ಬಸವಣ್ಣ ದೇವಸ್ಥಾನದ ವಿಮಾನ ಗೋಪುರ, ಧ್ವಜಸ್ಥಂಭ ನಿರ್ಮಾಣಕ್ಕೆ ಶಂಕುಸ್ಥಾಪನೆ :
ಬ್ಯಾಟರಾಯನಪುರ : ಕ್ಷೇತ್ರದ ಬೆಟ್ಟಹಲಸೂರು ಗ್ರಾಮದ ಪುರಾತನ ಶ್ರೀ ಬಸವಣ್ಣ ದೇವರ ದೇವಸ್ಥಾನದ ವಿಮಾನ ಗೋಪುರ ಮತ್ತು ಧ್ವಜ ಸ್ಥಂಭ ನಿರ್ಮಾಣ ಕಾರ್ಯದ ಶಂಕುಸ್ಥಾಪನೆಯನ್ನು ಹುಣಸಮಾರನಹಳ್ಳಿ ಸಂಸ್ಥಾನ ಮಠದ ಪಟ್ಟದ ಶ್ರೀ ಗುರುನಂಜೇಶ್ವರ ಸ್ವಾಮೀಜಿ ಬುಧವಾರ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಬೆಳ್ಳಾವೆ ಸಂಸ್ಥಾನ ಮಠದ ಪಟ್ಟದ ಶ್ರೀ ಮಹಂತ ಶಿವಾಚಾರ್ಯ ಸ್ವಾಮೀಜಿ, ಶ್ರೀ ಬಸವಣ್ಣ ದೇವರು ಸೇವಾ ಸಮಿತಿ ಟ್ರಸ್ಟ್‌ ನ ಅಧ್ಯಕ್ಷರಾದ ಬಿ.ಎಸ್.ಚಿತ್ರಶೇಖರ್, ನಿರ್ದೇಶಕರಾದ ಎಸ್.ಬಸವರಾಜು, ಬಿ.ಎಂ.ನಾಗರಾಜ್ (ಎಂ.ಟಿ.ಆರ್.),ನಂದೀಶ್ ಬಿ.ಆರ್., ಜೀರಿಗೆ ತೋಂಟದಾರ್ಯ, ಬೆಟ್ಟಹಲಸೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್, ಹಾಲಿ ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ತಾ.ಪಂ.ಮಾಜಿ ಸದಸ್ಯ ಮುನಿಕೃಷ್ಣಪ್ಪ, ಬಿ.ಕೆ.ರವೀಂದ್ರನಾಥಗೌಡ, ಟಿ.ಪಿ.ಪ್ರಕಾಶ್, ಬಸವಣ್ಣ ದೇವರು ಸೇವಾ ಸಮಿತಿ ಟ್ರಸ್ಟ್‌ ನ ಸದಸ್ಯರು, ಹಸಿರೇ ಉಸಿರು ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸಮೂರ್ತಿ ಅರ್ಚರಕರಾದ ಸಿದ್ದಪ್ಪ, ಕಾರ್ತೀಕ್ ಸ್ವಾಮಿ ಸೇರಿದಂತೆ ಗ್ರಾಮಸ್ಥರಿದ್ದರು.

Leave a Reply

Your email address will not be published. Required fields are marked *