ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ :
ಬೆಟ್ಟಹಲಸೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ಕೈಗೊಂಡಿದ್ದ ಕಾಮಗಾರಿಗಳು :
ಯಲಹಂಕ. ಬ್ಯಾಟರಾಯನಪುರ :      ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರು ಗ್ರಾಮದ ನಮ್ಮೂರ ಸರ್ಕಾರಿ ಶಾಲೆ ಆಟದ ಮೈದಾನದ ಆವರಣದಲ್ಲಿ ನಿರ್ಮಾಣಗೊಂಡಿದ್ದ ಶಾಲಾ ಆಟದ ಮೈದಾನದ ದಾನಿಗಳಾದ ಹುಣಸಮಾರನಹಳ್ಳಿ ಶ್ರೀ ಮಠದ ಹಿರಿಯ ಸ್ವಾಮೀಜಿ ಗಳಾದ ಶ್ರೀ ಪಟ್ಟದ ಶ್ರೀ ಪರ್ವತರಾಜ ಶಿವಾಚಾರ್ಯ ಸ್ವಾಮಿಗಳ‌ ಕಂಚಿನ ಪುತ್ಥಳಿ ಅನಾವರಣ, ನೂತನ ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್, ತೆರೆದ ವ್ಯಾಯಾಮ ಶಾಲೆ, ಆಟದ ಮೈದಾನ, ನೆಲಸಂಪು, ಸೋಲಾರ್ ದೀಪಗಳ‌‌ ಉದ್ಘಾಟನೆ, ಕಾಂಕ್ರೀಟ್ ಫೆವರ್ಸ್ ರಸ್ತೆ, ಬೆಟ್ಟಹಲಸೂರು ಗ್ರಾಮದ ಸರ್ವೆ ನಂ.259ರಲ್ಲಿ ನಿರ್ಮಾಣಗೊಂಡಿದ್ದ 2 ಎನ್.ಆರ್.ಎಂ.ಎಲ್.ಶೆಡ್ ಗಳು, ಗ್ರಂಥಾಲಯದಲ್ಲಿ‌ ನಿರ್ಮಿಸಿದ್ದ ಓದುವ ಕೊಠಡಿ, ಬೆಟ್ಟಹಲಸೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರ ಕಛೇರಿ, ನೆಲ್ಲುಕುಂಟೆ ಗ್ರಾಮದಲ್ಲಿ ನಿರ್ಮಿಸಿದ್ದ ಕೂಸಿನ‌ ಮನೆ ಸೇರಿದಂತೆ ನೂತನವಾಗಿ ನಿರ್ಮಾಣಗೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಶನಿವಾರ ಲೋಕಾರ್ಪಣೆ ಮಾಡಿದರು.
ನಂತರ ಮಾತನಾಡಿದ ಅವರು ‘ಕಳೆದ ಹಲವು ದಿನಗಳಿಂದ ಬೆಟ್ಟಹಲಸೂರು ಗ್ರಾಮದಲ್ಲಿ ಸರ್ಕಾರಿ ಶಾಲೆಯ ಆಟದ ಮೈದಾನ, ತೆರೆದ ವ್ಯಾಯಾಮ ಶಾಲೆ, ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್ ಸೇರಿದಂತೆ ಹಲವು ಕಾಮಗಾರಿಗಳು ನಿರ್ಮಾಣ ಹಂತದಲ್ಲಿದ್ದವು, ಕಾಮಗಾರಿ ಪ್ರಗತಿಯನ್ನು ಕಾಲ ಕಾಲದಲ್ಲಿ ಬಂದು ವೀಕ್ಷಿಸುವ ಕೆಲಸವನ್ನು ನಾನು ಮತ್ತು ನಮ್ಮ ಮುಖಂಡರು ಹಾಗೂ ಬೆಟ್ಟಹಲಸೂರು ಗ್ರಾಮದ ಮುತ್ಸದ್ದಿ ಗ್ರಾಮಸ್ಥರು ಮಾಡಿದ್ದೆವು. ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಅವುಗಳನ್ನು ಲೋಕಾರ್ಪಣೆ ಮಾಡಿದ್ದೇವೆ. ಈ ಎಲ್ಲಾ ಸೌಲಭ್ಯಗಳ ಸದುಪಯೋಗವನ್ನು ಬೆಟ್ಟಹಲಸೂರು ಸರ್ಕಾರಿ ಶಾಲೆಯ ಮಕ್ಕಳು ಪಡೆದುಕೊಳ್ಳುವ ಮೂಲಕ ಶಿಕ್ಷಣದ ಜೊತೆಗೆ ಕ್ರೀಡಾ ಸಾಧಕರಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.
ಹುಣಸಮಾರನಹಳ್ಳಿ ಶ್ರೀ ಮಠದ ಪಟ್ಟದ ಶ್ರೀ ಗುರು ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಹತ್ವದ ಈ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದು, ಕಾರ್ಯಕ್ರಮದಲ್ಲಿ ಬೆಟ್ಟಹಲಸೂರು ಗ್ರಾ.ಪಂ.ಅಧ್ಯಕ್ಷೆ ಹೇಮಾವತಿ ಎಸ್.ನಾಗರಾಜ್ ಬಾಬು, ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್ ನ ನಿರ್ಮಾತೃ ಪಂಚಮಿ ಶ್ರೀನಿವಾಸ್ ಬಿ.ಎನ್., ತಾ.ಪಂ‌.ಮಾಜಿ ಸದಸ್ಯ ನಾಗರಾಜ್ ಬಾಬು, ಬೆಟ್ಟಹಲಸೂರು ಗ್ರಾ.ಪಂ‌.ಮಾಜಿ ಅಧ್ಯಕ್ಷರಾದ ಬಿ.ಎಂ.ನಾಗೇಶ್, ಬಿ.ಎಸ್.ಅನಿಲ್ ಕುಮಾರ್, ಶಾಲಾ ಮೈದಾನ ಅಭಿವೃದ್ಧಿ ಪ್ರೋತ್ಸಾಹಕರು, ಪಡುಕೋಣೆ ದ್ರಾವಿಡ್ ಸೆಂಟರ್ ಆಫ್ ಸ್ಪೋರ್ಟ್ಸ್ ಎಕ್ಸಲೆನ್ಸ್ ನ ಸಂಸ್ಥಾಪಕ ನಿರ್ದೇಶಕ ವಿವೇಕ್ ಕುಮಾರ್, ತಾ.ಪಂ‌.ಕಾರ್ಯ ನಿರ್ವಾಹಕ ಅಧಿಕಾರಿ ಮಧು, ಪಿ.ಡಿ.ಓ. ಲೋಕನಾಥ್ ಪಿ.ಎಸ್., ಗ್ರಾ.ಪಂ.ಸದಸ್ಯರಾದ ಬಿ.ವೈ.ಮಂಜುನಾಥ್, ಬಿ.ಆರ್.ರಾಮಾಂಜಿನಿ, ರತ್ನಮ್ಮ ಟಿ.ಪಿ.ಆಂಜಿನಪ್ಪ, ವಿಮಲಾ ಗಣೇಶ್, ರಮ್ಯ ವೇಣುಗೋಪಾಲ್, ಸಾವಿತ್ರಮ್ಮ ಮುನಿರಾಜು, ತುಳಸಮ್ಮ ವೆಂಕಟರಮಣಪ್ಪ, ಮಮತಾ ಪ್ರಶಾಂತ್, ಸವಿತಾ ಕೃಷ್ಣಮೂರ್ತಿ, ಮೋಹನ್ ಸಿದ್ಧರಾಜು, ನಾಗರತ್ನ ಸುಬ್ರಮಣಿ, ಬಾಲರಾಜು, ಸುಮಿತ್ರಮ್ಮ ರಾಜಣ್ಣ, ಸುವರ್ಣ ಜಯಣ್ಣ, ಮುನಿಕೃಷ್ಣಪ್ಪ, ಆನಂದ್, ರಾಜಣ್ಣ, ರಾಮಮೂರ್ತಿ, ಪ್ರೇಮ ಚಂದ್ರಮೂರ್ತಿ, ಪಂಚಾಯತಿ ಕಾರ್ಯದರ್ಶಿ ಎಂ.ಸುಬ್ರಮಣ್ಯ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *