







ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಯುವ ಜನೋತ್ಸವ, ಸಸಿನೆಡುವ ಕಾರ್ಯಕ್ರಮ :
ಯಲಹಂಕ : ಜಿ.ರಾಮ್ ಜಿ.ಯೋಜನೆ ನರೆಗಾ ಯೋಜನೆಗಿಂತ ಅತ್ಯುತ್ತಮ ಯೋಜನೆಯಾಗಿದ್ದು, ದೇಶದ ಬಡ ಕಾರ್ಮಿಕರಿಗೆ ಹೆಚ್ಚು ದಿನಗಳ ಉದ್ಯೋಗದ ಅವಕಾಶ ಕಲ್ಪಿಸಿಕೊಡುವುದರ ಜೊತೆಗೆ ಹಳೆಯ ನ್ಯೂನ್ಯತೆಗಳನ್ನು ಸರಿಪಡಿಸಿ, ಯೋಜನೆಯ ದುರುಪಯೋಗವನ್ನು ತಪ್ಪಿಸಲಾಗಿದೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಕೇಂದ್ರ ಸರ್ಕಾರ ಜಾರಿಗೊಳಿಸಿತುವ ಜಿ ರಾಮ್ ಜಿ ಯೋಜನೆ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಯಲಹಂಕ ಗ್ರಾಮಾಂತರ ಮಂಡಲ ರೈತ ಮೋರ್ಚಾ ಮತ್ತು ಯುವ ಮೋರ್ಚಾ ವತಿಯಿಂದ ಕ್ಷೇತ್ರದ ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮ ಮತ್ತು ಪ್ರಮುಖ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ರಾಜ್ಯ ಕಾಂಗ್ರೆಸ್ ಸರ್ಕಾರ ಜಿ.ರಾಮ್ ಜಿ ಯೋಜನೆಯನ್ನು ವಿರೋಧಿಸಲಂದೇ ವಿಶೇಷ ಅಧಿವೇಶನ ಕರೆದು ಕಾಲ ಹರಣ ಮಾಡಿತು. ಜಿ ರಾಮ್ ಜಿ ಯೋಜನೆ ಅತ್ಯುತ್ತಮವಾದ ಯೋಜನೆಯಾಗಿದ್ದು, ನರೆಗಾ ಯೋಜನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ, ದುರುಪಯೋಗ ಆಗದಂತೆ ಕಾಳಜಿವಹಿಸಿ ಜಾರಿಗೆ ತಂದಿರುವ ಯೋಜನಯಾಗಿದ್ದು, ಮೊದಲು ಕೇವಲ ನೂರು ದಿನಗಳಷ್ಟೇ ಇದ್ದ ಉದ್ಯೋಗದ ಅವಕಾಶವನ್ನು 125 ದಿನಗಳಿಗೆ ವಿಸ್ತಿರಿಸುವ ಮೂಲಕ ಕಾರ್ಮಿಕರ ಹಿತ ಕಾಪಾಡುವ ರೀತಿಯಲ್ಲಿ ರೂಪಿಸಿದೆ. ಈಗಿನ ಜಿ ರಾಮ್ ಜಿ ಯೋಜನೆಯಲ್ಲಿ ಪ್ರತಿ ಹಂತದಲ್ಲೂ ಲೆಕ್ಕಾಚಾರದ ಪರಿಗಣನೆ ಇರುವುದರಿಂದ ಹಿಂದಿನ ನರೆಗಾ ಯೋಜನೆಯಲ್ಲಿದ್ದಂತೆ ದುರುಪಯೋಗಕ್ಕೆ ಕಿಂಚಿತ್ತೂ ಅವಕಾಶ ಇಲ್ಲ. ಇದರಿಂದ ಕೆರಳಿ, ಕೆಂಡಾಮಂಡಲರಾಗಿರುವ ರಾಜ್ಯ ಕಾಂಗ್ರೆಸ್ ಮುಖಂಡರು ವಿನಾಕಾರಣ ಜಿ ರಾಮ್ ಜಿ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಈ ಕುರಿತು ಸ್ಪಷ್ಟ ವಿವರಣೆ ನೀಡಲೆಂದೇ ಇಂದು ಕಾರ್ಯಕರ್ತರು, ಮುಖಂಡರ ಸಭೆ ಕರೆದು ವಿವರಿಸುವ ಮೂಲಕ ಯೋಜನೆಯನ್ನು ಜಾರಿಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ತಿಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಡಿ.ಜಿ.ಅಪ್ಪಯ್ಯಣ್ಣ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಜಿ.ರಾಮಮೂರ್ತಿ, ನಗರ ಮಂಡಲ ಅಧ್ಯಕ್ಷ ಎಂ.ಮುನಿರಾಜು ಪ್ರಧಾನ ಕಾರ್ಯದರ್ಶಿಗಳಾದ ವಿಶ್ವನಾಥಪುರ ಮಂಜುನಾಥ್, ಸೋಮಶೇಖರ್, ವಿ.ಪವನ್, ವಿ.ಎಂ.ಈಶ್ವರ್, ಬೆಂ.ಉತ್ತರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಿ.ಜೆ.ಮೂರ್ತಿ, ಯಲಹಂಕ ಗ್ರಾ. ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಬಿಜೆಪಿ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್, ಎಂ.ಬಿ.ಕೃಷ್ಷಯ್ಯ, ಡಾ.ಉದ್ದಂಡಯ್ಯ ಸಿ.ರಮೇಶ್, ಆವಲಹಳ್ಳಿ ಕೇಶವಮೂರ್ತಿ, ಎಸ್.ಜಿ.ಪ್ರಶಾಂತ್ ರೆಡ್ಡಿ, ವಸಂತ್ ಅರಕೆರೆ, ಎಸ್ ಜಿ ನರಸಿಂಹ ಮೂರ್ತಿ, ಯುವ ಮೋರ್ಚಾ ಅಧ್ಯಕ್ಷರಾದ ಆಕಾಶ್ ಗೌಡ, ಎಚ್.ಎಸ್.ಕಿರಣ್, ಪತಿಗೌಡ, ಪ್ರತಾಪ್, ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಂಜುಳಾ ಮಹೇಂದ್ರ, ಸರಸ್ವತಿ ಮಾಯಣ್ಣ ಸೇರಿದಂತೆ ಇನ್ನಿತರರಿದ್ದರು.
