






ಬ್ಯಾಟರಾಯನಪುರ : ಬೆಂಗಳೂರು ಉತ್ತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕ್ಷೇತ್ರದ ಜಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕಾರಿಣಿ ಸಭೆಯಲ್ಲಿ ಮುಂಬರುವ ಚುನಾವಣೆ ಗಾಗಿ ಪಕ್ಷ ಸಂಘಟನೆ, ಸರ್ಕಾರದ ಗ್ಯಾರೆಂಟಿ ಯೋಜನೆ ಬಗ್ಗೆ ಜನಜಾಗೃತಿ ಮೂಡಿಸುವುದು, ಪಕ್ಷದ ಕಾರ್ಯಕ್ರಮಗಳನ್ನು ಜನತೆ ತಿಳಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.
ಇದೇ ವೇಳೆ ಭಾರತೀಯ ಯುವ ಕಾಂಗ್ರೆಸ್(ಐವೈಸಿ)ನ ಆ್ಯಪ್ ಬಳಕೆ ಕುರಿತು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಆ್ಯಪ್ ಬಳಕೆ, ಅದರಲ್ಲಿ ಪಕ್ಷದ ಕಾರ್ಯ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಅಪ್ ಲೋಡ್ ಮಾಡುವ ರೀತಿ ಸೇರಿದಂತೆ ಹಲವು ವಿಷಯಗಳ ಕುರಿತು ಸವಿವರವಾದ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬೆಂ.ಉತ್ತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗೌಡ, ಉಪಾಧ್ಯಕ್ಷ ಪ್ರದೀಪ್ ಎಂ.(ಮುತ್ತು), ಪ್ರಧಾನ ಕಾರ್ಯದರ್ಶಿ ರಂಜಿತ್, ಅಫ್ರಿನಾ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ದಿವ್ಯ ಆರ್.ಕೆ., ಕಾರ್ಯದರ್ಶಿ ಅನಿಲ್, ಪೃಥ್ವಿ, ಬೆಂ. ಉತ್ತರ ಜಿಲ್ಲಾ ಉಸ್ತುವಾರಿ ಪೂಜಾ ಯಾದವ್, ಜಾಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಧುಗೌಡ, ಬ್ಯಾಟರಾಯನಪುರ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ರಾಜನ್, ಉಪಾಧ್ಯಕ್ಷರಾದ ಶಿವರಾಜ್ ಸಿ.ಎ., ಅಭಿ, ವಿನಯ್ ಕುಮಾರ್ ವಿ., ಬ್ಯಾಟರಾಯನಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್ ಗೌಡ ಸೇರಿದಂತೆ ಬೆಂ ಉತ್ತರ ಜಿಲ್ಲಾ ವ್ಯಾಪ್ತಿಯ ವಿವಿಧ ಬ್ಲಾಕ್ ಗಳ ಪದಾಧಿಕಾರಿಗಳಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthau kogilu layout Yelahanka Bangalore Karnataka
9845085793. 7349337989
