ಬದಲಾಯಿಸಿದ್ದ ಕೆಂಪೇಗೌಡ ವಾರ್ಡ್, ಚೌಡೇಶ್ವರಿ ವಾರ್ಡ್ ಗಳ ಹೆಸರು ಯಥಾಸ್ಥಿತಿ :
ವಿಶ್ವನಾಥ್ ಅವರ ಪರಿಶ್ರಮಕ್ಕೆ ವಾರ್ಡ್ ನಿವಾಸಿಗಳಿಂದ ಅಭಿನಂದನೆ :
ಯಲಹಂಕ : ‘ಜಿಬಿಎ’ಯಿಂದ ಹೆಸರು ಬದಲಾವಣೆ ಮಾಡಲಾಗಿದ್ದ ಯಲಹಂಕ ನಗರ ವ್ಯಾಪ್ತಿಯ ಕೆಂಪೇಗೌಡ ವಾರ್ಡ್(1) ಚೌಡೇಶ್ವರಿ ವಾರ್ಡ್(3)ಗಳ ಹೆಸರುಗಳನ್ನು ಪುನರ್ ಸ್ಥಾಪಿಸಿ, ಯಥಾಸ್ಥಿತಿ ಕಾಪಾಡಲು ಸರ್ಕಾರದ ಮಟ್ಟದಲ್ಲಿ ಶ್ರಮಿಸಿದ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಪರಿಶ್ರಮವನ್ನು ಸ್ಮರಿಸಿ ಕೆಂಪೇಗೌಡ ವಾರ್ಡ್ ಮತ್ತು ಚೌಡೇಶ್ವರಿ ವಾರ್ಡ್ ಗಳ ನಿವಾಸಿಗಳು, ಬಿಜೆಪಿ ಮುಖಂಡರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಶಾಸಕ ಎಸ್ ಆರ್ ವಿಶ್ವನಾಥ್ ರವರನ್ನು ಅವರ ಗೃಹ ಕಚೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿದ ನಂತರ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ಕೆಲವರ ಸ್ವಹಿತಾಸಕ್ತಿ ಮತ್ತು ತಪ್ಪು ಸಂದೇಶ ರವಾನೆಯಿಂದಾಗಿ ಜಿಬಿಎ ಯಲಹಂಕ ನಗರ ವ್ಯಾಪ್ತಿಯ ಕೆಂಪೇಗೌಡ ವಾರ್ಡ್ 1ರ ಹೆಸರನ್ನು ಯಲಹಂಕ ಓಲ್ಡ್ ಟೌನ್ ಎಂದೂ ಮತ್ತು ಚೌಡೇಶ್ವರಿ ವಾರ್ಡ್ 2ರ ಹೆಸರನ್ನು ರಾಜಾ ಕೆಂಪೇಗೌಡ ವಾರ್ಡ್ ಎಂದೂ ಮತ್ತು ವೆಂಕಟಾಲ ವಾರ್ಡ್ ನ್ನು ಆಕಾಶ್ ವಾರ್ಡ್ ಎಂದು ಬದಲಾವಣೆ ಮಾಡಿತ್ತು. ತಮ್ಮ ವಾರ್ಡ್ ಗಳಿಗೆ ಸಂಬಂಧವೇ ಇಲ್ಲದ ಅಸಂಬದ್ಧವಾದ ಹೆಸರನ್ನಿಟ್ಟಿರುವುದರ ವಿರುದ್ಧ ಸ್ಥಳೀಯ ನಿವಾಸಿಗಳು, ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದರು, ಸ್ಥಳೀಯ ಶಾಸಕನಾದ ನನಗೂ ಸಹ ಮನವಿ ಸಲ್ಲಿಸಿ, ವಾರ್ಡ್ ಗಳ ಹೆಸರಿನಲ್ಲಿ ಯಥಾಸ್ಥಿತಿ ಕಾಪಾಡುವಂತೆ ಕೋರಿಕೊಂಡಿದ್ದರು. ಸ್ಥಳೀಯ ನಿವಾಸಿಗಳ ಆಶೋತ್ತರವನ್ನು ಪುಸ್ಕರಿಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರದ ಸಚಿವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಿ, ವಾಸ್ತವ ಸ್ಥಿತಿಯನ್ನು ತಿಳಿಸಿಕೊಟ್ಟು ಒತ್ತಡ ಹೇರಿದ ಹಿನ್ನೆಲೆಯಲ್ಲಿ ಬದಲಾವಣೆ ಮಾಡಲಾಗಿದ್ದ ವಾರ್ಡ್ ಗಳ ಹೆಸರನ್ನು ಕ್ರಮವಾಗಿ ಯಲಹಂಕ ಓಲ್ಡ್ ಟೌನ್ ವಾರ್ಡ್ ನ್ನು ರಾಜಾ ಕೆಂಪೇಗೌಡ ವಾರ್ಡ್ ಎಂದೂ ಮತ್ತು ಪ್ರದೇಶ ಬದಲಾಯಿಸಿ ರಾಜಾಕೆಂಪೇಗೌಡ ವಾರ್ಡ್ ಎಂದು ಹೆಸರಿಟ್ಟಿದ್ದ ವಾರ್ಡ್ ನ ಹೆಸರನ್ನು ಚೌಡೇಶ್ವರಿ ವಾರ್ಡ್ ಎಂದೂ ಹಾಗೂ ಆಕಾಶ್ ವಾರ್ಡ್ ಎಂದು ಹೆಸರಿಟ್ಟಿದ್ದ ವಾರ್ಡ್ ಗೆ ವೆಂಕಟಾಲ ಅಥವಾ ಮಾರುತಿನಗರ ಎಂದು ಬದಲಾವಣೆ ಮಾಡಿ ಎಂದು ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ , ಯಲಹಂಕ ಓಲ್ಡ್ ಟೌನ್ ವಾರ್ಡ್ ಗೆ ರಾಜಾ ಕೆಂಪೇಗೌಡ ವಾರ್ಡ್ 1 ಎಂತಲೂ ಮತ್ತು ವ್ಯಾಪ್ತಿ ಬದಲಿಸಿ ರಾಜಾ ಕೆಂಪೇಗೌಡ ವಾರ್ಡ್(ಹಳೆಯ ಚೌಡೇಶ್ವರಿ ವಾರ್ಡ್) ಎಂದು ಹೆಸರು ಬದಲಾಯಿಸಿದ್ದ ವಾರ್ಡ್ ಗೆ ಈ ಹಿಂದೆ ಇದ್ದ ಚೌಡೇಶ್ವರಿ ವಾರ್ಡ್ ಎಂಬ ಹೆಸರನ್ನೇ ಪುನರ್ ಸ್ಥಾಪುಸುವ ಮೂಲಕ ಯಥಾಸ್ಥಿತಿ ಕಾಪಾಡಲಾಗಿದೆ.
ಆದರೆ ವೆಂಕಟಾಲ, ಮಾರುತಿನಗರ ಪ್ರದೇಶಕ್ಕೆ ಇಟ್ಟಿದ್ದ ಆಕಾಶ್ ವಾರ್ಡ್ ಹೆಸರನ್ನು ಬದಲಾವಣೆ ಮಾಡಿ ವೆಂಕಟಾಲ ಅಥವಾ ಮಾರುತಿನಗರ ವಾರ್ಡ್ ಎಂದು ಹೆಸರಿಡುವಂತೆ ಒತ್ತಾಯಿಸಲಾಗಿತ್ತು, ಇದು ಸಾಧ್ಯವಾಗದಿದ್ದರೆ ವಾಯುಪುತ್ರ ವಾರ್ಡ್ ಅಥವಾ ಪವನಸುತ ವಾರ್ಡ್ ಎಂದು ಬದಲಾಯಿಸುವಂತೆ ಮನವಿ ಮಾಡಲಾಗಿತ್ತು ಆದರೆ ನಮ್ಮ ಮನವಿಯನ್ನು ಮೀರಿ ಏರೋಸ್ಪೇಸ್ ವಾರ್ಡ್ ಎಂದು ಆಂಗ್ಲಭಾಷೆಯ ಹೆಸರಿಡಲಾಗಿದೆ. ಈ ಹೆಸರಿಗೂ ಈ ಪ್ರದೇಶಕ್ಕೂ ಒಂದಕ್ಕೊಂದು ಸಂಬಧವೇ ಇಲ್ಲ, ಒಂದೊಮ್ಮೆ ಏರೋಸ್ಪೇಸ್ ವಾರ್ಡ್ ಎಂಬ ಹೆಸರನ್ನೇ ಮುಂದುವರಿಸು ವುದಾದರೆ ಮೊದಲು ಹೆಸರಿಗೆ ತಕ್ಕಂತೆ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆಗಳು, ಸ್ಲಮ್ ಮುಕ್ತವಾದ ಬೃಹತ್ ಕಟ್ಟಡಗಳು ಮತ್ತು ಮೂಲಸೌಕರ್ಯಗಳನ್ನು ಕಲ್ಲಿಸಿ, ನಂತರ ಏರೋಸ್ಪೇಸ್ ವಾರ್ಡ್ ಎಂದು ಹೆಸರಿಡಲಿ ಹಾಗಾದಾಗ ಅನ್ವರ್ಥವಾಗುತ್ತದೆ, ಅದನ್ನು ಬಿಟ್ಟು ಹೆಸರಿಗೂ ಪ್ರದೇಶಕ್ಕೂ ಹೋಲಿಕೆ, ತಾದ್ಯಾತ್ಮ್ಯತೆ ಇಲ್ಲದ ಹೆಸರಿಡುವುದು ಎಷ್ಟು ಸಮಂಜಸ ಎಂದ ಅಸಮಧಾನ ವ್ಯಕ್ತಪಡಿಸಿದ ಶಾಸಕರು ಈಗಲೂ ಕಾಲ ಮಿಂಚಿಲ್ಲ, ಸ್ಥಳೀಯ ನಿವಾಸಿಗಳು ಏರೋಸ್ಪೇಸ್ ವಾರ್ಡ್ ಹೆಸರನ್ನು ಹಿಂಪಡೆದು ವೆಂಕಟಾಲ ಅಥವಾ ಮಾರುತಿನಗರ ಅಥವಾ ಪವನಸುತ ವಾರ್ಡ್ ಎಂದು ಹೆಸರಿಡುವಂತೆ ಪ್ರತಿಭಟನೆ ಮಾಡಿ ಒತ್ತಾಯಿಸುತ್ತಿದ್ದಾರೆ, ಸರ್ಕಾರ ಸ್ಥಳೀಯ ನಿವಾಸಿಗಳ ಒತ್ತಾಯವನ್ನು ಪುತಸ್ಕರಿಸಿ ಆವರ ಅಪೇಕ್ಷೆಯ ಹೆಸರಿಡುವಂತಾಗಲಿ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಿಶ್ವನಾಥಪುರ ಮಂಜುನಾಥ್, ಚೊಕ್ಕನಹಳ್ಳಿ ವೆಂಕಟೇಶ್, ವಿ.ಪವನ್ ಕುಮಾರ್, ವಿ.ವಿ.ರಾಮಮೂರ್ತಿ, ನರಸಿಂಹಮೂರ್ತಿ, ವಿ.ಎಂ.ಚಂದ್ರಯ್ಯ, ಆರ್.ಶ್ರೀನಿವಾಸಲು, ಆರ್.ನಾರಾಯಣ, ಯು.ಲಕ್ಷ್ಮೀನಾರಾಯಣ, ಮುನಿರಾಜು, ನಾಗೇನಹಳ್ಳಿ ಶಿವಕುಮಾರ್, ನಾರಯಣ ಪೈ, ಗೋಪಾಲಕೃಷ್ಣ, ಭರತ್ ಕುಮಾರ್, ಪುಟ್ಟೇನಹಳ್ಳಿ ಮುನಿರಾಜು, ನಗರ ಮಂಡಲ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ರಮಾಮುನಿರಾಜು, ಎಚ್.ಎಸ್. ಕಿರಣ್,‌ ಮಂಜುನಾಥ್, ಯಲಹಂಕ ಜಯಣ್ಣ, ಗಿರೀಶ್, ದಾಮೋದರ್, ಧನು, ಸಂದೀಪ್, ಜಯಂತ್ ಸೇರಿದಂತೆ ಇನ್ನಿತರರಿದ್ದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthau kogilu layout

Yelahanka Bangalore Karnataka

9845085793

7349337989

Leave a Reply

Your email address will not be published. Required fields are marked *