ಬ್ಯಾಟರಾಯನಪುರ ಗ್ರಾ‌.ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಟಿ.ಪಿ.ಪ್ರಕಾಶ್ ಜನ್ಮದಿನ :
ಮುಖಂಡರು, ಹಿತೈಷಿಗಳು, ಅಭಿಮಾನಿಗಳಿಂದ ಶುಭ ಹಾರೈಕೆ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಮಾಜಿ ಅಧ್ಯಕ್ಷರಾದ ಟಿ.ಪಿ.ಪ್ರಕಾಶ್ ಅವರ ಜನ್ಮದಿನದ ಪ್ರಯುಕ್ತ ತರಹುಣಸೆಯಲ್ಲಿನ ಅವರ ಸ್ವಗೃಹದ ಬಳಿ ಆಯೋಜಿಸಿದ್ದ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳು ಕೇಕ್ ಕತ್ತರಿಸಿ, ಟಿ.ಪಿ.ಪ್ರಕಾಶ್ ಅವರಿಗೆ ಗೌರವ ಸನ್ಮಾನ ನೀಡಿ ಜನ್ಮದಿನದ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಎನ್.ರಮೇಶ್, ಟಿ.ಪಿ.ಚಿಕ್ಕೇಗೌಡ ಮಾಜಿ ಅಧ್ಯಕ್ಷರು ಹಾ.ಉ.ಸ. ಸಂಘ, ಟಿ.ಪಿ.ರಾಜಣ್ಣ ಮಾಜಿ ಅಧ್ಯಕ್ಷರು ಹಾ.ಉ.ಸ. ಸಂಘ, ಟಿ.ಬಿ. ರಮೇಶ್, ಟಿ.ಕೆ.ಜಗದೀಶ್, ಟಿ.ಎನ್. ಹರೀಶ್ ಕುಮಾರ್, ಟಿ.ಪಿ.ದೇವರಾಜ್, ಟಿ.ಕೆ.ಕುಮಾರ್, ಶಿವಕುಮಾರ್ ಟಿ.ಎಮ್., ನಾಗೇಂದ್ರ ಹಾ.ಉ.ಸ ಸಂಘ ಧನುಷ್ ಕುಮಾರ್ ಸೇರಿದಂತೆ ಗ್ರಾಮಸ್ಥರಿದ್ದರು.

Leave a Reply

Your email address will not be published. Required fields are marked *