆ ಅಂಟಿಸಿದ್ದ ಬಿತ್ತಿಪತ್ರಗಳನ್ನು ತೆಗೆಯುವುದು, ವೀರ ಸಾವರ್ಕರ್ ಮೇಲ್ಸೇತುವೆ ಬಳಿ ಸ್ವಚ್ಛತಾ ಕಾರ್ಯ, ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಯುವ ಮೋರ್ಚಾ ವತಿಯಿಂದ ರಕ್ತದಾನ ಶಿಬಿರ ನಡೆಸಿ ಸುಮಾರು 87 ಯುನಿಟ್ ರಕ್ತ ಸಂಗ್ರಹಣೆ ಮುಂತಾದ ಸರಣಿ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಯಿತು. ಸೇವಾ ಪಾಕ್ಷಿಕ್ ಅಭಿಯಾನದ ಅಂಗವಾಗಿ ಮುಂದಿನ ಭಾನುವಾರ ಬೆಳಿಗ್ಗೆ ಶೇಷಾದ್ರಿಪುರ ಕಾಲೇಜಿನಿಂದ ಮೇಜರ್ ಅಕ್ಷಯ್ ಗಿರೀಶ್ ಮಾರ್ಗವಾಗಿ ಅಳ್ಳಾಳಸಂದ್ರ ಕೆರೆಯ ಆವರಣದಲ್ಲಿ ಬೃಹತ್ ವಾಕಥಾನ್ ಆಯೋಜಿಸಲಾಗಿದೆ.
