

ಉತ್ತಮ ಶಿಕ್ಷಕಿ ಪ್ರಶಸ್ತಿ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಹಾಗೂ ಕಾಲೇಜು ಒಕ್ಕೂಟ (KASMO) ಗುರು ನಮನ ಕಾರ್ಯಕ್ರಮವನ್ನು 11.9.2025 ಗುರುವಾರದಂದು ಯಲಹಂಕದ B.R ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಅವಿರತ ಸೇವೆ ಸಲ್ಲಿಸಿದ ಶಿಕ್ಷಕರಿಗೆ 2025 ನೇ ಸಾಲಿನ ಉತ್ತಮ ಶಿಕ್ಷಕ / ಶಿಕ್ಷಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಪ್ರಶಸ್ತಿಗೆ ಕೋಗಿಲಿನ ಆಕ್ಸ್ಫರ್ಡ್ ಶಾಲೆ ಹಾಗೂ ಸಂಯುಕ್ತ ಪದವಿಪೂರ್ವ ಕಾಲೇಜಿನ ಶಿಕ್ಷಣ ಸಂಸ್ಥೆ ಯ ಇಬ್ಬರು ಶಿಕ್ಷಕರು ಶ್ರೀಮತಿ ಎ.ವಿ. ಚಂದ್ರಕಲಾ ಹಾಗೂ ಶ್ರೀಮತಿ ಉಮೆರಾ ತಬಸುಂ ಆಯ್ಕೆಯಾಗಿದ್ದು, ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಪಡೆದು ಕೊಂಡಿರುತ್ತಾರೆ.
ಈ ಇಬ್ಬರು ಶಿಕ್ಷಕರಿಗೂ ಸಂಸ್ಥೆಯ ಪರವಾಗಿ ಅಭಿನಂದನೆಗಳು.
