



ಯಲಹಂಕದ RYAN ಅಂತರಾಷ್ಟ್ರೀಯ ಶಾಲೆಯಿಂದ ಮಿನಿಥಾನ್ ಓಟದ ಸ್ಪರ್ಧೆ
*
ದಿನಾಂಕ 23-11-2025 ಭಾನುವಾರ ರಂದು ರಾಯಾನ್ ಇಂಟರ್ ನ್ಯಾಷನಲ್ ಶಾಲೆ ಯಲಹಂಕದಲ್ಲಿ ರಾಯಾನ್ ಮಿನಿಥಾನ್ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ಕ್ರೀಡಾ ಸ್ಪೂರ್ತಿಯನ್ನು ತುಂಬುವ ಸಲುವಾಗಿ ಪ್ರತಿವರ್ಷವೂ ಈ ಮಿನಿಥಾನ್ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಈ ವರೆಗೆ 26 ವರ್ಷಗಳಿಂದ ಒಟ್ಟು 219 ಓಟದ ಸ್ಪರ್ಧೆಯನ್ನು ಯಶಸ್ವಿಯಾಗಿದೆ ಆಯೋಜಿಸಲಾಗಿದ್ದು ಈವರೆಗೆ ಸುಮಾರು 9 ಲಕ್ಷಕ್ಕೂ ಹೆಚ್ಚು ಕ್ರೀಡಾಳುಗಳು ಭಾಗವಹಿಸಿದ್ದು ಹೆಮ್ಮೆಯ ವಿಷಯವಾಗಿದೆ. ಇಂದು ಆಯೋಜಿಸಿದ್ದ ಈ ಮಿನಿಥಾನ್ ಸ್ಪರ್ಧೆಯಲ್ಲಿ ಬೆಂಗಳೂರು ಮತ್ತು ಯಲಹಂಕದ ಸುತ್ತಮುತ್ತಲಿನ 23 ಕ್ಕೂ ಶಾಲೆಗಳು ಭಾಗವಹಿಸಿದ್ದವು. ಜ್ಞಾನಜ್ಯೋತಿ ಪ್ರೌಢಶಾಲೆ, ಅಮೃತ ಇಂಟರ್ ನ್ಯಾಷನಲ್ ಸ್ಕೂಲ್, ಸೌಂದರ್ಯ ಶಾಲೆ, ಸ್ವಾಮಿ ವಿವೇಕಾನಂದ ಶಾಲೆ, ಮತ್ತು ರಾಯನ್ ಸಮೂಹ ಸಂಸ್ಥೆಗಳಾದ ರಾಯಾನ್ ಇಂಟರ್ ನ್ಯಾಷನಲ್ ಸ್ಕೂಲ್, ಕುಂದಲಹಳ್ಳಿ, ಬನ್ನೇರಘಟ್ಟ, ರಾಯಾನ್ ತತ್ವ ಮತ್ತು ರಾಯಾನ್ ಅಕಾಡಮಿ ಮುಂತಾದ ಶಾಲೆಗಳಿಂದ ಒಟ್ಟು 2000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಿನಿಥಾನ್ ಓಟದ ಸ್ಪರ್ಧೆಯನ್ನು ರಾಯಾನ್ ಶಾಲೆಯಿಂದ ನಿಟ್ಟೆ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ವರೆಗೆ ಎರಡರಿಂದ ನಾಲ್ಕು ಕಿಲೋಮೀಟರ್ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು, ಹನ್ನೆರಡು, ಹದಿನಾಲ್ಕ ಮತ್ತು ಹದಿನಾರು ವಯೋಮಿತಿಯ ಗಂಡು ಮತ್ತು ಹೆಣ್ಣು ಮಕ್ಕಳ ವಿಭಾಗಗಳು ಪ್ರತ್ಯೇಕವಾಗಿದ್ದವು. ಮುಖ್ಯ ಅತಿಥಿಗಳಾಗಿ ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದ ಸಾಧಕರನ್ನು ಆಹ್ವಾನಿಸಲಾಗಿತ್ತು. ಅತಿಥಿಗಳು ಓಟಕ್ಕೆ ಚಾಲನೆ ನೀಡಿದರು. ಸೌಂದರ್ಯ ಶಾಲೆಯವರು ಒಟ್ಟು 43 ಅಂಕಗಳನ್ನು ಗಳಿಸುವುದರ ಮೂಲಕ ಪ್ರಥಮ ಸ್ಥಾನ ಚಾಂಪಿಯನ್ ಶಿಪ್ ಗಳಿಸಿಕೊಂಡು ನಗದು ಬಹುಮಾನ ಮತ್ತು ಪದಕಗಳನ್ನು ಬಾಚಿಕೊಂಡರು. ಎರಡನೇ ಸ್ಥಾನವನ್ನು ಸರಕಾರಿ ಪ್ರೌಢಶಾಲೆ ಯಲಹಂಕದವರು 35 ಅಂಕಗಳ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡರು ಮೂರನೇ ಬಹುಮಾನವನ್ನು ಪರಿಕ್ರಮ ಪೌಢಶಾಲೆಯ ವಿದ್ಯಾರ್ಥಿಗಳು 33 ಅಂಕಗಳನ್ನು ಗಳಿಸಿದರು. ಅತಿಥಿಗಳು ಬಹುಮಾನ ಪ್ರಧಾನ ಮಾಡಿದರು. ರಾಯಾನ್ ಶಾಲೆಯ ಛೇರ್ಮನ್ ಅಗಸ್ಟಿನ್ ಪಿಂಟೋ ಮತ್ತು ನಿರ್ದೇಶಕಿಯಾದ ಮೇಡಮ್ ಗ್ಪೇಸ್ ಪಿಂಟೋರವರು ಮಿನಿಥಾನ್ ಓಟದ ಸ್ಪರ್ಧೆ ಆಯೋಜಿಸಿ ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಯನ್ನು ಗುರುತಿಸುತ್ತಿರುವುದು ಹೆಮ್ಮೆಯ ವಿಷಯವೆಂದು ತಿಳಿಸಿದರು
