ರಾಜ್ಯ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ :

ಕೋಗಿಲು ಉಳಿಸಿ ಅಕ್ರಮ ವಲಸಿಗರನ್ನು ತೊಲಗಿಸಿ :

ರಾಜ್ಯ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ :

ಬ್ಯಾಟರಾಯನಪುರ : ಕೋಗಿಲು ಬಡಾವಣೆಯ ಫಕೀರ್ ಲೇಔಟ್ ನಲ್ಲಿನ ಅಕ್ರಮ ನಿವಾಸಿಗಳಿಗೆ ಪರ್ಯಾಯ ಮನೆಗಳನ್ನು ನೀಡಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ವಿರೋಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಸಹಸ್ರಾರು ಬಿಜೆಪಿ ಮುಖಂಡರು ಪಾಲ್ಗೊಂಡು ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರು.

ಪ್ರತಿಭಟನೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆಯಲೆತ್ನಿಸಿದ ಘಟನೆ ನಡೆಯಿತು. ಆದರೂ ಪ್ರತಿಭಟನಾಕಾರರು ಮಾರ್ಗ ಬದಲಿಸಿ ಪ್ರತಿಭಟನೆಯ ನಿಗದಿತ ಜಾಗಕ್ಕೆ ತಲುಪಿದರು. ಪೊಲೀಸ್ ಇಲಾಖೆಯ ಮೂಲಕ ಪ್ರತಿಭಟನೆ ತಡೆಯಲೆತ್ನಿಸಿದ ರಾಜ್ಯ ಕಾಂಗ್ರೆಸ್ ಸರ್ಕಾದ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಉದ್ದೇಶಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು‌ ಮಾತನಾಡಿ ‘ಕೋಗಿಲು ಬಡಾವಣೆಯಲ್ಲಿ ಅಕ್ರಮ ವಲಸಿಗರ ಮನೆಗಳನ್ನು ಕೆಡವಿ ತೆರವು ಮಾಡಿರುವುದೇ ಕಾಂಗ್ರೆಸ್ ಸರ್ಕಾರ, ಆದರೆ ಕೆ.ಸಿ.ವೇಣುಗೋಪಾಲ್ ಗದರಿಸಿದ ಹಿನ್ನೆಲೆಯಲ್ಲಿ ಸಿಎಂ ಸಿದ್ಧರಾಮಯ್ಯ ಎಲ್ಲಿ ಕುರ್ಚಿ ಕಳೆದುಕೊಳ್ಳಬೇಕಾಗುತ್ತದೋ ಎಂಬ ಭಯಕ್ಕೆ ಮಣಿದು ಅಕ್ರಮ ವಲಸಿಗರಿಗೆ ಮನೆಕೊಡಲು ಮುಂದಾಗಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಕುರ್ಚಿ ಕಸಿದುಕೊಳ್ಳುವ ಕಾರಣಕ್ಕಾಗಿ ಕೆ.ಸಿ.ವೇಣುಗೋಪಾಲ್ ಮೂಲಕ ಸಿಎಂ ಅವರಿಗೆ ಧಮ್ಕಿ ಹಾಕಿಸಿ ಅಕ್ರಮ ವಲಸಿಗರಿಗೆ ಮನೆ ಕೊಡಲು ಹೊರಟಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರೋ ಅಥವಾ ಕೆ.ಸಿ.ವೇಣುಗೋಪಾಲ್ ಅವರೋ ಎಂದು ರಾಜ್ಯದ ಜನತೆ ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಾ, ಹಿಂದೂಗಳನ್ನು ಅಪಮಾನ ಮಾಡಿಕೊಂಡು ಆಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಲಜ್ಜೆಗೇಡಿ ಸರ್ಕಾರ.

ಮಾತು ಮಾತಿಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರೇಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಳೆದ ಎರಡೂವರೆ ವರ್ಷಗಳಲ್ಲಿ ವಸತಿ ಮನೆಗಳಿಗೆ ಅರ್ಜಿ ಹಾಕಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ 38 ಲಕ್ಷ ಜನರಲ್ಲಿ ಒಬ್ಬರಿಗೂ ಮನೆ ಕೊಡಲಿಕ್ಕಾಗಿಲ್ಲ. ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಾ, ಹಿಂದೂಗಳನ್ನು ಅಪಮಾನ ಮಾಡಿಕೊಂಡು ಆಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಲಜ್ಜೆಗೇಡಿ ಸರ್ಕಾರ.

ಮಾತು ಮಾತಿಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರೇಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಳೆದ ಎರಡೂವರೆ ವರ್ಷಗಳಲ್ಲಿ ವಸತಿ ಮನೆಗಳಿಗೆ ಅರ್ಜಿ ಹಾಕಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ 38 ಲಕ್ಷ ಜನರಲ್ಲಿ ಒಬ್ಬರಿಗೂ ಮನೆ ಕೊಡಲಿಕ್ಕಾಗಿಲ್ಲ. ಕಾಂಗ್ರೆಸ್ ಹೈಕಮಾಂಡ್ ಬೆದರಿಸಿದ ಕಾರಣಕ್ಕಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೋಗಿಲು ಬಡಾವಣೆಯಲ್ಲಿನ ಅಕ್ರಮ ವಲಸಿಗರಿಗೆ ಅಕ್ರಮವಾಗಿ ಮನೆ ಕೊಡಲು ಹೊರಟಿದೆ. ರಾಜ್ಯ ಬಿಜೆಪಿ ಪಕ್ಷ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕೊಡುವುದಿಲ್ಲ, ಈ ಕುರಿತು ರಾಜ್ಯಾದ್ಯಂತ ಪ್ರತಿಭಟನೆ ಮಾಡಲಿದ್ದೇವೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮಾರಣ ಹೋಮವಾಗುತ್ತಿದೆ, ಇಂತಹ ವಿಷಮ ಪರಿಸ್ಥಿತಿಯಲ್ಲಿ ಅಕ್ರಮ ಬಾಂಗ್ಲಾದೇಶೀಯರಿಗೆ ಮನೆ ಕೊಡಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ್ದು ಲಜ್ಜೆಗೆಟ್ಟ ನಡೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆಯ ಈ ನಡೆಯನ್ನು ಬಿಜೆಪಿ ವಿರೋಧಿಸುತ್ತದೆ ಮತ್ತು ಇದನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದರು.

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ ‘ಬಾಂಗ್ಲಾ ದೇಶಿ ಅಕ್ರಮ ವಲಸಿಗರಿಗೆ ರಾಜ್ಯದಲ್ಲಿ ಒಂದೇ ಒಂದು ನಿವೇಶನ ಅಥವಾ ಮನೆ ಸಿಕ್ಕಿದರೆ ಅದು ಹೊಸದೊಂದು ಪರಂಪರೆಗೆ ನಾಂದಿಯಾಗಲಿದೆ. ಮುಂಬರುವ ದಿನಗಳಲ್ಲಿ ಬಾಂಗ್ಲಾ ದೇಶೀಯರು ಬೆಂಗಳೂರಿಗೆ ಬರಲು ಯಾವ ಪಾಸ್ ಪೋರ್ಟ್ ಸಹ ಬೇಕಿಲ್ಲ, ಬಾಂಗ್ಲಾ ದೇಶೀಯ ಅಕ್ರಮ ವಲಸಿಗರಿಗೆ ಮನೆ ಕೊಡಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯೇ ಸಾಕು. ರಾಜ್ಯ ಕಾಂಗ್ರೆಸ್ ಸರ್ಕಾರ ಬೆಂಗಳೂರನ್ನು ಬಾಂಗ್ಲಾ ಹಬ್ ಮಾಡಲು ಹೊರಟಿದೆ. ಕನ್ನಡಿಗರ ಮೇಲಿಲ್ಲದ ಪ್ರೀತಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಾಂಗ್ಲಾ ದೇಶದವರ ಮೇಲೆ ಏಕಿದೆ ಅರ್ಥವಾಗುತ್ತಿಲ್ಲ.

ಕೆ.ಸಿ.ವೇಣುಗೋಪಾಲ್ ಅವರಿಗೆ ಬಾಂಗ್ಲಾ ದೇಶೀಯರಿಗೆ ಬೆಂಗಳೂರಲ್ಲಿ ಉಚಿತ ಮನೆ ಕೊಡಿಸು ಆಸಕ್ತಿ ಏಕೆ, ಕೇರಳದ ಕಮ್ಯುನಿಸ್ಟ್ ಪಕ್ಷದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂಡಿ ಒಕ್ಕೂಟದ ಭಾಗವಾಗಿದ್ದು, ಮುಂಬರುವ ಚುನಾವಣೆಯಲ್ಲಿ ಬೆಂಗಳೂರನ್ನು ಬಳಸಿಕೊಂಡು ಮುಸ್ಲಿಂ ಮತಬ್ಯಾಂಕ್ ಸೃಷ್ಟಿಸಿಕೊಳ್ಳಲು ಹೊರಟಿದ್ದಾರೆ.

ರಾಜ್ಯ ಕಾಂಗ್ರೆಸ್ ನಾಯಕರಿಗೆ ಬಾಂಗ್ಲಾ ಅಕ್ರಮ ನಿವಾಸಿಗಳ ಮೇಲೆ ಪ್ರೀತಿಯಿದ್ದರೆ ರಾಜ್ಯದ ಕಾಂಗ್ರೆಸ್ ನಾಯಕರ ಜಮೀನುಗಳಲ್ಲಿ ಮನೆ, ನಿವೇಶನ ಕೊಡಲಿ, ಕೋಗಿಲು ಬಡಾವಣೆಯಲ್ಲಿನ ಈ ಜಾಗ 7 ಕೋಟಿ ಕನ್ನಡಿಗರದ್ದು, ಇದನ್ನು ಬಾಂಗ್ಲಾ ದೇಶೀಯರಿಗೆ ಕೊಡುವುದು ಹೊಸದೊಂದು ವಿಲೋಮ ಪರಂಪರೆಗೆ ನಾಂದಿಯಾಗಲಿದ್ದು, ರಾಜ್ಯದಲ್ಲಿ ಒಂದು ರೀತಿಯ ದಂಗೆಯ ವಾತಾವರಣ ಸೃಷ್ಟಿಯಾಗಲಿದೆ.

ಬಾಂಗ್ಲಾ ದೇಶೀಯರಿಗೆ ಬೆಂಗಳೂರು ನಗರದಲ್ಲಿ ವಸತಿ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಡ್ರಗ್ ಮಾಫಿಯಾ, ಟೆರರಿಸ್ಟ್ ಮಾಫಿಯಾ ಮಾಡಲು ಹೊರಟಿದೆ. ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ಹಲ್ಲೆ, ಮಾರಣ ಹೋಮವನ್ನು ರಾಜ್ಯ ಕಾಂಗ್ರೆಸ್ ನಾಯಕರು ಇದುವರೆಗೂ ಖಂಡಿಸಿಲ್ಲ, ಆದರೆ ಇಲ್ಲಿ ಮುಸ್ಲಿಮರ ವಿಚಾರ ಬಂದಾಗ ರಾಜ್ಯ ಕಾಂಗ್ರೆಸ್ ಸರ್ಕಾರ ಎದ್ದು ನಿಲ್ಲುತ್ತಿರುವುದೇಕೆ, ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ, ಹಿಂಸಾಚಾರವನ್ನು ಖಂಡಿಸದೆ ಬೆಂಗಳೂರಿನಲ್ಲಿ ಅವರಿಗೆ ಮನೆ ಕೊಡಲು ಹೊರಟಿರುವುದು ಅಕ್ಷಮ್ಯ ಅಪರಾಧ, ಇಂದಿನ ಪ್ರತಿಭಟನೆ ಆರಂಭವಷ್ಟೇ ಹೊರತು ಅಂತ್ಯವಲ್ಲ, ಮುಂಬರುವ ಅಧಿವೇಶನದಲ್ಲಿ ಈ ಕುರಿತು ಧ್ವನಿಯೆತ್ತುತ್ತೇವೆ. ಕನ್ನಡಿಗರಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಮಾತನಾಡಿ ‘ಕೋಗಿಲು ಬಡಾವಣೆಯಲ್ಲಿನ ಅಕ್ರಮ ನಿವಾಸಿಗಳನ್ನು ತೆರವುಗೊಳಿಸಿರುವ ಆ ಜಾಗದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರದ ಫಲಕ ಹಾಕಿರುವುದನ್ನು ನೋಡಿ ಬೇಸರವಾಯ್ತು, ಇತ್ತೀಚೆಗೆ ಮಾಡಬಾರದ ಅಕ್ರಮಗಳನ್ನೆಲ್ಲಾ ಮಾಡಿ, ಅಲ್ಲಿ ಅಂಬೇಡ್ಕರ್ ಅವರ ಭಾವಚಿತ್ರದ ಫಲಕ ಹಾಕುವ ವಿಚಿತ್ರ ಸಂಸ್ಕೃತಿಯೊಂದು ಬೆಳೆಯುತ್ತಿದೆ, ಇದನ್ನು ಖಂಡಿಸುತ್ತೇನೆ, ಇಂತಹ ಅಪಸಹ್ಯಗಳು ನಿಲ್ಲಬೇಕು. ಕಾನೂನನ್ನು ಗಾಳಿಗೆ ತೂರಿದವರಿಗೂ ಅಂಬೇಡ್ಕರ್ ಅವರಿಗೂ ಯಾವುದೇ ಸಂಬಂಧವೂ ಇರುವುದಿಲ್ಲ, ಅಂಥವರು ತಮ್ಮ ಬಾಯಲ್ಲಿ ಅಂಬೇಡ್ಕರ ಅವರ ಹೆಸರೇಳುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಅಶ್ವಥ್ ನಾರಾಯಣ, ಸಿ.ಟಿ.ರವಿ, ಶಾಸಕರಾದಎಸ್.ಆರ್. ವಿಶ್ವನಾಥ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ ಮಾತನಾಡಿದರು.

ಪ್ರತಿಭಟನೆಯಲ್ಲಿ ಶಾಸಕರಾದ ರವಿ ಸುಬ್ರಮಣ್ಯ, ಉದಯ್ ಗರುಡಾಚಾರ್, ಗೋಪಾಲಯ್ಯ, ಮುನಿರತ್ನ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಭಾರತಿ ಶೆಟ್ಟಿ, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್ ಹರೀಶ್, ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಹನುಮಂತಗೌಡ, ನಗರ ಮಂಡಲ ಬಿಜೆಪಿ ಅಧ್ಯಕ್ಷ ಕೃಷ್ಣಮೂರ್ತಿ, ಯುವ ಮೋರ್ಚಾ ಅಧ್ಯಕ್ಷ ಲೋಹಿತ್ ಕುಮಾರ್, ಉಪಾಧ್ಯಕ್ಷ ಡಾ.ಯೋಗೇಶ್ ಬೆಸ್ತರ್, ಕೋಗಿಲು ವಾರ್ಡ್ ಅಧ್ಯಕ್ಷ ಅನಿಲ್ ಕೆ.ಎ., ಮುನಿಸ್ವಾಮಿ ಒಡೆಯರ್ (ಆನಂದ ಮಾಸ್ಟರ್), ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಎನ್ ನರಸಿಂಹಮೂರ್ತಿ ಅಗ್ರಹಾರ ಸೇರಿದಂತೆ ಹಲವು ಗಣ್ಯರಿದ್ದರು.

Leave a Reply

Your email address will not be published. Required fields are marked *