ಸಸಿ ನೆಡುವ ಮೂಲಕ ಪರಿಸರ ಸ್ನೇಹಿಯಾಗಿ ಜನ್ಮದಿನ ಆಚರಿಸಿಕೊಂಡ ಬಿ.ನಾಗರಾಜ್ ಬಾಬು :
ಬ್ಯಾಟರಾಯನಪುರ : ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರು, ಬೆಟ್ಟಹಲಸೂರು ಗ್ರಾಮದ ಮುಖಂಡರಾದ ಬಿ.ನಾಗರಾಜ್ ಬಾಬು ಅವರು ಗ್ರಾಮದ ಮುಖಂಡರ ಸಹಯೋಗದೊಂದಿಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸೇರಿದ ಜಾಗದಲ್ಲಿ ಸಸಿ ನೆಡುವ ಮೂಲಕ ತಮ್ಮ ಜನ್ಮ ದಿನಾಚರಣೆಯನ್ನು ಪರಿಸರ ಸ್ನೇಹಿಯಾಗಿ ವಿಶೇಷ ರೀತಿಯಲ್ಲಿ ಆಚರಿಸಿಕೊಂಡರು.
55ನೇ ಜನ್ಮ ದಿನಾಚರಣೆ ಅಂಗವಾಗಿ ಪ್ರಾಥಮಿಕ ಶಾಲೆಗೆ ಸೇರಿದ ಜಾಗದಲ್ಲಿ 55 ಸಸಿಗಳನ್ನು ನೆಡುವುದು, ಬೆಟ್ಟಹಲಸೂರು ಗ್ರಾಮದ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷಪೂಜೆ, ಗ್ರಾಮಸ್ಥರಿಗೆ ಉಪಹಾರ ವ್ಯವಸ್ಥೆ, ರಾಕುಂ ಶಾಲೆಯ ಸುಮಾರು ಒಂದೂವರೆ ಸಾವಿರ ಅಂಧ ಮಕ್ಕಳಿಗೆ ಭೋಜನ ವ್ಯವಸ್ಥೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳಿಂದಾಗಿ ಬಿ.ನಾಗರಾಜ್ ಬಾಬು ಅವರ ಜನ್ಮದಿನಾಚರಣೆ ಕಾರ್ಯಕ್ರಮ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು.
ಜನ್ಮದಿನಾಚರಣೆಯ ಈ ಕಾರ್ಯಕ್ರಮದಲ್ಲಿ ಬೆಟ್ಟಹಲಸೂರು ಗ್ರಾ.ಪಂ.ಅಧ್ಯಕ್ಷರು, ಬಿ.ನಾಗರಾಜ್ ಬಾಬು ಅವರ ಧರ್ಮಪತ್ನಿ ಹೇಮಾವತಿ ನಾಗರಾಜ್ ಬಾಬು, ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ಗ್ರಾ.ಪಂ.ಮಾಜಿ ಅಧ್ಯಕ್ಷ ಬಿ.ಎಸ್.ಅನಿಲ್ ಕುಮಾರ್, ಬಿಜೆಪಿ ಮುಖಂಡ ಟಿ.ಪಿ.ಪ್ರಕಾಶ್, ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಬೆಟ್ಟಹಲಸೂರು ನಂಜುಂಡಪ್ಪ, ಹಸಿರೇ ಉಸಿರು ಟ್ರಸ್ಟ್ ನ ಸಂಸ್ಥಾಪಲ ಬೆಟ್ಟಹಲಸೂರು ಶ್ರೀನಿವಾಸಮೂರ್ತಿ, ಮುಖಂಡರಾದ ಬಿ.ನಾರಾಯಣಪ್ಪ, ಬಿ.ಬಿ.ಉಮೇಶ್, ಬಿ.ಕೆ.ರವೀಂದ್ರನಾಥಗೌಡ, ಗುರುಪ್ರಸಾದ್, ಜೀರಿಗೆ ಬಾಬು, ಬಿ.ಎಸ್.ಬಸವರಾಜು, ಮಹದೇವ ಒಡೆಯರ್, ಮಲ್ಲೇಶ್, ಮಲ್ಲಿಕಾರ್ಜುನ, ಬಸಯ್ಯ, ಬಿ.ಟಿ.ಜಗದೀಶ್, ಗ್ರಾ.ಪಂ.ಸದಸ್ಯರಾದ ಬಿ.ಆರ್.ರಾಮಾಂಜಿನಿ, ತುಳಸಮ್ಮ ವೆಂಕಟರಮಣಪ್ಪ, ಮಮತಾ ಪ್ರಶಾಂತ್, ಸಾವಿತ್ರಮ್ಮ ಮುನಿರಾಜು, ತಿಮ್ಮರಾಜು, ಈರಣ್ಣ, ಮಹೇಂದ್ರ, ಕುಮಾರ್, ಜಯಣ್ಣ, ವೈಭವ್, ನವೀನ್, ಚಂದ್ರು, ಗಂಗಾಧರ್, ಲೋಕೇಶ್, ತರಹುಣಸೆ ರಾಜಣ್ಣ, ಆಂಜಿನಪ್ಪ, ಅಗ್ರಹಾರ ಪಟಾಲಪ್ಪ ಸೇರಿದಂತೆ ಬೆಟ್ಟಹಲಸೂರು ಗ್ರಾಮದ ಹಲವು ಮುಖಂಡರು, ಬಿ.ನಾಗರಾಜ್ ಬಾಬು ಅವರ ಸ್ನೇಹಿತರು, ಹಿತೈಷಿಗಳು, ಬಂಧು-ಬಾಂಧವರಿದ್ದರು.
ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ನಂಜುಂಡಪ್ಪ ಅವರು ಜನ್ಮದಿನಾಚರಣೆ ಯನ್ನು‌ ಆಡಂಬರದ ರೀತಿಯಲ್ಲಿ ‌ಆಚರಿಸಿಕೊಳ್ಳುವುದಕ್ಕಿಂತ ನಾಗರಾಜ್ ಬಾಬು ಅವರ ರೀತಿಯಲ್ಲಿ ಪರಿಸರ ಸ್ನೇಹಿಯಾಗಿ‌ ಆಚರಿಸಿಕೊಳ್ಳುವ ಮೂಲಕ ಪರಿಸರ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು‌ ಸಲಹೆ ನೀಡಿದರು.

Leave a Reply

Your email address will not be published. Required fields are marked *