



ಚಿಕ್ಕಬಳ್ಳಾಪುರದ ಲಿಂಗಶೇಟ್ಟಿಪುರದಲ್ಲಿ
ಸಂಕ್ರಾಂತಿ ಹಬ್ಬದ ಸಂಭ್ರಮದ ಅಂಗವಾಗಿ ರಂಗೋಲಿ ಸ್ಪರ್ಧೆ
ಚಿಕ್ಕಬಳ್ಳಾಪುರ:ಸಂಕ್ರಾಂತಿ ಹಬ್ಬದ ಸಂಭ್ರಮದ ಅಂಗವಾಗಿ ಶ್ರೀ ಹರಿ ಕೃಷ್ಣ ಪೌಂಡೇಶನ್ ಹಾಗೂ ಲಿಂಗಶೇಟ್ಟಿಪುರ ಗ್ರಾಮಸ್ಥರ ಸಹಯೋಗದಲ್ಲಿ ಲಿಂಗಶೇಟ್ಟಿಪುರದಲ್ಲಿ ರಂಗೋಲಿ ಸ್ಪರ್ಧೆಯನ್ನು ವೈಭವದಿಂದ ಭಾನುವಾರ ಆಯೂಜಿಸಿಲಾಗಿತ್ತು. ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ವಿಭಿನ್ನ ವಿನ್ಯಾಸಗಳು ಹಾಗೂ ಬಣ್ಣಬಣ್ಣದ ರಂಗೋಲಿ ಕಲಾಕೃತಿಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಹರಿ ಕೃಷ್ಣ ಪೌಂಡೇಶನ್ ಅಧ್ಯಕ್ಷ ಆನೆಮಡುಗು ಹರೀಶ್ ರೆಡ್ಡಿ, ರಂಗೋಲಿ ಸ್ಪರ್ಧೆಗಳು ಕೇವಲ ಸ್ಪರ್ಧೆಗಳಲ್ಲ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ವೇದಿಕೆಗಳು.ಇಂದಿನ ಕಾಲದಲ್ಲಿ ಮರೆಯಾಗುತ್ತಿರುವ ಸಂಪ್ರದಾಯಗಳನ್ನು ಇಂತಹ ಕಾರ್ಯಕ್ರಮಗಳು ಮತ್ತೆ ಜ್ಞಾಪಕಕ್ಕೆ ತರುತ್ತವೆ ಎಂದರು.
ಹಳ್ಳಿ–ನಗರ ಸಮುದಾಯಗಳ ನಡುವೆ ಸಹಭಾಗಿತ್ವವನ್ನು ಬೆಳೆಸುವ ಜೊತೆಗೆ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಸಮಾನತೆ ಮತ್ತು ಶಕ್ತೀಕರಣಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ಸ್ಪರ್ಧೆಯಲ್ಲಿ ಆಯ್ಕೆಯಾದ ಅತ್ಯುತ್ತಮ ನಾಲ್ವರಿಗೆ ನಗದು ಬಹುಮಾನ ವಿತರಿಸಲಾಯಿತು. ಮೊದಲ ಬಹುಮಾನ ರೂ.6,999, ದ್ವಿತೀಯ ರೂ.4,999, ತೃತೀಯ ಹಾಗೂ ನಾಲ್ಕನೇ ಬಹುಮಾನಗಳಿಗೆ ತಲಾ ರೂ.2,999 ನೀಡಲಾಯಿತು.ಜೊತೆಗೆ ಎಲ್ಲ ಸ್ಪರ್ಧಾರ್ಥಿಗಳಿಗೆ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು.
ಆವಲಗುರ್ಕಿ ಸಂಜೀವಿನಿ ಮಹಿಳಾ ಸಂಘದ ಅಧ್ಯಕ್ಷೆ ರಮ್ಯ,ಸಮಾಜಸೇವಕ ಹೋಟೆಲ್ ರಾಮಣ್ಣ,ಮಂಜಣ್ಣ, ರಾಜಣ್ಣ,ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.( ಮುಬಷೀರ್ ಅಹಮದ್ )
