ಐಸಿಸಿ ಜೊತೆಗಿನ 8 ವರ್ಷಗಳ ಸಹಭಾಗಿತ್ವವನ್ನು ಸಂಭ್ರಮಿಸುತ್ತಿರುವ ಕೋಕಾ-ಕೋಲಾ: 2025ರ ಮಹಿಳಾ ವಿಶ್ವಕಪ್‌ ನಲ್ಲಿ ಭಾರತದ ತೆರೆಮರೆಯ ಹೀರೋಗಳಿಗೆ ಗೌರವ ಸಲ್ಲಿಕೆ

ಬೆಂಗಳೂರು, ಅಕ್ಟೋಬರ್ 23, 2025: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ನ ಅಫೀಶಿಯಲ್ ರಿಫ್ರೆಶ್‌ಮೆಂಟ್ ಮತ್ತು ಹೈಡ್ರೇಷನ್ ಪಾರ್ಟ್ ನರ್ ಆಗಿರುವ ಕೋಕಾ-ಕೋಲಾ ಇಂಡಿಯಾ ಸಂಸ್ಥೆಯು ಭಾರತದ ನವಿ ಮುಂಬೈ, ಗುವಾಹಟಿ, ಇಂದೋರ್ ಮತ್ತು ವಿಶಾಖಪಟ್ಟಣಂನಲ್ಲಿ 2025ರ ಐಸಿಸಿ ಮಹಿಳಾ ವಿಶ್ವಕಪ್‌ ಪಂದ್ಯಾವಳಿಯ ಪಂದ್ಯಗಳು ಜರುಗುವ ವೇಳೆಯಲ್ಲಿ ತನ್ನ 8 ವರ್ಷಗಳ ಸಹಭಾಗಿತ್ವವನ್ನು ಸಂಭ್ರಮಿಸುತ್ತಿದೆ. ಈ ಸಂದರ್ಭದಲ್ಲಿ ತನ್ನ ರಿಟೇಲಿಂಗ್ ಜಾಲದ ತೆರೆ ಮರೆಯ ಹೀರೋಗಳಿಗೆ ಗೌರವ ಸಲ್ಲಿಸಲಿದೆ.

ಈ ಸಹಭಾಗಿತ್ವದ ಭಾಗವಾಗಿ ಕೋಕಾ-ಕೋಲಾ ಇಂಡಿಯಾ ಸಂಸ್ಥೆಯು ದೇಶಾದ್ಯಂತ ಇರುವ ಲಕ್ಷಾಂತರ ಅಭಿಮಾನಿಗಳಿಗೆ ತಂಪಾದ ಪಾನೀಯಗಳನ್ನು ಒದಗಿಸುತ್ತದೆ ಮತ್ತು ಕ್ರೀಡಾಂಗಣಗಳು, ಕ್ರೀಡಾಂಗಣ ಹೊರತಾಗಿ ಎಲ್ಲಾ ಕಡೆಗಳಲ್ಲಿ ಕ್ರಿಕೆಟ್‌ ನ ಹುಮ್ಮಸ್ಸು ಹರಡುವಂತೆ ನೋಡಿಕೊಳ್ಳಲಿದೆ.

ಈ ಸಂಭ್ರಮಾಚರಣೆಯು ಕ್ರೀಡೆಯನ್ನು ಬೆಂಬಲಿಸುವ ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ವಿಚಾರದಲ್ಲಿ ಕಂಪನಿ ಹೊಂದಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಭಾರತದಲ್ಲಿ ಮಹಿಳಾ ಕ್ರಿಕೆಟ್‌ ಅನ್ನು ಬಲಪಡಿಸುತ್ತದೆ. ಪಂದ್ಯಾವಳಿಗೂ ಮೀರಿ, ಕೋಕಾ-ಕೋಲಾ ಇಂಡಿಯಾ ಸಂಸ್ಥೆಯು ಸಮಾಜವನ್ನು ಉತ್ತೇಜಿಸುವ ಸಂಸ್ಥೆಯಾಗಿ ತನ್ನ ಪಾತ್ರವನ್ನು ಬಲಪಡಿಸಿಕೊಳ್ಳುತ್ತಿದೆ.

ಕಂಪನಿಯ ಸ್ಪಷ್ಟ ದೃಷ್ಟಿಕೋನಕ್ಕೆ ಪೂರಕವಾಗಿ ಮುನ್ನಡೆಯುತ್ತಿರುವ ಕಂಪನಿಯು, ಪಂದ್ಯಗಳನ್ನು ಆಯೋಜಿಸಿರುವ ನಗರಗಳಲ್ಲಿ ಉದ್ಯೋಗವನ್ನು ಉತ್ತೇಜಿಸುವ, ಆದಾಯ ಬೆಳವಣಿಗೆಯನ್ನು ಸಾಧ್ಯವಾಗಿಸುವ ಮತ್ತು ಸುಸ್ಥಿರ ಪರಿಣಾಮವನ್ನು ಬೀರುವ ಕಾರ್ಯವನ್ನು ನಡೆಸಲಿದೆ. ಈ ಪಯಣದ ಕೇಂದ್ರದಲ್ಲಿ ಬಾಟಲಿಂಗ್ ಪಾಲುದಾರರೊಂದಿಗೆ, ಕಿರಾಣಿ ಅಂಗಡಿಗಳು ಮತ್ತು ಕೊನೆಯ ಮೈಲಿ ಪಾಲುದಾರರ ಜೊತೆ ಸಹಯೋಗ ಮಾಡಿಕೊಳ್ಳಲಾಗುತ್ತಿದ್ದು, ಈ ಮೂಲಕ ಸರ್ವರಿಗೂ ಪಾನೀಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಾಗಲಿದೆ. ತನ್ನ ‘ಲೋಕಲಿ ಯುವರ್ಸ್’ ಅಭಿಯಾನದ ಮೂಲಕ, ಕೋಕಾ-ಕೋಲಾ ಇಂಡಿಯಾ ತನ್ನ ವಿತರಣಾ ಜಾಲದ ಬೆನ್ನೆಲುಬಾಗಿರುವ ತೆರೆಮರೆಯ ಸಾಧಕರನ್ನು ಗೌರವಿಸುತ್ತಿದೆ.

ಈ ಕುರಿತು ಮಾತನಾಡಿರುವ ಕೋಕಾ-ಕೋಲಾ ಇಂಡಿಯಾ & ಸೌತ್‌ವೆಸ್ಟ್ ಏಷಿಯಾದ ಇಂಡಿಯಾ ಆಪರೇಷನ್ಸ್ ವೈಸ್ ಪ್ರೆಸಿಡೆಂಟ್ ಸಂದೀಪ್ ಬಜೋರಿಯಾ ಅವರು, “ಐಸಿಸಿ ಮಹಿಳಾ ವಿಶ್ವಕಪ್ ಕೇವಲ ಪಂದ್ಯಾವಳಿ ಮಾತ್ರವೇ ಅಲ್ಲ, ಬದಲಿಗೆ ಇದು ಲಕ್ಷಾಂತರ ಜನರಿಗೆ, ವಿಶೇಷವಾಗಿ ಯುವತಿಯರಿಗೆ ದೊಡ್ಡ ಕನಸು ಕಾಣಲು ಪ್ರೇರಣೆ ನೀಡುವ ಮಹತ್ತಪ ವೇದಿಕೆಯಾಗಿದೆ. ಕೋಕಾ-ಕೋಲಾ ಇಂಡಿಯಾ ಸಂಸ್ಥೆಯು ಮಹಿಳಾ ಕ್ರಿಕೆಟಿಗರ ಹಿಂದೆ ನಿಲ್ಲುವುದಕ್ಕೆ ಹೆಮ್ಮೆಪಡುತ್ತದೆ ಮತ್ತು ಸಮಾಜ ಸಬಲೀಕರಣದಲ್ಲಿ ಮಹತ್ವದ ಪಾತ್ರವಾಗಲು ಉತ್ಸುಕವಾಗಿದೆ. ನಮ್ಮ ಬದ್ಧತೆಯು ಹೈಡ್ರೇಷನ್‌ ಗಿಂತ ಮೀರಿದ್ದಾಗಿದ್ದು, ಹೊಸ ಅವಕಾಶಗಳ ಸೃಷ್ಟಿ ಮತ್ತು ಕ್ರೀಡಾಂಗಣಗಳಿಗಿಂತ ಹೊರಗೂ ಈ ಟೂರ್ನಮೆಂಟ್‌ನ ಪರಿಣಾಮ ಬೀರಲು ಗಮನ ಹರಿಸಲಾಗುತ್ತದೆ” ಎಂದು ಹೇಳಿದರು.

ಕೋಕಾ-ಕೋಲಾ ಇಂಡಿಯಾ ಮತ್ತು ಸೌತ್‌ವೆಸ್ಟ್ ಏಷಿಯಾದ ಡೆವಲಪಿಂಗ್ ಮಾರ್ಕೆಟ್ಸ್ ನ ಫ್ರಾಂಚೈಸ್ ಆಪರೇಷನ್ಸ್ ವೈಸ್ ಪ್ರೆಸಿಡೆಂಟ್ ಕರಣ್ ಆಚ್‌ಪಾಲ್ ಅವರು, “ಐಸಿಸಿಯೊಂದಿಗಿನ ನಮ್ಮ ಪಾಲುದಾರಿಕೆಯು ಆಟವನ್ನು ಮತ್ತು ಅದನ್ನು ಸಂಭ್ರಮಿಸುವ ಸಮಾಜವನ್ನು ಗೌರವಿಸುವ ನಿಟ್ಟಿನಲ್ಲಿ ಮೂಡಿಬಂದಿದೆ. ‘ಲೋಕಲಿ ಯುವರ್ಸ್’ ಅಭಿಯಾನದ ಮೂಲಕ ನಾವು ಗ್ರಾಹಕರನ್ನು ತಂಪಾಗಿರಿಸುವಂತೆ ನೋಡಿಕೊಳ್ಳುವ ನಮ್ಮ ರಿಟೇಲರ್‌ಗಳು ಮತ್ತು ಕಿರಾಣಿ ಅಂಗಡಿ ಮಾಲೀಕರ ಮೇಲೆ ಬೆಳಕು ಚೆಲ್ಲುತ್ತೇವೆ. ಮಹಿಳಾ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿರುವ ಈ ವೇಳೆಯಲ್ಲಿ ಅವರು ಕ್ರೀಡಾಂಗಣಗಳಿಂದ ಹಿಡಿದು ರಸ್ತೆಗಳಲ್ಲಿ ಕ್ರೀಡಾ ಹುಮ್ಮಸ್ಸು ಹೆಚ್ಚಿಸುತ್ತಾರೆ ಮತ್ತು ಕ್ರಿಕೆಟ್‌ ನ ಆನಂದವು ಪ್ರತಿಯೊಂದು ಮೂಲೆಗೂ ತಲುಪುವಂತೆ ಮಾಡುತ್ತಾರೆ” ಎಂದು ಹೇಳಿದರು.

ಹಿಂದೂಸ್ತಾನ್ ಕೋಕಾ-ಕೋಲಾ ಬಿವರೇಜಸ್ ಪ್ರೈ. ಲಿಮಿಟೆಡ್ ನ ಚೀಫ್ ಕಮರ್ಷಿಯಲ್ ಆಫೀಸರ್ ವಿನಯ್ ನಾಯರ್ ಅವರು, “ಕ್ರೀಡಾಂಗಣದಲ್ಲಿ ಮೊಳಗುವ ಪ್ರತಿಯೊಂದು ಹರ್ಷೋದ್ಗಾರದ ಹಿಂದೆ ಅತ್ಯುತ್ತಮ ಕ್ರೀಡಾಭಿಮಾನಿಗಳ ಜಾಲ ಇರುತ್ತದೆ. ಬಾಟಲಿಂಗ್ ಪಾಲುದಾರರಾಗಿ, ಆತಿಥೇಯ ನಗರಗಳಲ್ಲಿ ಅಭಿಮಾನಿಗಳಿಗೆ ಟೂರ್ನಮೆಂಟ್‌ ನ ಉದ್ದಕ್ಕೂ ನಮ್ಮ ಪಾನೀಯಗಳು ಲಭ್ಯವಾಗುವಂತೆ ಮಾಡುವುದು ನಮ್ಮ ಗಮನವಾಗಿದೆ. ಅತ್ಯುತ್ತಮವಾದ ಕೊನೆಯ-ಮೈಲಿ ಪೂರೈಕೆ ಸರಪಳಿಗಳನ್ನು ನಿರ್ಮಿಸುವ ಮೂಲಕ ಮತ್ತು ಸ್ಥಳೀಯ ವ್ಯಾಪಾರಿಗಳನ್ನು ಬೆಂಬಲಿಸುವ ಮೂಲಕ, ಮಹಿಳಾ ವಿಶ್ವಕಪ್ ಸಂದರ್ಭದಲ್ಲಿ ಸಮಾಜವನ್ನು ತಂಪಾಗಿಡಲು ನಾವು ಹೆಮ್ಮೆ ಪಡುತ್ತೇವೆ” ಎಂದು ಹೇಳಿದರು.

ಕೋಕಾ-ಕೋಲಾದ ಕ್ರೀಡೆ ಜೊತೆಗಿನ ಸಂಬಂಧ ಗಾಢವಾದದ್ದು. ಕೋಕಾ ಕೋಲಾ ಬಹಳ ವರ್ಷಗಳಿಂದ ಅಭಿಮಾನಿಗಳನ್ನು ಒಗ್ಗೂಡಿಸುವ, ಉತ್ಸಾಹವನ್ನು ಹೆಚ್ಚಿಸುವ ಮತ್ತು ಮೈದಾನದ ಒಳಗೆ ಮತ್ತು ಹೊರಗೆ ಅಭಿಮಾನಿಗಳನ್ನು ತಂಪಾಗಿಸುವ ಕೆಲಸ ಮಾಡುತ್ತಿದೆ. ಕ್ರಿಕೆಟ್‌ ನಿಂದ ಹಿಡಿದು ಜಾಗತಿಕ ಟೂರ್ನಮೆಂಟ್‌ ಗಳವರೆಗೆ ಈ ಬ್ರಾಂಡ್ ಯಾವಾಗಲೂ ಜನರನ್ನು ಒಗ್ಗೂಡಿಸುವ ಕಡೆ ಗಮನ ಹರಿಸಿದೆ. ಐಸಿಸಿಯೊಂದಿಗಿನ ಪಾಲುದಾರಿಕೆಯು ಕೇವಲ ಪ್ರಾಯೋಜಕತ್ವ ಮಾತ್ರವೇ ಅಲ್ಲ, ಇದು ಕ್ರೀಡೆಯ ಮತ್ತು ಸಮಾಜದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಅಲ್ಲದೇ ಪ್ರತೀ ಪಂದ್ಯವನ್ನು ಆಹ್ಲಾದಕರ ಅನುಭವವನ್ನಾಗಿಸುವ ಕೋಕಾ-ಕೋಲಾದ ನಂಬಿಕೆಯ ಸಂಭ್ರಮಾಚರಣೆಯಾಗಿದೆ.

Leave a Reply

Your email address will not be published. Required fields are marked *