




ಯಲಹಂಕ : ಯಲಹಂಕ ಉಪನಗರ ನಗರ ವ್ಯಾಪ್ತಿಯ ಅಲ್ಲಾಳಸಂದ್ರ ಮುಖ್ಯ ರಸ್ತೆಯ ಪಾದಚಾರಿ ಮಾರ್ಗ, ಒಳಚರಂಡಿ, ವೈಟ್ ಟ್ಯಾಪಿಂಗ್ ಸೇರಿದಂತೆ 18.21 ಕೋಟಿ ರು. ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಆರ್. ವಿಶ್ವನಾಥ್ ಶನಿವಾರ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ‘ಬೃಹತ್ ಕಾಮಗಾರಿ ನಿರ್ವಹಣೆ ಅನುದಾನದ ಅಡಿಯಲ್ಲಿ ಇಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಯಲಹಂಕ ಉಪನಗರದ ಅಲ್ಲಾಳಸಂದ್ರದ 13ನೇ ‘ಎ’ ಮುಖ್ಯರಸ್ತೆಯಲ್ಲಿ ಪಾದಚಾರಿ ಮಾರ್ಗ, ಒಳಚರಂಡಿ ಮತ್ತು ವೈಟ್ ಟ್ಯಾಪಿಂಗ್ ಹಾಗೂ ಅಲ್ಲಾಳಸಂದ್ರ ಆರ್.ಓ.ಬಿ. ಯಿಂದ ಅಲ್ಲಾಳಸಂದ್ರ ಕೆರೆ ಮಾರ್ಗವಾಗಿ, 13ನೇ ‘ಎ’ ಮುಖ್ಯರಸ್ತೆಯಿಂದ 3ನೇ ಅಡ್ಡರಸ್ತೆಯವರೆಗೆ ಪಾದಚಾರಿ ಮಾರ್ಗ, ಒಳಚರಂಡಿ ಮತ್ತು ವೈಟ್ ಟ್ಯಾಪಿಂಗ್ ಸೇರಿದಂತೆ ಸುಮಾರು 18.21ಕೋಟಿ ರು.ಅಂದಾಜು ವೆಚ್ಚದ ಬೃಹತ್ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದ್ದು, ಯಲಹಂಕ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯ ಅನುದಾನ ನೀಡಿ ಸಹಕರಿಸಿರುವ ಸರ್ಕಾರದ ನಡೆಗೆ ಧನ್ಯವಾದ ತಿಳಿಸಿದರು.
ಇದೇ ಸಂದರ್ಭದಲ್ಲಿ ಯಲಹಂಕ ನಗರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಪವನ್, ಓಬಿಸಿ ಮೋರ್ಚಾ ಅಧ್ಯಕ್ಷ ಮುನಿರಾಜು, ಮಾಜಿ ಅಧ್ಯಕ್ಷ ಮಧುಸೂದನ್, ಯಲಹಂಕ ಉಪನಗರ ವಾರ್ಡ್ ಬಿಜೆಪಿ ಅಧ್ಯಕ್ಷ ರಾಜಣ್ಣ, ಅಟ್ಟೂರು ವಾರ್ಡ್ ಅಧ್ಯಕ್ಷ ನಾರಾಯಣಸ್ವಾಮಿ, ಬಿಜೆಪಿ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್, ರಮೇಶ್, ವೈ.ಜಿ.ವಸಂತ್, ಗೌತಮ್, ಚಂದ್ರೇಗೌಡ, ಓಂ ರವೀಂದ್ರ, ಎಸ್ಟಿ ಮೋರ್ಚಾದ ಮೋಹನ್, ಯುವ ಮೋರ್ಚಾ ಅಧ್ಯಕ್ಷ ಎಚ್ ಎಸ್ ಕಿರಣ್, ಯಲಹಂಕ ಜಯಣ್ಣ, ದಾಮೋದರ್, ವೀರಭದ್ರೇಗೌಡ, ಗುತ್ತಿಗೆದಾರ ಉಮೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಾಮಸಂಜೀವಯ್ಯ, ವಿನಾಯಕ ಸೇರಿದಂತೆ ಇನ್ನಿತರರಿದ್ದರು.
ಬಾಕ್ಸ್ :
ಪೋಸ್ಟರ್ ಅಂಟಿಸಿ ನಗರದ ಅಂದಗೆಡಿಸುವವರ ವಿರುದ್ಧ ಕ್ರಮಕೈಗೊಳ್ಳಿ : ಅಧಿಕಾರಿಗಳಿಗೆ ವಿಶ್ವನಾಥ್ ಸಲಹೆ :
‘ನಗರದ ಮೇಲ್ಸೇತುವೆ, ಸರ್ಕಾರಿ ಕಟ್ಟಡಗಳು ಮತ್ತು ಇನ್ನಿತರ ಜಾಗಗಳಲ್ಲಿ ಜನ್ಮದಿನ, ಖಾಸಗಿ ಕಾರ್ಯಕ್ರಮ ಗಳ ಪೋಸ್ಟರ್, ಬಿತ್ತಿಪತ್ರಗಳನ್ನು ಅಂಟಿಸಿ ನಗರದ ಅಂದಗೆಡಿಸುವವರು ಯಾವುದೇ ಪಕ್ಷದವರಿರಲಿ, ಎಂತಹ ಪ್ರಭಾವಶಾಲಿಗಳೇ ಇರಲಿ ಅವರ ವಿರುದ್ಧ ಅಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳಬೇಕು, ಇವರಿಗೆ ಪೋಸ್ಟರ್ ಅಂಟಿಸುವುದು ಮಾತ್ರ ಗೊತ್ತು, ಕಾಲಮಿತಿ ಮುಗಿದ ಮೇಲೆ ಅವುಗಳನ್ನು ತೆರವುಗೊಳಿಸುವುದು ಗೊತ್ತಿರುವುದಿಲ್ಲ. ಇವರು ಅಂಟಿಸುವ ಪೋಸ್ಟರ್, ಬಿತ್ತಿಪತ್ರಗಳನ್ನು ನಾವು ಕಿಲ್ ಬಿಲ್ ಅಭಿಯಾನದ ಮೂಲಕ ಪ್ರತಿ ತಿಂಗಳು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಎಷ್ಟೇ ಸ್ವಚ್ಛ ಮಾಡಿದರೂ, ಪೋಸ್ಟರ್ ಗಳ ನಿಶಾನೆಯನ್ನು ಸಂಪೂರ್ಣವಾಗಿ ತೆಗೆದು ಹಾಕಲು ಸಾಧ್ಯವಾಗು ವುದಿಲ್ಲ. ಒಂದು ವೇಳೆ ತಮ್ಮ ಜನ್ಮದಿನದ ಅಥವಾ ಖಾಸಗಿ ಕಾರ್ಯಕ್ರಮಗಳನ್ನು ಪ್ರಚಾರ ಮಾಡಲೇಬೇಕಾದ ಅಗತ್ಯತೆ ಯಿದ್ದರೆ, ಸುರಕ್ಷಿತ ಸ್ಥಳ ಗಳಲ್ಲಿ ಚಿಕ್ಕಪುಟ್ಟ ಫ್ಲೆಕ್ಸ್ ಹಾಕಿಸಿ, ಕಾರ್ಯಕ್ರಮದ ಕಾಲಮಿತಿ ಮುಗಿದ ಮೇಲೆ ತೆರವುಗೊಳಿಸಲಿ, ಅದನ್ನು ಬಿಟ್ಟು ಸರ್ಕಾರಿ ಕಟ್ಟಡಗಳು, ಸೇತುವೆಗಳಂತಹ ಸಾರ್ವಜನಿಕ ಆಸ್ತಿಗಳ ಮೇಲೆ ವೈಯಕ್ತಿಕ ಕಾರ್ಯ ಕ್ರಮಗಳ ಪೋಸ್ಟರ್ ಗಳನ್ನು ಅಂಟಿಸಿ ಅಂದಗೆಡಿ ಸುವುದು ಎಷ್ಟು ಸಮಂಜಸ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಇಂಥವರ ವಿರುದ್ಧ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತಾಗ ಬೇಕು ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಸಲಹೆ ನೀಡಿದರು.
