


ನಗರದ ಥಣಿಸಂದ್ರ ಮುಖ್ಯ ರಸ್ತೆ, ಚೊಕ್ಕನಹಳ್ಳಿಯಲ್ಲಿರುವ ಸಿಂಧಿ ಪದವಿಪೂರ್ವ ಕಾಲೇಜಿನ ವತಿಯಿಂದ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನದ ಅಂಗವಾಗಿ ವಿದ್ಯಾರ್ಥಿಗಳಿಂದ ಮೆರವಣಿಗೆಯನ್ನು ನಡೆಸಲಾಯಿತು. ಏಡ್ಸ್ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಈ ಮೆರವಣಿಗೆಯು ಕಾಲೇಜಿನಿಂದ ಆರಂಭವಾಗಿ ರಾಷ್ಟ್ರೋತ್ಥಾನ ಶಾಲಾ ವೃತ್ತದವರೆಗೆ ತೆರಳಿ ವಾಪಸ್ಸು ಬರಲಾಯಿತು. ಈ ಮೆರವಣಿಗೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ನಂದ ಎನ್. ಅವರು, ಉಪಪ್ರಾಂಶುಪಾಲೆ ಶ್ರೀಮತಿ ಕಾಂಚನರವರು ಹಾಗೂ ಕಾಲೇಜಿನ ಎಲ್ಲ ಉಪನ್ಯಾಸಕ ವರ್ಗದವರು ಭಾಗವಹಿಸಿದ್ದರು. ಏಡ್ಸ್ ರೋಗ ತಡೆಗಟ್ಟುವ ಬಗ್ಗೆ ವಿವಿಧ ಫಲಕಗಳನ್ನು ಪ್ರದರ್ಶಿಸುತ್ತಾ ಅದಕ್ಕೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸಲು ಘೋಷಣೆ ಕೂಗುತ್ತ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ವಿಶ್ವ ಏಡ್ಸ್ ದಿನದ ಸಂದರ್ಭದಲ್ಲಿ ಮೆರವಣಿಗೆ ಮಾಡಲು ಅನುವು ಮಾಡಿಕೊಟ್ಟ ಸಿಂಧಿ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಯವರಿಗೆ ಹಾಗೂ ಹೆಣ್ಣೂರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ.ನಂದ. ಎನ್ ಅವರು ಧನ್ಯವಾದಗಳು ಸಲ್ಲಿಸಿದರು
