🚩 ಸ್ವಚ್ಛತಾ ಹಿ ಸೇವಾ – 2025 🚩
“ಒಂದು ದಿನ, ಒಂದು ಗಂಟೆ, ಒಂದಾಗಿ” ಶ್ರಮದಾನ ಕಾರ್ಯಕ್ರಮ.

ಪಂಡಿತ ದೀನದಯಾಳ ಉಪಾಧ್ಯಾಯರ ಜಯಂತಿಯ ಅಂಗವಾಗಿ, ದೇಶವ್ಯಾಪಿ ಸ್ವಚ್ಛತಾ ಹಿ ಸೇವಾ ಅಭಿಯಾನದ (17 ಸೆಪ್ಟೆಂಬರ್ – 02 ಅಕ್ಟೋಬರ್ 2025) ಅಂಗವಾಗಿ, 25/09/2025 ರಂದು ಬೆಳಿಗ್ಗೆ 08:00 ಗಂಟೆಯಿಂದ 09:00 ಗಂಟೆಯವರೆಗೆ ಸಮೂಹ ಕೇಂದ್ರ CRPF ಬೆಂಗಳೂರು ವತಿಯಿಂದ ಹರೋಹಳ್ಳಿ ಕೆರೆಯಲ್ಲಿ ಶ್ರಮದಾನ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಅಭಿಯಾನವು ಮಹಾತ್ಮ ಗಾಂಧೀಜಿಯವರ ಸ್ವಚ್ಛತಾ ಕನಸಿಗೆ ನಮನವಾಗಿ ರಾಷ್ಟ್ರದ ಒಕ್ಕೂಟದ ಪ್ರತಿಜ್ಞೆಯನ್ನು ಪ್ರತಿಬಿಂಬಿಸುತ್ತದೆ.

ಈ ಕಾರ್ಯಕ್ರಮದಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರದ ಗೌರವಾನ್ವಿತ ಶಾಸಕರಾದ ಶ್ರೀ ಎಸ್.ಆರ್. ವಿಶ್ವನಾಥರವರು ಅತಿಥಿಗಳಾಗಿ ಭಾಗವಹಿಸಿ, ಈ ದಿನದ ಮಹತ್ವವನ್ನು ಹಾಗೂ ರಾಷ್ಟ್ರ ನಿರ್ಮಾಣದಲ್ಲಿ CRPFನ ಪಾತ್ರವನ್ನು ವಿವರಿಸಿದರು. ಅವರು ಹೇಳಿದರು: “ನಕ್ಸಲ, ಉಗ್ರ, ಅತಿಕ್ರಮಣ ವಿರುದ್ಧ ದೇಶದ ಒಳಭಾಗದಲ್ಲಿ ಭದ್ರತೆಯನ್ನು ಒದಗಿಸುವ ಜವಾಬ್ದಾರಿಯ ಜೊತೆಗೆ, ಸಮಾಜಮುಖಿ ಸೇವೆಯಲ್ಲಿಯೂ CRPF ಸದಾ ಮುಂದಾಗಿದೆ. ಈ ಪಡೆ ದೇಶದ ಅಗತ್ಯತೆಗೆ ತಕ್ಕಂತೆ ಗನ್ ಹಿಡಿಯಲು ಸಿದ್ಧ ಅಥವಾ ಸ್ವಚ್ಛತೆಗೆ ಪೊರಕೆ ಹಿಡಿಯಲು ಸಿದ್ಧವಾಗಿರುತ್ತದೆ.” ಎಂದು ಕೊಂಡಾಡಿದರು.

ಅವರು ಪ್ರಧಾನ ಮಂತ್ರಿಗಳ “ಏಕ್ ಪೇಡ್ ಮಾ ಕೆ ನಾಮ್ ಪೇ” (ತಾಯಿಯ ಹೆಸರಿನಲ್ಲಿ ಒಂದು ಮರ ನೆಡುವುದು) ಅಭಿಯಾನಕ್ಕೆ ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಒಂದು ಮರ ನೆಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ:

ಶ್ರೀ ಅಣ್ಣಪ್ಪ, ಐಪಿಎಸ್, ಡಿಐಜಿ, ಕೆಕೆ ಸೆಕ್ಟರ್, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಅತಿಥಿಗಳಿಗೆ, ವಿದ್ಯಾರ್ಥಿಳಿಗೆ ಹಾಗೂ ಸಿಬ್ಬಂದಿಗೆ ಧನ್ಯವಾದಗಳನ್ನು ತಿಳಿಸಿದರು.

ಶ್ರೀ ಪದ್ಮಕುಮಾರ್, ಡಿಐಜಿ, ಸಮೂಹ ಕೇಂದ್ರ CRPF ಬೆಂಗಳೂರು, ಸಾರ್ವಜನಿಕರಿಗೆ ಸ್ವಚ್ಛತಾ ಪ್ರತಿಜ್ಞಾವಚನ ಬೋಧಿಸಿ, ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಲು ಹಾಗೂ ಪ್ರತಿ ವರ್ಷ ಕನಿಷ್ಠ 100 ಗಂಟೆಗಳ ಕಾಲ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಕೋರಿದರು.

ಈ ಸ್ವಚ್ಛತಾ ಶ್ರಮದಾನದಲ್ಲಿ ಕೆಕೆ ಸೆಕ್ಟರ್, ರೇಂಜ್ ಬೆಂಗಳೂರು, ಸಮೂಹ ಕೇಂದ್ರ CRPF ಬೆಂಗಳೂರು, CH ಬೆಂಗಳೂರು, 247 Vs Bn, 240 M Bn, CIT ಬೆಂಗಳೂರು, C/02 ಸಿಗ್ನಲ್ ಕಂಪನಿ, D/97 RAF Coy ಘಟಕಗಳ ಸಿಬಂದಿ ಹಾಗೂ NMIT ಮತ್ತು SVIT ನ NCC ವಿದ್ಯಾರ್ಥಿಗಳು, KV CRPF ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್‌ಗಳು ಹಾಗೂ ಅವರ ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಿದರು.

ಹರೋಹಳ್ಳಿ ಗ್ರಾಮದಲ್ಲಿ CRPF ಸಿಬ್ಬಂದಿ, NCC ವಿದ್ಯಾರ್ಥಿಗಳು, ಸ್ಕೌಟ್ಸ್, ಗೈಡ್ಸ್ ಮತ್ತು ಶಾಲಾ ಮಕ್ಕಳೊಂದಿಗೆ ಸ್ವಚ್ಛತಾ ಜಾಥಾ ಹಮ್ಮಿಕೊಳ್ಳಲಾಯಿತು. ಗ್ರಾಮಸ್ಥರಲ್ಲಿ ಸ್ವಚ್ಛತೆ, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ ಕುರಿತ ಜಾಗೃತಿ ಮೂಡಿಸಲಾಯಿತು.

ಈ ಕಾರ್ಯಕ್ರಮವು CRPF ನ ಎರಡು ಮುಖಗಳ ಬದ್ಧತೆಯನ್ನು ಮರುಸ್ಥಾಪಿಸಿತು — ರಾಷ್ಟ್ರದ ಆಂತರಿಕ ಭದ್ರತೆಗಾಗಿ ಮುಂಚೂಣಿಯ ಪಡೆ ಆಗಿರುವುದರ ಜೊತೆಗೆ, ರಾಷ್ಟ್ರ ನಿರ್ಮಾಣ ಹಾಗೂ ಸಮಾಜಮುಖಿ ಸೇವೆಯಲ್ಲಿಯು ಪಾಲ್ಗೊಳ್ಳುವ ಪಡೆ ಎಂಬ ಸಂದೇಶವನ್ನು ನೀಡಿತು. ಇದು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳ ದೃಷ್ಟಿಕೋನಕ್ಕೆ ಅನುಗುಣವಾಗಿದೆ.

Leave a Reply

Your email address will not be published. Required fields are marked *