ಬಸವಣ್ಣನವರ ಎಲ್ಲಾ ಸಂಕಲ್ಪಗಳನ್ನು ಈಡೇರಿಸಿದವರು ಕೆಳವರ್ಗದ ಶರಣರು : ಪರಮ ಪೂಜ್ಯ ಶ್ರೀ ನಿಜಗುಣಾನಂದ ಸ್ವಾಮಿಜಿ

ಬಸವಕಲ್ಯಾಣ:
ಬಸವಣ್ಣನವರ ಎಲ್ಲಾ ಸಂಕಲ್ಪಗಳನ್ನು ಈಡೇರಿಸಿದವರು ಕೆಳವರ್ಗದ ಶರಣರು ಮಾತ್ರ, ಇದರಂತೆ ಬಸವಣ್ಣನವರ ಸದಾಶಯ ಎತ್ತಿಕೊಂಡಿದ್ದವರು ಕೆಳವರ್ಗದ ಶರಣರೇ ಎಂದು ಪರಮ ಪೂಜ್ಯ ಶ್ರೀ ನಿಜಗುಣಾನಂದ ಸ್ವಾಮಿಜಿ ಪೀಠಾಧ್ಯಕ್ಷರು ನಿಶ್ಕಲ್ ಮಂಟಪ ಬೈಲೂರು ಶ್ರೀಗಳು ಹೇಳಿದರು.

ಬಸವ ಧರ್ಮ ಪೀಠದ ಮಾಹಾಮನೆಯ ಭವ್ಯ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನ, ವಿವಿಧ ಬಸವಪರ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ
ಕಲ್ಯಾಣ ನಡಿಗೆ ಮತ್ತು ಹರಳಯ್ಯಾ ಜ್ಯೋತಿಯಾತ್ರೆ ಸಮಾರೋಪ ಸಮಾರಂಭ ಮತ್ತು ಶರಣ ಸಂಸತ್ ಅಧಿವೇಶನ ಹಾಗೂ ಶರಣ ವಂದನೆ, ಶರಣಾರತಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯರು ದಲಿತ ವರ್ಗದ ಜನರೇ ಇಂದಿನ ಲಿಂಗಾಯತರು ಎನ್ನುವುದು ಯಾರು ಮರೆಯುವಂತಿಲ್ಲ.
ಮನುಷ್ಯತ್ವದ ಬಗೆ ಶರಣರು ಮಾತನಾಡಿದರು. ಇದರಂತೆ ಬದುಕಿದವರು ಎಲ್ಲಾ ಬಸವಾದಿ ಶರಣರು.ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದೇ ಬಸವಾದಿ ಶರಣರ ಸದಾಶಯವಾಗಿತ್ತು. ಅಂತೆಯೇ ಸಮಾಜ ಪ್ರಜ್ಞೆಯನ್ನು ಬಿತ್ತಿ, ಸರ್ವರಲ್ಲಿಯೂ ಮಾನವೀಯತೆಯ ಸಂದೇಶ ಜಾಗೃತಿ ಮೂಡಿಸುವ ಮಹೋನ್ನತ ಪ್ರಯತ್ನ ಮಾಡಿದರು.
ಯಾವುದೇ ಕಾಯಕವಾಗಲಿ ಅದು ಸ್ವಾಭಿಮಾನದ ಸಂಕೇತವಾಗಿದೆ. ಮನುಷ್ಯತ್ವಕ್ಕೆ ಗೌರವ ನೀಡಿದ ಧರ್ಮ ಯಾವುದಾದರೂ ಇದ್ದರೆ ಅದು ಲಿಂಗಾಯತ ಧರ್ಮವಾಗಿದೆ .
ಇದೊಂದು ಅರ್ಥಪೂರ್ಣವಾದ ಹಾಗೂ ಜವಾಬ್ದಾರಿಯುತವಾದ ವೇದಿಕೆಯಾಗಿದೆ.ಧಾರ್ಮಿಕ ಹಕ್ಕುಗಳಿಂದ ಮಾನವನ ಸಮಾನತೆಯ ಹಕ್ಕಗಳ ರಕ್ಷಣೆಯ ವೇದಿಕೆ ಇದಾಗಿದೆ.
ಶರಣು ಶರಣಾರ್ಥಿ ಎಂದು ಹೇಳಿದರೆ ಶರಣು ಶರಣಾರ್ಥಿ – ಶರಣು ಶರಣಾರ್ಥಿ ಎಂದು ಹೇಳುವ ಸಂಸ್ಕೃತಿ ನಮ್ಮದಾಗಬೇಕು. ಅಹಂಕಾರ ತೇಜಿಸಿ, ಸೌಜನ್ಯದ ನಡೆ ನಮ್ಮದಾಗಬೇಕು. ಮನುಷ್ಯರಿಂದ ಮನುಷ್ಯರಿಗೆ ನಿಜವಾಗಿಯೂ ಗೌರವ ನೀಡುವುದೇ ಶರಣು ಶರಣಾರ್ಥಿ ಪದದ ಅರ್ಥವಾಗಿದೆ. ಸಾಮಾನ್ಯರ
ಬದುಕಿಗೆ ಸೌಹಾರ್ದತೆಯ ಸಮಾಜ ನಿರ್ಮಿಸಿದವರು.
ಭಕ್ತಿಕಾಂಡದ ಮೇರು ವ್ಯಕ್ತಿತ್ವದ ಬಸವಣ್ಣನವರು.
ಇದರಂತೆ ಬಸವಾದಿ ಶರಣರ ಚಿಂತನೆಗಳು ಸದಾ ಕಾಲ ಈ ಸಮಾಜದಲ್ಲಿ ಬಿತ್ತುವ ಕೆಲಸ ನಿರಂತರವಾಗಿ ಆಗಬೇಕಾಗಿದೆ ಎಂದು ಆಶೀರ್ವಚನ ನೀಡಿದರು.

ಸಾನಿಧ್ಯ ವಹಿಸಿದ್ದ ಪರಮ ಪೂಜ್ಯ ಬಸವಪ್ರಭು ಸ್ವಾಮಿಜಿ ಗುಣತೀರ್ಥವಾಡಿ ಬಸವಕಲ್ಯಾಣ ಇವರು ಮಾತನಾಡಿ
ಬಸವಕುಮಾರ ಪಾಟೀಲ ರವರ ನೇತೃತ್ವದಲ್ಲಿ ಬಿಜನ್ನಳ್ಳಿ ಗ್ರಾಮದಿಂದ ಬಸವಕಲ್ಯಾಣದ ವರೆಗೆ ಐತಿಹಾಸಿಕವಾಗಿ ಸಾಗಿದ ಕಲ್ಯಾಣ ನಡಿಗೆ ಪಾದಯಾತ್ರೆಯು ಹಮ್ಮಿಕೊಂಡು ಯಶಸ್ವಿಗೊಳಿಸಿದ್ದಾರೆ.
770 ಅಮರಗಣಂಗಳ ಶರಣರ ಪವಿತ್ರ ಭೂಮಿ ಬಸವಕಲ್ಯಾಣವಾಗಿದೆ.
ಬಸವಣ್ಣನವರ ವಚನ ಸಾಹಿತ್ಯದ ಆಧಾರ್ ಸ್ತಂಭ ಭಕ್ತಿಮಾರ್ಗವಾಗಿದೆ.
ತನ್ನನ್ನು ತಾನಾರೆಂದು ತಿಳಿದರೆ ತಾನೇ ದೇವಾ ನೋಡಾ ಎನ್ನುವಂತೆ ಬಸವಾದಿ ಶರಣರ ಜೀವನ ಸಾಗಿದೆ.
ಭಕ್ತಿ ಪ್ರಧಾನ ಧರ್ಮ ಲಿಂಗಾಯತ ಧರ್ಮವಾಗಿದೆ. ಲಿಂಗಾಯತ ಧರ್ಮ ವೈಚಾರಿಕ ಮತ್ತು ವೈಜ್ಞಾನಿಕ ಅಡಿಯಲ್ಲಿ ಸ್ಥಾಪನೆ ಆದ ವಿಶಿಷ್ಟ ರೀತಿಯ ಲಿಂಗಾಯತ ಧರ್ಮವಾಗಿದೆ ಎಂದು ಹೇಳಿದರು.

ಸಮ್ಮುಖ ವಹಿಸಿದ್ದ ಹೂಲಸೂರ ಬಸವೇಶ್ವರ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಶಿವಾನಂದ ಸ್ವಾಮೀಜಿ ಬಸವಕುಮಾರ ಪಾಟೀಲ ಅವರು ಮಾಡುವ ಕಾರ್ಯಕ್ರಮಗಳು ಬಹಳಷ್ಟು ಅಚ್ಚುಕಟ್ಟಾಗಿರುತ್ತವೆ.
ಲಿಂಗಾಯತ ಧರ್ಮದ ಮಾನ್ಯತೆಗಾಗಿ ಬಸವಕುಮಾರ ಪಾಟೀಲರು ಹೋರಾಟ ಮಾಡಲೆಂದು ಶುಭ ಹಾರೈಸಿದರು.

ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ ಬಸವಣ್ಣನವರಿಗೆ ಬಸವಣ್ಣನವರೆ ಸರಿ ಸಮಾನರು ಎಂಬುದನ್ನು ಇಡೀ ಜಾಗತಿಕ ಪ್ರಪಂಚಕ್ಕೆ ಗೊತ್ತಿರುವ ಸಂಗತಿ.
ಬಸವಣ್ಣನವರ ಬಗ್ಗೆ ಯಾರೇ ಆಗಲಿ ಹಗರುವಾಗಿ ಮಾತನಾಡಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ತಕ್ಕ ಉತ್ತರ ಖಂಡಿತವಾಗಿಯೂ ನೀಡುತ್ತೇವೆ. ಬಸವಾದಿ ಶರಣರ ಬಗೆ ಮಾತನಾಡುವ ಸಂಪೂರ್ಣವಾಗಿ ತಿಳಿದು ಮಾತನಾಡುವುದು ಸೂಕ್ತವಾಗಿದೆ.
ಭಕ್ತಪಥದ ದಾರಿಯಲ್ಲಿ ಸಾಗಿದ ಬಸವಣ್ಣನವರು ,
ಪ್ರೀತಿಯ ಅಂತಃಕರಣದ ಭಕ್ತಿಯನ್ನು ಹಚ್ಚಿ, ಇಡೀ ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಬಯಸಿದರು.
ವೇದ ಆಗಮ ಪುರಾಣ ಬದಿಗೊತ್ತಿ ವೈಚಾರಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಕೆಲಸ ಬಸವಣ್ಣನವರು ಮಾಡಿದರು ಎಂದರು.

ಶರಣ ಮಾಹಾಂತೇಶ ಕುಂಬಾರ ಹೂವಿನಹಳ್ಳಿ ಇಷ್ಟಲಿಂಗ ಭಕ್ತಿಯ ಕುರಿತು ಉಪನ್ಯಾಸ ನೀಡಿ, ಮಾತನಾಡಿದರು.

ಪ್ರಾಸ್ತಾವಿಕವಾಗಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಶರಣ ಬಸವಕುಮಾರ ಪಾಟೀಲ ರವರು
ನಡಿಗೆ ಪಾದಯಾತ್ರೆಯ ಹಾಗೂ ಹರಳಯ್ಯಾ ಜ್ಯೋತಿಯಾತ್ರೆ ಕುರಿತು ಮಾತನಾಡಿ ಬಿಜನ್ನಳ್ಳಿ ಅತ್ಯಂತ ಹಿಂದುಳಿದ ಕ್ಷೇತ್ರವಾಗಿದೆ. ಇದಕ್ಕೆ ಅನುದಾನ ಒದಗಿಸುವ ಮುಖಾಂತರ ಅಭಿವೃದ್ಧಿ ಮಾಡಬೇಕು.
ತ್ರಿಪುರಾಂತ ಕರೆಯ ಮಧ್ಯೆ ವಚನ ಮಂಟಪ ಆಗಬೇಕಾಗಿದೆ.ಬಸವಕಲ್ಯಾಣ ಕ್ಷೇತ್ರವು ಸಂಪೂರ್ಣವಾಗಿ ಅಭಿವೃದ್ಧಿ ಆಗಬೇಕು. ಜೊತೆಗೆ ಬಸವಕಲ್ಯಾಣ ಜಿಲ್ಲಾ ಕೇಂದ್ರವಾಗಿ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಆಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ನ್ಯಾಯಾಧೀಶ ಶರಣ ಎಸ್ ಎಸ್ ನಾಗರಾಣೆ ವಹಿಸಿದ್ದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶರಣೆ ಸುಶೀಲಮ್ಮ ತಾಯಿ ಅಧ್ಯಕ್ಷರು ಸುಮಂಗಲಾ ಸೇವಾಶ್ರಮ ಬೆಂಗಳೂರು, ಇವರಿಗೆ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಸವ ಧರ್ಮ ಪೀಠದ ಪರಮ ಪೂಜ್ಯ ಜಗದ್ಗುರು ಸಿದ್ದರಾಮೇಶ್ವರ ಸ್ವಾಮೀಜಿ, ಅನುಭವ ಮಂಟಪ ಸಂಚಾಲಕ ಪೂಜ್ಯ ಶಿವಾನಂದ ಸ್ವಾಮೀಜಿ, ಧುಮ್ಮನಸೂರಿನ ಪೂಜ್ಯ ಶಂಕರಲಿಂಗ ಸ್ವಾಮಿಜಿ,
ಪೂಜ್ಯ ಲಾವಣ್ಯ ಮಾತಾಜಿ, ಬಸವ ದೇವರು,
ಶರಣೆ ಸತ್ಯಕ್ಕ ಮಾತಾಜಿ, ಶರಣ ಪಂಡಿತ ಬಾಳೊರೆ,
ಶರಣ ಸಾಹಿತಿ ಸಂಗಮೇಶ ಎನ್ ಜವಾದಿ, ಜಗನ್ನಾಥ ಪತಂಗೆ, ಓಂಪ್ರಕಾಶ್ ರೊಟ್ಟೆ, ಸಿದ್ಧಯ್ಯ ಕವಡಿಮಠ,
ಸುರೇಶ್ ಪಾಟೀಲ, ರಮೇಶ ಚಿಲ್ಲರಗಿ, ರಾಜುಕುಮಾರ ಧುಮ್ಮನಸೂರ್, ಹಾವಯ್ಯಾ ಸ್ವಾಮಿ, ಶರಣೆ ಉಮಾದೇವಿ ಚಿಲ್ಲರಗಿ, ಶರಣೆ ಶೈಲಜಾ ಧುಮ್ಮನಸೂರ್, ಶರಣೆ ಅಂಬಿಕಾ ರಾಮಶೆಟ್ಟಿ, ಶರಣೆ ಹೇಮಲತಾ ಪಾಟೀಲ , ವೈಜಿನಾಥ ಸಜ್ಜನಶೆಟ್ಟಿ, ಅಲ್ಲಮಪ್ರಭು ನಾವದಗೇರಿ,ರಾಜಶೇಖರ ದೇವಣಿ, ರವೀಂದ್ರ ಕೊಳಕೋರ್, ಚಂದ್ರಮೌಳಿ, ಗುರುನಾಥ ಗುಡ್ಡೆ ಸೇರಿದಂತೆ ಸಾವಿರಾರು ಬಸವ ಭಕ್ತರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ
ಮಕ್ಕಳಿಂದ ವಚನ ನೃತ್ಯ ಕಾರ್ಯಕ್ರಮಗಳು ನಡೆದವು.


ವರದಿ – ಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *