


ಎಸ್ ಆರ್ ವಿಶ್ವನಾಥ್ ಅವರಿಂದ ರಾಜ್ಯದಲ್ಲೇ ಮೊದಲ ಬಾರಿಗೆ ವಿಶಿಷ್ಟ ಅಭಿಯಾನ :
ಯಲಹಂಕ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿಯ ಪ್ರಯುಕ್ತ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ರಾಜ್ಯದಲ್ಲೇ ಮೊದಲ ಬಾರಿಗೆ ವಿನೂತನ ಅಭಿಯಾನ ಒಂದಕ್ಕೆ ಮುಂದಾಗಿದ್ದು, ಯಲಹಂಕ ಕ್ಷೇತ್ರದ ಪ್ರತಿ ಬಿಜೆಪಿ ಕಾರ್ಯಕರ್ತರು ಆರ್.ಎಸ್.ಎಸ್ ನ ಧ್ಯೇಯಗೀತೆ “ನಮಸ್ತೆ ಸದಾ ವತ್ಸಲೇ ಮಾತೃಭೂಮಿ” ಗೀತೆಯನ್ನು ರಿಂಗ್ ಟೋನ್ ಹಾಗೂ ಕಾಲರ್ ಟ್ಯೂನ್‌ಗೆ ಹಾಕಿಕೊಳ್ಳಬೇಕಾಗಿ ಕಾರ್ಯಕರ್ತರಿಗೆ ಮನವಿಪೂರ್ವಕವಾದ ಕರೆ ನೀಡಿದ್ದು, ಅವರ ಮನವಿಗೆ ಓಗೊಟ್ಟಿರುವ ಯಲಹಂಕ ಕ್ಷೇತ್ರದ ಪ್ರತಿ ಬಿಜೆಪಿ ಕಾರ್ಯಕರ್ತರು “ನಮಸ್ತೆ ಸದಾ ವತ್ಸಲೇ ಮಾತೃಭೂಮಿ” ಗೀತೆಯನ್ನು ರಿಂಗ್ ಟೋನ್ ಹಾಗೂ ಕಾಲರ್ ಟ್ಯೂನ್ ಹಾಕಿಕೊಳ್ಳುವ ಮೂಲಕ ವಿನೂತನ ಅಭಿಯಾನ ಕೈಗೊಂಡಿದ್ದಾರೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್ ಆರ್ ವಿಶ್ವನಾಥ್ ಅವರು ‘ಆರ್ ಎಸ್ ಎಸ್ ಅನ್ನು ಬ್ಯಾನ್ ಮಾಡಬೇಕು, ತಮಿಳು ನಾಡಿನ ಮಾದರಿಯಲ್ಲಿ ಆರ್ ಎಸ್ ಎಸ್ ಗೆ ಅಂಕುಶ ಹಾಕಬೇಕು ಎಂಬ ಕುಹಕದ ಮಾತುಗಳನ್ನಾಡಿರುವ ಸಚಿವ ಪ್ರಿಯಾಂಕ್ ಖರ್ಗೆಯವರು ಆರ್ ಎಸ್ ಎಸ್ ಬ್ಯಾನ್ ಮಾಡುವುದಿರಲಿ, ನಮ್ಮ ‘ನಮಸ್ತೇ ವತ್ಸಲೇ ಮಾತೃಭೂಮಿ’ ರಿಂಗ್ ಟೋನ್ ಮತ್ತು ಕಾಲರ್ ಟ್ಯೂನ್, ಅನ್ನು ಬ್ಯಾನ್ ಮಾಡಲಿ ಸಾಕು ನೋಡೋಣ ಎಂದು ಪ್ರಿಯಾಂಕ್ ಖರ್ಗೆ ಅವರಿಗೆ ಸವಾಲೆಸೆದಿದ್ದಾರೆ.
