ಬ್ಯಾಟರಾಯನಪುರ ಕ್ಷೇತ್ರಕ್ಕೆ ವಿಭಿನ್ನ ಸಾಂಸ್ಕೃತಿಕ ಅಸ್ಮಿತೆ ಕಲ್ಪಿಸುವುದು ನಮ್ಮ ಧ್ಯೇಯ : ಎಚ್.ಸಿ.ತಮ್ಮೇಶ್ ಗೌಡ

ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರಕ್ಕೆ ರಾಜ್ಯದಲ್ಲೇ ಒಂದು ವಿಭಿನ್ನ ಸಾಂಸ್ಕೃತಿಕ ಅಸ್ಮಿತೆ ಕಲ್ಪಿಸುವ ಮೂಲಕ ರಾಜ್ಯದ ಜನತೆ ಬ್ಯಾಟರಾಯನಪುರ ಕ್ಷೇತ್ರದತ್ತ ಹಿಂತಿರುಗಿ ನೋಡುವಂತೆ ಮಾಡಬೇಕೆಂಬ ಧ್ಯೇಯದೊಂದಿಗೆ ಕಳೆದ ಹಲವು ವರ್ಷಗಳಿಂದ ಧಾರ್ಮಿಕ ಉತ್ಸವಗಳು, ದೈವ ಕಾರ್ಯಗಳು, ಪಾರಂಪರಿಕ ಹಬ್ಬಗಳನ್ನು ಕ್ಷೇತ್ರದ ಜನರೊಟ್ಟಿಗೆ ಸೇರಿ ಆಚರಿಸಲಾಗುತ್ತಿದ್ದು, ಜನತೆ ಸಹ ಬಹಳ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ಬಿಜೆಪಿ ‌ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ ತಿಳಿಸಿದ್ದಾರೆ.

‘ಒಂದು ರಾಷ್ಟ್ರ, ಒಂದು ಆಚರಣೆ: ಶೀರ್ಷಿಕೆ ಅಡಿಯಲ್ಲಿ ಬ್ಯಾಟರಾಯನಪುರ ಕ್ಷೇತ್ರದ ಹುಣಸಮಾರನಹಳ್ಳಿ ಯಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ‘ಬ್ಯಾಟರಾಯನಪುರ ಸಂಕ್ರಾಂತಿ ಉತ್ಸವ’ ಉದ್ಘಾಟಿಸಿ ಮಾತನಾಡಿದ ಅವರು ‘ಬ್ಯಾಟರಾಯನಪುರ ಸಂಕ್ರಾಂತಿ ಉತ್ಸವದಲ್ಲಿ ಸಹಸ್ರಾರು ಜನ ಅತ್ಯುತ್ಸಾಹದಿಂದ ಪಾಲ್ಗೊಂಡಿರುವುದು ಸಂತೋಷ ಉಂಟು ಮಾಡಿದೆ. ಸಂಕ್ರಾಂತಿಯನ್ನು ಬ್ಯಾಟರಾಯನಪುರ ಕ್ಷೇತ್ರದಲ್ಲಿ ನೆಲೆಸಿರುವ ದೇಶದ ವಿವಿಧ ರಾಜ್ಯಗಳ ಜನರೊಟ್ಟಿಗೆ ಆಚರಿಸಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಸಂಕ್ರಾಂತಿ ಉತ್ಸವ ಆಯೋಜಿಸಲಾಗಿದೆ. ಬ್ಯಾಟರಾಯನಪುರ ಕ್ಷೇತ್ರದಲ್ಲಿ ನೆಲೆಸಿರುವ ನಾಡಿನ ವಿವಿಧ ಜಿಲ್ಲೆಗಳ, ವಿವಿಧ ರಾಜ್ಯ ಮತ್ತು ಭಾಷೆಗಳ ಜನರೊಂದಿಗೆ ಸಂಪ್ರದಾಯ ಬದ್ಧವಾಗಿ ಆಚರಿಸುತ್ತಿರುವ ಬಗ್ಗೆ ಹೆಮ್ಮೆ ಇದೆ. ಜನತೆ ತಮ್ಮ ಕಲೆ , ಸಂಸ್ಕೃತಿ ಮತ್ತು ಆಚರಣೆಗಳನ್ನು ಸಂಕ್ರಾಂತಿ ಉತ್ಸವದಲ್ಲಿ ಪ್ರಸ್ತುತ ಪಡಿಸುತ್ತಿರುವುದು ಸಾರ್ಥಕ ಭಾವ ಮೂಡುವಂತೆ ಮಾಡಿದೆ. ಕ್ಷೇತ್ರದ ಜನತೆ ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ. ಕ್ಷೇತ್ರದ ಜನತೆಗೆ ನ್ಯಾಯ ದೊರಕಿಸಿಕೊಡುವುದು ಮತ್ತು ಅವರ ಶ್ರೇಯೋಭಿವೃದ್ಧಿ ನನ್ನ ಗುರಿಯಾಗಿದ್ದು, ಈ ಗುರಿಸಾಧನೆಗಾಗಿ ಅವಿರತವಾಗಿ ಶ್ರಮಿಸುವುದಾಗಿ ತಿಳಿಸಿದರು.:

Leave a Reply

Your email address will not be published. Required fields are marked *