ಸಾವಿನಲ್ಲೂ ಜೊತೆಯಾದ ದಂಪತಿಗಳು :

ಯಲಹಂಕ : ಅರವತ್ತೈದು ವರ್ಷಗಳಿಗೂ ಹೆಚ್ಚು ವರ್ಷ ಜೊತೆಯಾಗಿ ಸಾರ್ಥಕ ಸಂಸಾರ ಮಾಡಿ ಸಾವಿನಲ್ಲೂ ಜೊತೆಯಾಗಿರುವ ವಿಶೇಷ ಘಟನೆಯೊಂದು ಯಲಹಂಕ ನಗರದ ಅಟ್ಟೂರು ವಾರ್ಡ್ ವ್ಯಾಪ್ತಿಯ ಅನಂತಪುರದ ಮಹಾಲಕ್ಷ್ಮಿ ಬಡಾವಣೆಯಲ್ಲಿ ನಡೆದಿದೆ.

ಟಿ.ಸಿ.ವೆಂಕಟಗಿರಿಯಪ್ಪ(88), ಆರ್.ಎಂ.ನಾಗರತ್ನಮ್ಮ(82) ಮೃತ ದಂಪತಿಗಳಾಗಿದ್ದು, ಭಾನುವಾರ ಬೆಳಿಗ್ಗೆ 6 ಗಂಟೆಗೆ ಪತಿ ಟಿ‌‌.ಸಿ.ವೆಂಕಟಗಿರಿಯಪ್ಪ ನವರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದು, ಪತಿಯ ಸಾವಿನ ಸುದ್ದಿ ಕೇಳಿದ ಪತ್ನಿ ನಾಗರತ್ನಮ್ಮ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕುಸಿದು ಪ್ರಾಣ ಬಿಟ್ಟಿದ್ದಾರೆ. ಈ ಮೂಲಕ ದಂಪತಿಗಳು ಬದುಕಿನ ಜೊತೆಗೆ ಸಾವಿನಲ್ಲೂ ಸಹ ಜೊತೆಯಾಗಿರುವುದು ಅತ್ಯಂತ ವಿರಳ ಮತ್ತು ವಿಶೇಷ ಸಂಗತಿಯಾಗಿದೆ.

ಮೃತ ದಂಪತಿಗಳು ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಮೊಮ್ಮಕ್ಕಳು, ಮರಿಮೊಮ್ಮಕ್ಕಳನ್ನು ಅಗಲಿದ್ದಾರೆ.

ಟಿ.ಸಿ.ವೆಂಕಟಗಿರಿಯಪ್ಪನವರು ಮೂಲತಃ ಚಿಂತಾಮಣಿ ಯವರಾಗಿದ್ದು, ಕಂದಾಯ ಇಲಾಖೆಯಲ್ಲಿ ಸರ್ವೇಯರ್ ಆಗಿ ಸುದೀರ್ಘ ಕಾಲದ ಸೇವೆ ಸಲ್ಲಿಸಿ, 28 ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದು, ಪುತ್ರ, ಯಲಹಂಕ ನ್ಯೂ ಟೌನ್ ಕ್ಲಬ್ ನ ಕಾರ್ಯದರ್ಶಿವಿ.ಮಂಜುನಾಥ್ ಅವರೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿದ್ದರು. ಭಾನುವಾರ ಬೆಳಿಗ್ಗೆ 6 ಗಂಟೆಗೆ ಟಿ.ಸಿ.ವೆಂಕಟಗಿರಿಯಪ್ಪ ನವರು ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದು, ಪತಿಯ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾಗಿ ಪತ್ನಿ ನಾಗರತ್ನಮ್ಮ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಬದುಕಿನಲ್ಲಿ ಜೊತೆಯಾದ ಪತಿಯೊಂದಿಗೆ ಸಾವಿನಲ್ಲೂ ಜೊತೆಯಾಗುವ ಮೂಲಕ ವಿಶೇಷತೆಯ ಜೊತೆಗೆ ಅಚ್ಚರಿ ಮೂಡಿಸಿದ್ದಾರೆ.

ಮೃತರ ಅಂತಿಮ ಸಂಸ್ಕಾರವನ್ನು ಯಲಹಂಕ ಕ್ಷೇತ್ರದ ಮೇಡಿ ಅಗ್ರಹಾರದ ಚಿತಾಗಾರದಲ್ಲಿ ಭಾನುವಾರ ಮದ್ಯಾಹ್ನ 2 ಗಂಟೆಗೆ ನೆರವೇರಿಸುವುದಾಗಿ ಪುತ್ರ ವಿ.ಮಂಜುನಾಥ್ ತಿಳಿಸಿದ್ದಾರೆ.

ಟಿ.ಸಿ.ವೆಂಕಟಗಿರಿಯಪ್ಪ ಮತ್ತು ಆರ್.ಎಂ‌. ನಾಗರತ್ನಮ್ಮ ಅವರ ನಿಯಮಕ್ಕೆ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್, ಬಿಜೆಪಿ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್, ಡಾ.ಶಶಿಕುಮಾರ್, ರಾಜಾನುಕುಂಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ನ್ಯೂಟೌನ್ ಕ್ಲಬ್ ನ ನಿರ್ದೇಶಕರಾದ ಎಸ್.ಜಿ.ನರಸಿಂಹಮೂರ್ತಿ (ಎಸ್.ಟಿ.ಡಿ.ಮೂರ್ತಿ, ಕ್ಕಬ್ ನ ಅಧ್ಯಕ್ಷ ದೇವರಾಜಪ್ಪ, ಹರ್ಷವರ್ಧನ್, ಬಾಲು ಸೇರಿದಂತೆ ಕ್ಲಬ್ ನ ನಿರ್ದೇಶಕರು ಹಾಗೂ ಹಲವು ಬಿಜೆಪಿ ಮುಖಂಡರು, ಮೃತರ ಸಂಬಂಧಿಗಳು, ಬಂದು ಮಿತ್ರರು ಶೋಕ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *