



ಯಲಹಂಕ : ಮೋದಿಯವರ ಜನ್ಮದಿನದ ಪ್ರಯುಕ್ತ ಸೇವಾ ಪಾಕ್ಷಿಕ್ ಅಭಿಯಾನದ ಅಡಿಯಲ್ಲಿ ತಾಯಿಯ ಹೆಸರಲ್ಲಿ ಒಂದು ಸಸಿ ನೆಡುವ ಕಾರ್ಯಕ್ರಮದ ಅಂಗವಾಗಿ ಯಲಹಂಕ ಗ್ರಾಮಾಂತರ ಮಂಡಲ ರೈತ ಮೋರ್ಚಾ, ಓಬಿಸಿ ಮೋರ್ಚಾ ಮತ್ತು ಎಸ್ಸಿ ಮೋರ್ಚಾ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಅವರ ನೇತೃತ್ವದಲ್ಲಿ ಕ್ಷೇತ್ರದ ಹೆಸರಘಟ್ಟ ಜಲಾಶಯದ ಬಳಿ 500 ಸಸಿ ನೆಡುವ ಮೂಲಕ ನರೇಂದ್ರ ಮೋದಿಯವರ ಜನ್ಮದಿನ ಆಚರಿಸಲಾಯಿತು.
ನಂತರ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಮಾತನಾಡಿ ‘ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಅವರ ಆಶಯದಂತೆ ಸೇವಾ ಪಾಕ್ಷಿಕ್ ಅಡಿಯಲ್ಲಿ ತಾಯಿಯ ಹೆಸರಲ್ಲಿ ಒಂದು ಸಸಿ ನೆಡುವ ಕಾರ್ಯಕ್ರಮದ ಮೂಲಕ ಇಂದು ಹೆಸರಘಟ್ಟ ಜಲಾಶಯದ ಬಳಿ 500 ಸಸಿಗಳನ್ನು ನೆಡುವ ಮೂಲಕ ನರೇಂದ್ರ ಮೋದಿಯವರ ಜನ್ಮದಿನ ಆಚರಿಸಲಾಗಿದ್ದು, ಸಸಿ ನೆಡುವ ಕಾರ್ಯಕ್ರಮ ಯಲಹಂಕ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ. ಪರಿಸರ ಕಾಳಜಿ ಎಂಬುದು ಒಂದು ದಿನದ ಕಾರ್ಯಕ್ರಮವಲ್ಲ, ಅದು ನಿತ್ಯನಿರಂತರವಾಗಬೇಕು ಎಂದರು.
2008ರಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅರ್ಕಾವತಿ ನದಿ ಪುನಶ್ಚೇತನ ಅಭಿಯಾನದ ಕೈಗೊಂಡು ಹೆಸರಘಟ್ಟ ಜಲಾಶಯ ಮತ್ತು ಜಲಾಶಯಕ್ಕೆ ಹರಿದು ಬರುವ ಜಲ ಮೂಲಗಳನ್ನು ಸ್ವಚ್ಛಗೊಳಿಸಿದ ಪರಿಣಾಮ ದಿಂದಾಗಿ ಅಂದಿನಿಂದ ಇಂದಿನವರೆಗೂ ಹೆಸರಘಟ್ಟ ಜಲಾಶಯದಲ್ಲಿ ವರ್ಷಪೂರ್ತಿ ನೀರು ಇರುವಂತಾಗಿದೆ. ಇಂತಹ ಪರಿಸರ ಸ್ನೇಹಿ ಕಾರ್ಯಕ್ಕೆ ಅಗತ್ಯ ಅನುದಾನ ನೀಡಿ ಸಹಕರಿಸಿದ ಯಡಿಯೂರಪ್ಪ ಅವರ ಕೊಡುಗೆಯನ್ನು ಇಂತಹ ಶುಭ ಸಂದರ್ಭದಲ್ಲಿ ಸ್ಮರಿಸಬೇಕು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಯಲಹಂಕ ಗ್ರಾ.ಮಂಡಲ ಬಿಜೆಪಿ ಅಧ್ಯಕ್ಷ ಎಂ.ಜಿ.ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ವಿಶ್ವನಾಥಪುರ ಮಂಜುನಾಥ್, ಸೋಮಶೇಖರ್, ಜಿ.ಪಂ.ಮಾಜಿ ಅಧ್ಯಕ್ಷ ಚೊಕ್ಕನಹಳ್ಳಿ ವೆಂಕಟೇಶ್, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಬೆಂ.ಉತ್ತರ ಜಿಲ್ಲಾಧ್ಯಕ್ಷ ಅಧ್ಯಕ್ಷ ಜಿ.ಜೆ.ಮೂರ್ತಿ, ಯಲಹಂಕ ಗ್ರಾ.ಮಂಡಲ ಅಧ್ಯಕ್ಷ ಎಚ್.ಸಿ.ರಾಜೇಶ್, ಅನಿಲ್, ಓಬಿಸಿ ಮೋರ್ಚಾ ಅಧ್ಯಕ್ಷ ಎಂ.ಬಿ.ಕೃಷ್ಣಯ್ಯ, ಉಪಾಧ್ಯಕ್ಷರಾದ ಬಸವೇಗೌಡ, ಮಲ್ಲಿಕಾರ್ಜುನ್, ಸುರೇಶ್, ಎಚ್.ಎಸ್.ಪ್ರಕಾಶ್, ಓಬಿಸಿ ಮೋರ್ಚಾ ಹೆಸರಘಟ್ಟ ಹೋಬಳಿ ಅಧ್ಯಕ್ಷ ಟಿ.ರಮೇಶ್, ಮುನಿರಾಜು, ಶ್ರೀನಿವಾಸ್, ಕೆ.ಬಾಬು, ಎಸ್ಸಿ ಮೋರ್ಚಾ ಅಧ್ಯಕ್ಷ ಬಿ.ಶ್ರೀನಿವಾಸಯ್ಯ, ಮಾಜಿ ಅಧ್ಯಕ್ಷ ವೆಂಕಟೇಶ್, ಹೋಬಳಿ ಅಧ್ಯಕ್ಷರಾದ ವೀರಸಾಗರ ನಾಗೇಶ್, ಗಂಗಾಧರ್, ಪ್ರಧಾನ ಕಾರ್ಯದರ್ಶಿಗಳಾದ ಮುನಿರಾಜು, ಮಂಜುನಾಥ್, ಜಯರಾಮ್, ಶ್ರೀರಾಮನಹಳ್ಳಿ ಜಗದೀಶ್, ಹೆಸರಘಟ್ಟ ಹೋಬಳಿ ಬಿಜೆಪಿ ಪದಾಧಿಕಾರಿಗಳಾದ ವಸಂತ್ ಅರಕೆರೆ, ಪಿ.ಕೆ.ರಾಜಣ್ಣ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರಿದ್ದರು.
