ಹಿಂದುಳಿದ, ದಲಿತ ಸಮುದಾಯಗಳ 22 ಮಠಗಳಿಗೆ ಯಲಹಂಕ ಕ್ಷೇತ್ರದಲ್ಲಿ ಭೂಮಿ :
ಸ್ವಾಮೀಜಿಗಳಿಂದ ಶಾಸಕ ಎಸ್ ಆರ್ ವಿಶ್ವನಾಥ್ ಅವರಿಗೆ ಕೃಪಾಶೀರ್ವಾದ :
ಯಲಹಂಕ : ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿಯ ರಾವುತ್ತನಹಳ್ಳಿ ಗ್ರಾಮದಲ್ಲಿ 22 ಹಿಂದುಳಿದ ಹಾಗೂ ದಲಿತ ಸಮುದಾಯಗಳ ಮಠಗಳಿಗೆ ಭೂಮಿ ನೀಡಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಭೂಮಿ ಪಡೆದ 22 ಮಠಾಧೀಶರು ಶಾಸಕ ಎಸ್ ಆರ್ ವಿಶ್ವನಾಥ್ ಅವರ ಮನೆಗೆ ಆಗಮಿಸಿ ವಿಶ್ವನಾಥ್ ಹಾಗೂ ಅವರ ಕುಟುಂಬ ವರ್ಗಕ್ಕೆ ಆಶೀರ್ವದಿಸಿ ಹರಸಿದರು.
ಸ್ವಾಮೀಜಿಗಳ ಆಶೀರ್ವಾದ ಪಡೆದ ನಂತರ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಮಾತನಾಡಿ ‘ಇದೊಂದು ಸುಯೋಗದ ದಿನವೆಂದು ಭಾವಿಸುತ್ತೇನೆ. ರಾಜ್ಯದ ಹಿಂದುಳಿದ ಹಾಗೂ ದಲಿತ ಸಮುದಾಯಗಳ ಸುಮಾರು 22 ಮಠಾಧೀಶರಿಗೆ ಯಲಹಂಕ ಕ್ಷೇತ್ರದಲ್ಲಿ ಒಂದೇ ಕಡೆಯಲ್ಲಿ ಜಾಗ ನೀಡಿರುವುದು ಸಂತೋಷ ಉಂಟು ಮಾಡಿದ್ದು, ಈ ಎಲ್ಲಾ ಮಠಾಧೀಶರ ಆಶೀರ್ವಾದ ಹರಕೆ ನಮ್ಮ ಕ್ಷೇತ್ರದ ಮೇಲಿರಲಿ. ಮಠ ಮಾನ್ಯಗಳ ಸೇವೆಯಿಂದಲೇ ನಮ್ಮ ರಾಜ್ಯದಲ್ಲಿ ಶೈಕ್ಷಣಿಕ ಮತ್ತು ಹಲವು ಸಾಮಾಜಿಕ ಚಟುವಟಿಕೆಗಳಾಗಿವೆ. ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರದ ಪ್ರಗತಿಯಲ್ಲಿ ಮಠಮಾನ್ಯಗಳ ಕೊಡುಗೆ ಪ್ರಸಂಶಾರ್ಹವಾದುದು. ಧರ್ಮದ ಜೊತೆಗೆ ಶಿಕ್ಷಣದ ಬೆಳವಣಿಗೆಗೆ ಪೂರಕವಾಗಿ ಶ್ರಮಿಸುತ್ತಿರುವ ಹಿಂದುಳಿದ ಹಾಗೂ ದಲಿತ ಸಮುದಾಯಗಳ 22 ಮಠಗಳಿಗೆ ಯಲಹಂಕ ಕ್ಷೇತ್ರದಲ್ಲಿ ಭೂಮಿ ನೀಡಿರುವುದು ಹೆಮ್ಮೆಯ ವಿಷಯವಾಗಿದ್ದು. ಧರ್ಮದ ಬೆಳವಣಿಗೆ, ಸಂಸ್ಕೃತಿ, ಪರಂಪರೆಯ ಪ್ರಗತಿಗೆ ಈ ಎಲ್ಲಾ ಮಠಾಧೀಶರು ಹೆಚ್ಚಿನ ರೀತಿಯಲ್ಲಿ ಶ್ರಮಿಸುವಂತಾಗಲಿ, ತನ್ಮೂಲಕ ನಮ್ಮ ದೇಶ ನಮ್ಮ ಸಮಾಜಕ್ಕೆ ಒಳಿತಾಗಲಿ ಎಂದರು.
ಇದೇ ವೇಳೆ ಚಿತ್ರದುರ್ಗದ ಮಾದರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ ‘ಧರ್ಮ ಸಂರಕ್ಷಣೆ, ಸಾಮಾಜಿಕ ಪ್ರಗತಿಗಾಗಿ, ಯಲಹಂಕ ಕ್ಷೇತ್ರದಲ್ಲಿ ಒಂದೇ ಕಡೆ ರಾಜ್ಯದ 22 ದಲಿತ ಹಾಗೂ ಹಿಂದುಳಿದ ಮಠಗಳಿಗೆ ಭೂಮಿ ನೀಡಿರುವುದು ರಾಜ್ಯದಲ್ಲಿ ಇದೇ ಪ್ರಥಮ, ಇಂತದೊಂದು ಅನುಪಮ ಕೊಡುಗೆ ನೀಡುವ ಮೂಲಕ ಧರ್ಮಕಾರ್ಯಕ್ಕೆ ಸಹಕರಿಸಿರುವ ಶಾಸಕ ಎಸ್ ಆರ್ ವಿಶ್ವನಾಥ್ ಅವರಿಗೆ ದೇವರು ಒಳ್ಳೆಯ ಆಯಸ್ಸು, ಆರೋಗ್ಯ, ಐಶ್ವರ್ಯ, ಅಧಿಕಾರ ಪ್ರಾಪ್ತಿಯ ಸೌಭಾಗ್ಯವನ್ನು ಕರುಣಿಸಲಿ ಎಂದು ಹರಸಿದರು.
ಭೋವಿ ಗುರುಪೀಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದುಳಿದ, ದಲಿತ ಮಠಾಧಿಪತಿಗಳ ಒಕ್ಕೂಟಕ್ಕೆ ಭೂದಾನವನ್ನು ಮಾಡಿದ್ದು, ಈ ಕಾರ್ಯಕ್ಕೆ ಪ್ರೇರಣಶಕ್ತಿಯಾಗಿ ಗಟ್ಟಿಯಾಗಿ ನಿಂತು, ಕ್ಷೇತ್ರದ ಮುಖಂಡರೊಂದಿಗೆ ಚರ್ಚಿಸಿ, ಯಲಹಂಕ ಕ್ಷೇತ್ರದಲ್ಲಿ ವಿವಾದಗಳಿಲ್ಲದ ಭೂಮಿಯನ್ನು ಹುಡುಕಿ, ಹಿಂದುಳಿದ ದಲಿತ ಸಮುದಾಯಗಳ 22 ಮಠಾಧಿಪತಿಗಳಿಗೆ ನೀಡುವಲ್ಲಿ ಶ್ರಮಿಸಿರುವ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಕಾಳಜಿ ಹಾಗೂ ಮಠಾಧೀಶರ ಬಗ್ಗೆ ಅವರು ಹೊಂದಿರುವ ಗೌರವಕ್ಕೆ ಕೃತಜ್ಞತೆ ಸಲ್ಲಿಸುವ ದಿಸೆಯಲ್ಲಿ ಇಂದು 22 ಮಠಾಧೀಶರು ಅವರ ಮನೆಗೆ ಭೇಟಿ ನೀಡಿ, ಶಾಸಕ ವಿಶ್ವನಾಥ್ ಹಾಗೂ ಅವರ ಕುಟುಂಬಕ್ಕೆ ಆಶೀರ್ವದಿಸಿದ್ದೇವೆ ಎಂದರು.
ಇದೇ ವೇಳೆ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಕುಟುಂಬದ ವತಿಯಿಂದ ಎಲ್ಲಾ 22 ಮಠಾಧೀಶರಿಗೆ ಗುರುವಂದನೆ ಸಲ್ಲಿಸಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಆರ್.ಎಸ್.ಎಸ್.ಎನ್. ಬ್ಯಾಂಕ್ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್, ಬಿಜೆಪಿ ಯುವ ಮುಖಂಡರು, ವಿಶ್ವವಾಣಿ ಫೌಂಡೇಶನ್ ನ ನಿರ್ದೇಶಕ ಅಲೋಕ್ ವಿಶ್ವನಾಥ್, ಪಲ್ಲವಿ ಅಲೋಕ್, ಬಿಜೆಪಿ ಮುಖಂಡರಾದ ಎಸ್.ಎನ್.ರಾಜಣ್ಣ, ಎಮ್.ಮುನಿರಾಜು, ವಿ.ಎಂ.ಈಶ್ವರ್, ವಿ.ಪವನ್ ಕುಮಾರ್, ಅದ್ದೆ ವಿಶ್ವನಾಥಪುರ ಮಂಜುನಾಥ್, ಚೊಕ್ಕನಹಳ್ಳಿ ವೆಂಕಟೇಶ್, ಎ.ಸಿ.ಮುನಿಕೃಷ್ಣಪ್ಪ, ಎಸ್‌.ಜಿ.ಪ್ರಶಾಂತ್ ರೆಡ್ಡಿ, ಬಿ.ಶ್ರೀನಿವಾಸಯ್ಯ, ಮುನಿದಾಸಪ್ಪ, ಕೆ.ಎಂ.ಮುರಳಿ, ಲಿಂಗನಹಳ್ಳಿ ವೆಂಕಟೇಶ್, ಎಚ್.ಸಿ.ರಾಜೇಶ್, ರಾಮಚಂದ್ರರೆಡ್ಡಿ, ಶಿವಾನಂದ್, ಸತೀಶ್ ರೆಡ್ಡಿ, ಎಚ್.ಎಸ್.ಕಿರಣ್, ಮುನಿರಾಜು, ನಾಗೇಶ್, ಯಲಹಂಕ ಜಯಣ್ಣ, ಸುನಿಲ್ ಕುಮಾರ್, ಗುರುಮೂರ್ತಿ, ಮುನಿಕೃಷ್ಣ, ಮಲ್ಲೇಶ್, ಕೆ.ಬಾಬು ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರಿದ್ದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthau 

kogilu layout Yelahanka

,9845085793.   7349337989

Leave a Reply

Your email address will not be published. Required fields are marked *