




‘ಪಶು ಜನಧನ್ ಯೋಜನೆ’ಯಿಂದ ದೇಶದ ಕೋಟ್ಯಾಂತರ ರೈತರಿಗೆ ಪ್ರಯೋಜನವಾಗಲಿದೆ : ಸತೀಶ್ ಕಡತನಮಲೆ
ಯಲಹಂಕ : ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೊಳಿಸಿರುವ ‘ಪಶು ಜನಧನ್’ ಯೋಜನೆಯಿಂದ ದೇಶದ ಕೋಟ್ಯಾಂತರ ರೈತರಿಗೆ ಪ್ರಯೋಜನವಾಗಲಿದೆ ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟ(ಬಮೂಲ್)ದ ನಿರ್ದೇಶಕ ಸತೀಶ್ ಕಡತನಮಲೆ ವಿಶ್ವಾಸ ವ್ಯಕ್ತಪಡಿಸಿದರು.
ಯಲಹಂಕ ಕ್ಷೇತ್ರದ ರಾಜಾನುಕುಂಟೆ ಯಲ್ಲಿರುವ ಬೆಂಗಳೂರು ಹಾಲು ಒಕ್ಕೂಟದ ಶಿಬಿರ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮರಣ ಹೊಂದಿದ ಮಿಶ್ರತಳಿ ಪಡ್ಡೆ ಹಸುಗಳು ಮತ್ತು ಮರಣ ಹೊಂದಿದ ಹಾಲು ಉತ್ಪಾದಕ ರೈತರ ಕುಟುಂಬದ ಸದಸ್ಯರಿಗೆ ಪರಿಹಾರ ಧನದ ಡಿ.ಡಿ. ವಿತರಣೆ ಮಾಡಿ ಮಾತನಾಡಿದ ಅವರು ‘ದೇಶದ ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಪ್ರಧಾನಿ ಯವರನ್ನು ಪಡೆದ ನಾವು ಧನ್ಯರು. ಜನಧನ್ ಯೋಜನೆಯನ್ನು ಇದೀಗ ಪಶು ಸಾಂಗೋಪನೆ ವಲಯಕ್ಕೆ ವಿಸ್ತರಿಸಿರುವ ಪ್ರಧಾನ ಮಂತ್ರಿಗಳ ಕ್ರಮ ಪ್ರಶಂಸಾರ್ಹವಾದುದು. ಈ ಯೋಜನೆಯಿಂದ ದೇಶದ ಕೋಟ್ಯಾಂತರ ಹಾಲು ಉತ್ಪಾದಕ ರೈತರಿಗೆ ಪ್ರಯೋಜನವಾಗಲಿದೆ. ಬೆಂಗಳೂರು ಸಹಕಾರ ಹಾಲು ಒಕ್ಕೂಟದಿಂದ ಹಾಲು ಉತ್ಪಾದಕ ರೈತರ ಮನೆಗಳಲ್ಲಿ ಅನಾರೋಗ್ಯಕ್ಕೆ ತುತ್ತಾದವರಿಗೆ ವಿಶೇಷ ಪರಿಹಾರ ಧನವಾಗಿ ಕೂಡಲೇ 25 ಸಾವಿರ ರು.ಗಳನ್ನು ನೀಡಲಾಗುವುದು, ಇದರ ಅಂಗವಾಗಿ ಇಂದು ಸುಮಾರು 9 ಜನ ರೈತರಿಗೆ ವಿಶೇಷ ಪರಿಹಾರ ಧನ ವಿತರಿಸಲಾಗಿದೆ. ಅಕಾಲಿಕ ಮರಣಕ್ಕೆ ತುತ್ತಾದ ಹಾಲು ಉತ್ಪಾದಕ ರೈತರ ಕುಟುಂಬದ ಸದಸ್ಯರಿಗೆ ಒಂದು ಲಕ್ಷ ರು.ಗಳ ಪರಿಹಾರ ಧನ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ರೈತರು ಸತ್ತರೆ ಅವರ ಕುಟುಂಬದ ಸದಸ್ಯರಿಗೆ 30 ಸಾವಿರ ರು.ಪರಿಹಾರ ಧನ ವಿತರಿಸಲಾಗುವುದು. ವಿಮೆ ಹೊಂದಿರುವ ರಾಸುಗಳು ಸತ್ತರೆ 70 ಸಾವಿರದಿಂದ 1 ಲಕ್ಷ ರು.ಗಳವರೆಗೆ ಪರಿಹಾರ ಧನ ನೀಡಲಾಗುವುದು,, ವಿಮೆ ಹೊಂದಿರದ ರಾಸುಗಳು ಮರಣ ಹೊಂದಿದ ರೈತರ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ 10 ಸಾವಿರ ರು.ಗಳನ್ನು ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಶಿಬಿರ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಹಾಲು ಉತ್ಪಾದಕ ರೈತರಿದ್ದರು.
ಸುದ್ದಿ ಹಾಗೂ ಜಾಹಿರಾತುಗಳಿಗೆ ಸಂಪರ್ಕಿಸಿ
R Hanumanthau kogilu layout Yelahanka Bangalore Karnataka
9845085793
7349337989
