





ವರದಿ: ಮುಬಷೀರ್ ಅಹಮದ್
ಜನರ ಜೀವ ಉಳಿಸುವುದೇ ನಿಜವಾದ ಹೀರೋಯಿಸಂ ಸಂಸದ ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲ್ಲೂಕಿನ ಚೆಂಡೂರು ಕ್ರಾಸ್ ಬಳಿಯಿರುವ ಕೋಮಲ್ ಗಾರ್ಡನ್ ಹೋಟೆಲ್ ನಲ್ಲಿ ಹಂಪಸಂದ್ರ ಮತ್ತು ತಿರುಮಣಿ ಗ್ರಾಮ ಪಂಚಾಯತ್ ನ ಸುಮಾರು 2000 ದ್ವಿಚಕ್ರ ವಾಹನ ಸವಾರರಿಗೆ ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮವನ್ನು ಹರಿನಾಥರೆಡ್ಡಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ, ಮಾತನಾಡಿದ ಸಂಸದ ಡಾ.ಕೆ. ಸುಧಾಕರ್, ನಮ್ಮ ದೇಶದಲ್ಲಿ ಪ್ರತಿದಿನ ಅಪಘಾತಗಳಿಂದ ನೂರಾರು ಜನರು ಸಾವುನ್ನುಪ್ಪುತ್ತಿದ್ದಾರೆ. ಇದರಿಂದ ಹಲವಾರು ಕುಟುಂಬಗಳು ಬೀದಿಪಾಲು ಆಗುತ್ತಿವೆ. ಶೇ. 50ರಷ್ಟು ಅಪಘಾತಗಳು ಹೆಲ್ಮೆಟ್ ಧರಿಸದೇ ಇರುವಂತಹ ದ್ವಿಚಕ್ರ ವಾಹನ ಸವಾರರಿಂದ ಅಪಘಾತಗಳಾಗಿ ಪ್ರಾಣ ಹಾನಿಯಾಗುತ್ತಿದೆ. ಅಪಘಾತಗಳು ಆದಾಗ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆಯನ್ನು ಕೊಡಿಸಿ ಜೀವ ಉಳಿಸುವುದೇ ನಿಜವಾದ ಹೀರೋಯಿಸಂ. ಈ ಕೆಲಸವನ್ನು ಸಮಾಜ ಸೇವಕರಾದ ಹರಿನಾಥರೆಡ್ಡಿರವರು ಮಾಡುತ್ತಿದ್ದಾರೆ.
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಹರಿನಾಥರೆಡ್ಡಿರವರು ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರಿಗೆ ಉತ್ತಮ ಗುಣಮಟ್ಟದ ಹೆಲ್ಮೆಟ್ ಗಳನ್ನು ನೀಡುತ್ತಿರುವುದು ಉತ್ತಮ ಸಮಾಜಿಕ ಕೆಲಸವಾಗಿದೆ. ಅದ್ದರಿಂದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಜನರ ಆಶೀರ್ವಾದ ಹರಿನಾಥರೆಡ್ಡಿರವರ ಮೇಲೆ ಸದಾ ಇರಲಿ, ಇನ್ನು ಉತ್ತಮ ಸಮಾಜ ಸೇವೆಯನ್ನು ಮಾಡಲಿ ಎಂದು ಆಶಿಸುತ್ತೇನೆ ಎಂದರು.
ಸಮಾಜ ಸೇವಕರಾದ ಹರಿನಾಥರೆಡ್ಡಿ ಅವರು ಮಾತನಾಡಿ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು, ತಾಲ್ಲೂಕುಗಳ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ನ್ನು ನೀಡಲಾಗುವುದು. ಹೆಲ್ಮೆಟ್ ಧರಿಸುವುದರಿಂದ ಅಮೂಲ್ಯವಾದ ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 25,000 ರಿಂದ 40,000 ಹೆಲ್ಮೆಟ್ ಗಳನ್ನು ದ್ವಿಚಕ್ರ ವಾಹನ ಸವಾರಾರರಿಗೆ ವಿತರಣೆ ಮಾಡಲಾಗುವುದು. ಇದರಲ್ಲಿ ಯಾವುದೇ ಪಕ್ಷದವರು ಇರಲಿ, ಪಕ್ಷಾತೀತವಾಗಿ ಹೆಲ್ಮೆಟ್ ಗಳನ್ನು ನೀಡಲಾಗುವುದು. ಈಗಾಗಲೇ ಸಂಸದರಾದ ಡಾ.ಕೆ.ಸುಧಾಕರ್ ರವರ ಸಲಹೆ ಮೇರೆಗೆ ಗುಡಿಬಂಡೆ ತಾಲ್ಲೂಕಿನಲ್ಲಿ ಡಿಸಿಸಿ
ಬ್ಯಾಂಕ್, ಪಿ.ಎಲ್.ಡಿ ಬ್ಯಾಂಕ್, ಟಿಎಪಿಎಂಸಿ ಚುನಾವಣೆಗಳಲ್ಲಿ ಎನ್ ಡಿಎ ಒಕ್ಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಿದರೇ ಮುಂದೆ ಬರುವಂತಹ ಪಟ್ಟಣ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಎನ್ ಡಿ ಎ ಒಕ್ಕೂಟ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಂಸದ ಡಾ.ಕೆ.ಸುಧಾಕರ್ ಅವರ ಸಲಹೆ ಸೂಚನೆ ಅವರ ಆಶೀರ್ವಾದ ಅಗತ್ಯವಾಗಿರುತ್ತದೆ. ಏಕೆಂದರೆ
ಡಾ.ಕೆ.ಸುಧಾಕರ್ ಅವರು ಮಂತ್ರಿಗಳಾದ ಸಂದರ್ಭದಲ್ಲಿ ಹಲವಾರು ಯೋಜನೆಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಹಮ್ಮಿಕೊಂಡು ಮುಖ್ಯವಾಗಿ ವೈದ್ಯಕೀಯ ಆಸ್ಪತ್ರೆ, ನಂದಿ ಹಿಲ್ಸ್ ನ ರೂಪವೇ ಹಾಗೂ ಹೆಚ್ಎನ್ ವ್ಯಾಲಿ ನೀರು ಈ ಭಾಗಕ್ಕೆ ತರವುದು ಹೀಗೆ ಹಲಾವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಆದರೆ ಬಾಗೇಪಲ್ಲಿ ಶಾಸಕರು ಮೂರು ಬಾರಿ ಗೆದ್ದರು ಬಾಗೇಪಲ್ಲಿ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ.
ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಉತ್ತಮವಾದ ರಸ್ತೆಗಳಿಲ್ಲ, ಉತ್ತಮವಾದ ಆಸ್ಪತ್ರೆಗಳಿಲ್ಲ, ಉತ್ತಮವಾದ ಬಸ್ ನಿಲ್ದಾಣಗಳಿಲ್ಲ ಹೀಗೆ ಬಾಗೇಪಲ್ಲಿ ಅಭಿವೃದ್ಧಿ ಸಂಪೂರ್ಣವಾಗಿ ಶೂನ್ಯವಾಗಿದೆ. ಅದರಿಂದ ಮುಂದಿನ ದಿನಗಳಲ್ಲಿ ಎನ್ ಡಿಎ ಒಕ್ಕೂಟದ ಅಭ್ಯರ್ಥಿಗಳಿಗೆ ಜನರು ಆಶೀರ್ವಾದ ಮಾಡುವ ಮುಖಾಂತರ ಅವರ ಗೆಲುವಿಗೆ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಒಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪರೆಡ್ಬಿ , ಜಿಲ್ಲಾ ಬಿಜೆಪಿಯ ಮಾಜಿ ಅಧ್ಯಕ್ಷ ರಾಮಲಿಂಗಪ್ಪ, ಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕರು ವೆಂಕಟಶಿವಾರೆಡ್ಡಿ,ಜೆಪಿ ಚಂದ್ರಶೇಖರರೆಡ್ಡಿ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ್, ಪುರಸಭೆಯ ಮಾಜಿ ಉಪಾಧ್ಯಕ್ಷ ಅ.ನಾ ಮೂರ್ತಿ, ಬಿಜೆಪಿಯ ಮುಖಂಡರಾದ ಗೋಪಾಲಕೃಷ್ಣ,ಗುಡಿಬಂಡೆಯ ಒಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ, ಬಿಜೆಪಿ ಪಕ್ಷದ ಶ್ರೀಮತಿ ಪದ್ಮಾವತಿ,ಚಂದ್ರ ಶೇಖರ್, ಮುಖಂಡರಾದ ಪಾಚೇನಹಳ್ಳಿ ನಾಗರಾಜರೆಡ್ಡಿ,ಶ್ರೀನಿವಾಸ್, ಗಾಂಧೀ,ಗಣೇಶ್, ನರೇಶ್ ಲೋಕೇಶ್, ಸುನಿಲ್ ಒಳಗೊಳಂತೆ ಮತ್ತಿತರರು ಹಾಜರಿದ್ದರು.
