ಪಡೆದ ಪದವಿಯಿಂದ ಉತ್ತಮ ಬದುಕು ರೂಪಿಸಿಕೊಳ್ಳಿ : ವಿದ್ಯಾರ್ಥಿಗಳಿಗೆ ವೂಡೇ.ಪಿ.ಕೃಷ್ಣ ಸಲಹೆ
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ವಾರ್ಷಿಕ ಘಟಿಕೋತ್ಸವ :
ಯಲಹಂಕ : ಪದವಿ ಪಡೆದ ವಿದ್ಯಾರ್ಥಿಗಳು ತಾವು ಪಡೆದು ಪದವಿಯಿಂದ ಭವಿಷ್ಯದ ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಿ ಎಂದು ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ.ಪಿ.ಕೃಷ್ಣ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಬೆಂಗಳೂರು, ಮೈಸೂರು, ತುಮಕೂರು ಮತ್ತು ಮಂಡ್ಯ ಶಾಖೆಗಳಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದ ನಂತರ ಮಾತನಾಡಿದ ಅವರು ‘ಇಂದು ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಬೆಂಗಳೂರು, ಮೈಸೂರು, ತುಮಕೂರು ಮತ್ತು ಮಂಡ್ಯ ಶಾಖೆಗಳಲ್ಲಿ ವಿವಿಧ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ, ಪಿ.ಎಚ್.ಡಿ. ಪಡೆದಿರುವ ಒಟ್ಟು 4 ಸಾವಿರ ಪದವೀಧರರಿಗೆ ಪದವಿ ಪ್ರಧಾನ ಮಾಡಲಾಗಿದ್ದು, ಈ ಪೈಕಿ ಶೇಷಾದ್ರಿಪುರಂ ಪದವಿ ಕಾಲೇಜಿನ 700 ಪದವೀಧರರು, 300 ಸ್ನಾತಕೋತ್ತರ ಪದವೀಧರರು, ಶೇಷಾದ್ರಿಪುರಂ ಸಂಜೆ ಕಾಲೇಜಿನ 100 ಪದವೀಧರರು, ಶೇಷಾದ್ರಿಪುರಂ ಸಂಯುಕ್ತ ಕಾಲೇಜಿನ 250 ಪದವೀಧರರು, ಶೇಷಾದ್ರಿಪುರಂ ಅಕಾಡೆಮಿ ಆಫ್ ಬ್ಯುಸಿನೆಸ್‌ ಸ್ಟಡೀಸ್ ಕೆಂಗೇರಿಯ 200 ಪದವೀಧರರು, ಶೇಷಾದ್ರಿಪುರಂ ಪದವಿ ಕಾಲೇಜು, ಮಾಗಡಿಯ 80 ಪದವೀಧರರು, ಶೇಷಾದ್ರಿಪುರಂ ಕಾನೂನು ಕಾಲೇಜಿನ 50 ಕಾನೂನು ಪದವೀಧರರು, ಶೇಷಾದ್ರಿಪುರಂ ಪದವಿ ಕಾಲೇಜು ಮೈಸೂರಿನ 100 ಪದವೀಧರರು, ಶೇಷಾದ್ರಿಪುರಂ ಪದವಿ ಕಾಲೇಜು ತುಮಕೂರಿನ 300 ಪದವೀಧರರು, 60 ಸ್ನಾತಕೋತ್ತರ ಪದವೀಧರರು, ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ 700 ಪದವೀಧರರು, 450 ಸ್ನಾತಕೋತ್ತರ ಪದವೀಧರರು, 12 ಪಿ.ಎಚ್.ಡಿ. ಪದವೀಧರರು ಸೇರಿದಂತೆ ವಿವಿಧ ವಿಷಯಗಳಲ್ಲಿ ಪದವಿ ಪಡೆದ ಒಟ್ಟು 4 ಸಾವಿರ ಮಂದಿ ಪದವೀಧರರಿಗೆ ಪದವಿ ಪ್ರಧಾನ ಮಾಡಲಾಗಿದ್ದು, ಇವರಲ್ಲಿ 34 ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದಾರೆ, ಈ ಪೈಕಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ವಿವಿಧ ಶಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರರು ಸಹ ಸೇರಿದ್ದಾರೆ. ಪದವಿಯಲ್ಲಿ ಪಡೆದ ಅತ್ಯಮೂಲ್ಯ ಜ್ಞಾನವನ್ನು ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯ ರೂಪಿಸಲು ವಿನಿಯೋಗಿಸುವಂತಾಗಲಿ ಎಂದು ಶುಭ ಹಾರೈಸಿದರು.
ಘಟಿಕೋತ್ಸವ ಸಮಾರಂಭದಲ್ಲಿ ಗಾಂಧಿ ಭವನದ ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಕೇಂದ್ರದ ನಿರ್ದೇಶಕಿ ಡಾ.ಮೀನಾಕುಮಾರಿ ದೇಶಪಾಂಡೆ ಮಹಿಶಿ ಅವರು ಪದವಿ ವಿದ್ಯಾರ್ಥಿಗಳಿಗೆ ಎದುರಾಗುವ ಸವಾಲುಗಳು, ಅವುಗಳನ್ನು ಎದುರಿಸಲು ಆಗತ್ಯವಿರುವ ಮಾರ್ಗೋಪಾಯಗಳು, ಬದುಕಿನ ಹಲವು ಆಯಾಮಗಳು, ಅವುಗಳನ್ನು ಪರಿಹಸಿಕೊಳ್ಳಲು ಅನುಸರಿಸಬೇಕಿರುವ ಸೂಕ್ಷ್ಮ ಜ್ಞಾನ ಹೀಗೆ ಹಲವು ವಿಷಯಗಳ ಕುರಿತು ವಿಸ್ತ್ರತವಾಗಿ ವಿವರಿಸಿದರು.
ಘಟಿಕೋತ್ಸವದ ಈ ಶುಭ ಸಮಾರಂಭಗಳಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಆಡಳಿತ ವಿವಿಧ ವಿಭಾಗಗಳ ಮುಖ್ಯಸ್ಥರಾದ ಎಂ.ಎಸ್.ನಟರಾಜ್, ಕೆ.ಪಿ.ನರಸಿಂಹಮೂರ್ತಿ, ಪಿ.ಸಿ.ನಾರಾಯಣ, ಕೆ.ಕೃಷ್ಣಸ್ವಾಮಿ, ಬಿ.ಎ.ಅನಂತರಾಮ್, ಡಬ್ಲ್ಯೂ.ಡಿ.ವಿಜಯಕುಮಾರ್, ಡಬ್ಲ್ಯೂ.ಡಿ.ಅಶೋಕ್, ಪ್ರಾಂಶುಪಾಲರಾದ ಡಾ.ಎಸ್.ಎನ್.ವೆಂಕಟೇಶ್, ಡಾ.ಆನಂದಪ್ಪ, ಡಾ.ಎನ್.ಎಸ್.ಸತೀಶ್, ಡಾ.ಜಯರಾಮ್, ಡಾ.ಪ್ರಣೀತ, ವಿದ್ಯಾ ಶಿವಣ್ಣನವರ್, ಡಾ.ಸುಮತಿ, ಡಾ.ಸೌಮ್ಯ ಈರಪ್ಪ, ಡಾ.ಜಗದೀಶ್, ನಿರ್ದೇಶಕರಾದ ಡಾ.ಭಾರ್ಗವಿ, ಡಾ.ವಿನಯ್, ಡಾ.ರಾಜಿ ಪಿಳ್ಳೈ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿಗಳು, ಸಹಸ್ರಾರು ಸಂಖ್ಯೆಯ ಪದವೀಧರರಿದ್ದರು.

Leave a Reply

Your email address will not be published. Required fields are marked *