



ಯಲಹಂಕ : ಕ್ಷೇತ್ರದ ಅರಕೆರೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಅದೇ ಗ್ರಾಮದ ರಾಮೆಲ್ಲಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅರಕೆರೆ ಗ್ರಾ.ಪಂ.ಯಲ್ಲಿ ಒಟ್ಟು 22 ಮಂದಿ ಸದಸ್ಯ ರಿದ್ದು, ಉಪಾಧ್ಯಕ್ಷರಾಗಿದ್ದ ಚನ್ನಪ್ಪ ಅವರ ರಾಜಿನಾಮೆ ಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ನಡೆದ ಉಪಾಧ್ಯಕ್ಷರ ಆಯ್ಕೆ ಚುನಾವಣಾ ಪ್ರಕ್ರಿಯೆಯಲ್ಲಿ ರಾಮೆಲ್ಲಪ್ಪ ಅವರೊಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
ನೂತನ ಉಪಾಧ್ಯಕ್ಷರನ್ನು ಹಲವು ಮುಖಂಡರು, ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ಸನ್ಮಾನಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಬಮೂಲ್ ನಿರ್ದೇಶಕ ಸತೀಶ್ ಕಡತನಮಲೆ, ಹಿರಿಯ ಬಿಜೆಪಿ ಮುಖಂಡ ಎಸ್.ಎನ್.ರಾಜಣ್ಣ, ತಾ.ಪಂ.ಮಾಜಿ ಅಧ್ಯಕ್ಷ ಮುನಿದಾಸಪ್ಪ, ಅರಕೆರೆ ಗ್ರಾ.ಪಂ.ಅಧ್ಯಕ್ಷೆ ಶಾಂತಮ್ಮ, ಮಾಜಿ ಅಧ್ಯಕ್ಷರಾದ ಕೆ.ಆರ್.ತಿಮ್ಮೇಗೌಡ, ಲಕ್ಷ್ಮೀನಾರಾಯಣಗೌಡ, ಮುನಿಲಕ್ಷ್ಮಮ್ಮ ಪರಶುರಾಮ್, ಆಂಜಿನಮ್ಮ ಚೌಡಪ್ಪ, ಶಶಿಕುಮಾರ್ ಬಿ.ಸಿ. ಮಾಜಿ ಉಪಾಧ್ಯಕ್ಷರಾದ ಕೆ.ಎಂ.ಅರಸೇಗೌಡ, ಮಂಜುನಾಥ್, ಮಂಜುಳ, ನೇತ್ರಾವತಿ ಅಂಬರೀಶ್, ಪದ್ಮಮುನಿಕೃಷ್ಣ ಸೇರಿದಂತೆ ಗ್ರಾ.ಪಂ.ಸದಸ್ಯರಿದ್ದರು.
