ಸೇವಾ ಕಾರ್ಯಗಳ ಮೂಲಕ ಗಂಗೊಂಡಹಳ್ಳಿ ಲಕ್ಷ್ಮಣ್ ಗೌಡ ಜನ್ಮದಿನಾಚರಣೆ :
ಮುಖಂಡರು, ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳಿಂದ ಶುಭ ಹಾರೈಕೆ :
ಯಲಹಂಕ : ಕ್ಷೇತ್ರದ ದಾಸನಪುರ ಹೋಬಳಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಿ.ವಿ.ಲಕ್ಷ್ಮಣ್ ಗೌಡ ಅವರ ಜನ್ಮದಿನಾಚರಣೆಯನ್ನು ಶಾಲಾ ಮಕ್ಕಳಿಗೆ ಸಿಹಿ ವಿತರಣೆ, ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮುಂತಾದ ಸೇವಾ ಕಾರ್ಯಗಳ ಮೂಲಕ ಸಾರ್ಥಕ ರೀತಿಯಲ್ಲಿ ಆಚರಿಸಲಾಯಿತು.
ಜನ್ಮದಿನದ ಪ್ರಯುಕ್ತ ಲಕ್ಷ್ಮಣ್ ಗೌಡ ಅವರ ಸ್ನೇಹಿತರು ಮತ್ತು ಅಭಿಮಾನಿಗಳು ಅವರ ಸ್ವಗ್ರಾಮ ಗಂಗೊಂಡಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಕ್ಷ್ಮಣ್ ಗೌಡ ಅವರ ಸ್ನೇಹಿತರು, ಮುಖಂಡರು, ಹಿತೈಷಿಗಳು, ಅಭಿಮಾನಿಗಳು ಕೇಕ್ ಕತ್ತರಿಸಿ, ಲಕ್ಷ್ಮಣ್ ಗೌಡ ಅವರಿಗೆ ಸನ್ಮಾನಿಸಿ ಶುಭ ಹಾರೈಸಿದರು.
ಲಕ್ಷ್ಮಣ್ ಗೌಡ ಅವರ ಜನ್ಮದಿನದ ಪ್ರಯುಕ್ತ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್, ಬಿಜೆಪಿ ಯುವ ಮುಖಂಡರು, ವಿಶ್ವವಾಣಿ ಫೌಂಡೇಶನ್ ನ ನಿರ್ದೇಶಕರಾದ ಅಲೋಕ್ ವಿಶ್ವನಾಥ್, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ, ಬಮೂಲ್ ನಿರ್ದೇಶಕ ಸತೀಶ್ ಕಡತನಮಲೆ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಜಿ. ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥಪುರ ಮಂಜುನಾಥ್, ಜಿ.ಪಂ.ಮಾಜಿ ಸದಸ್ಯರಾದ ಚೊಕ್ಕನಹಳ್ಳಿ ವೆಂಕಟೇಶ್, ಕೊಳ್ಳಿಗಾನಹಳ್ಳಿ ವೆಂಕಟೇಶ್, ರೈತ ಮೋರ್ಚಾ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಜಿ.ಜೆ.ಮೂರ್ತಿ, ಯಲಹಂಕ ಗ್ರಾ.ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ದಾಸನಪುರ ಹೋಬಳಿ ಮಹಿಳಾ ಮೋರ್ಚಾ ಅಧ್ಯಕ್ಷರು, ಮಾಚೋಹಳ್ಳಿ ಗ್ರಾ.ಪಂ.ಮಾಜಿ‌ ಅಧ್ಯಕ್ಷರಾದ ಸರಸ್ವತಿ ಮಾಯಣ್ಣ, ಗ್ರಾ.ಪಂ‌.ಸದಸ್ಯರಾದ ಸತೀಶ್, ಆನಂದ್, ಮುಖಂಡರಾದ ಪಟೇಲ್ ಗಂಗರಾಜು, ಶ್ರೀ ವಾಗ್ದೇವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಹನುಮಂತರಾಜು, ಬಿಜೆಪಿ ಯುವ ಮುಖಂಡರಾದ ವೇಣುಗೌಡ,ಲೋಕೇಶ್, ಲೋಹಿತ್, ನಾಗಮಂಡಲ ತಾಲ್ಲೂಕು ಯುವ ಜನತಾದಳ ಅಧ್ಯಕ್ಷ ಕಿರಣ್ ಕುಮಾರ್ ಸೇರಿದಂತೆ ಹಲವು ಗಣ್ಯರು ಲಕ್ಷ್ಮಣ್ ಗೌಡ ಅವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸಿದರು.

Leave a Reply

Your email address will not be published. Required fields are marked *