














ಬಿಜೆಪಿ ದೇಶ ಮೊದಲು ಎಂಬ ಸಿದ್ಧಾಂತದ ಅಡಿಯಲ್ಲಿ ಕಟ್ಟಿರುವ ಪಕ್ಷ : ಎಸ್.ಆರ್.ವಿಶ್ವನಾಥ್
ಬ್ಯಾಲಕೆರೆಯಲ್ಲಿ ಬೃಹತ್ ಸೇರ್ಪಡೆ ಕಾರ್ಯಕ್ರಮ :
ಯಲಹಂಕ : ವ್ಯಕ್ತಿ ಪ್ರಾಶಸ್ತ್ಯವನ್ನು ಬದಿಗಿಟ್ಟು ದೇಶ ಮೊದಲು ಎಂಬ ರಾಷ್ಟ್ರ ಚಿಂತನೆಯ ಸಿದ್ಧಾಂತದ ಅಡಿಯಲ್ಲಿ ಕಟ್ಟಿರುವ ಪಕ್ಷ ಬಿಜೆಪಿ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.
ಯಲಹಂಕ ಕ್ಷೇತ್ರದ ಬ್ಯಾಲಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಬೃಹತ್ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ನೂರಾರು ಕಾರ್ಯಕರ್ತರನ್ನು ಬಿಜೆಪಿ ಪಕ್ಷಕ್ಕೆ ಆತ್ಮೀಯವಾಗಿ ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದ ಅವರು ‘ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತ ಮತ್ತು ಯಲಹಂಕ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಇಂದು ಕಾಂಗ್ರೆಸ್ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷ ಸೇರ್ಪಡೆ ಯಾಗಿದ್ದಾರೆ. ಕ್ಷೇತ್ರದ ಹಲವೆಡೆ ಇದೇ ರೀತಿ ಹಲವು ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದು, ಇದರಿಂದ ಬಿಜೆಪಿ ಪಕ್ಷ ಇನ್ನೂ ಹೆಚ್ಚು ಬಲಿಷ್ಠವಾಗಿದೆ.
ಬಿಜೆಪಿ ಪಕ್ಷ ಯಾವುದೇ ಸ್ವಹಿತಾಸಕ್ತಿ, ವ್ಯಕ್ತಿ ನಿಷ್ಠೆಯ ಪಕ್ಷವಲ್ಲ, ಬದಲಿಗೆ ದೇಶ ಮೊದಲು ಎಂಬ ವಿಶಾಲ ತಳಹದಿಯ ಸಿದ್ಧಾಂತದ ಅಡಿಯಲ್ಲಿ ಕಟ್ಟಿರುವ ಪಕ್ಷವಾಗಿದೆ. ಇಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ದೇಶದ ಪ್ರಧಾನಿ, ರಾಷ್ಟ್ರಪತಿ, ಪಕ್ಷದ ಅಧ್ಯಕ್ಷ, ರಾಜ್ಯ ಸಭೆ, ವಿಧಾನ ಸಭೆ, ವಿಧಾನ ಪರಿಷತ್ ಸದಸ್ಯರಾಗುವ ವಿಪುಲವಾದ ಅವಕಾಶಗಳಿವೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು, ರಾಷ್ಟ್ರಪತಿ ದ್ರೌಪದಿ ಮುರ್ಮು, ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ನಿತಿನ್ ನಬಿನ್ ಅವರು ಜ್ವಲಂತ ಸಾಕ್ಷಿಯಾಗಿ ನಮ್ಮ ಕಣ್ಣಮುಂದಿದ್ದಾರೆ. ದೇಶದ ಜವಾಬ್ದಾರಿಯುತ ನಾಗರೀಕರಾಗಿ ದೇಶದ ಹಿತಾಸಕ್ತಿ ಮತ್ತು ದೇಶಭಕ್ತಿಗೆ ಪ್ರಥಮ ಪ್ರಾಶಸ್ತ್ಯ ನೀಡ ಬೇಕಾದುದು ದೇಶದ ಪ್ರತಿ ನಾಗರೀಕರ ಮುಖ್ಯ ಧ್ಯೇಯವಾಗಬೇಕು ಎಂದರು.
ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ರಾದ ವೆಂಕಟೇಶ್ ಬಿ.ಆರ್., ಕಲಾವತಿ ವೆಂಕಟೇಶ್, ಅರುಣ್ .ವಿ., ಮನೋಜ್ ಡಿ.ವಿ., ಮುನಿರಾಜ್ ಬಿ.ಟಿ.ಎಂ., ರಂಗನಾಥ್, ಹರೀಶ್ ಗೌಡ, ಲಕ್ಷ್ಮೀಕಾಂತ್, ಗೌತಮ್, ಜೀವನ್, ಗಿರೀಶ್ ಮುದ್ದಿನಪಾಳ್ಯ, ಸುಜಾತ, ಮಂಜುಳಾ ಬಿ.ಟಿ.ಎಂ, ರತ್ನಮ್ಮ, ಸುಮ ಹಾಗೂ ಅವರ ನೂರಾರು ಬೆಂಬಲಿಗರು ಕಾಂಗ್ರೆಸ್ ಪಕ್ಷ ತೊರೆದು ಶಾಸಕ ಎಸ್ ಆರ್ ವಿಶ್ವನಾಥ್, ಬಿಜೆಪಿ ಯುವ ಮುಖಂಡ ಅಲೋಕ್ ವಿಶ್ವನಾಥ್ ಅವರ ಸಮ್ಮುಖ ದಲ್ಲಿ ಬಿಜೆಪಿ ಸೇರ್ಪಡೆಯಾದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಚೊಕ್ಕನಹಳ್ಳಿ ವೆಂಕಟೇಶ್, ಎಸ್.ಜಿ.ನರಸಿಂಹ ಮೂರ್ತಿ(ಎಸ್.ಟಿ.ಡಿ.ಮೂರ್ತಿ) ಮಾದಪ್ಪನಹಳ್ಳಿ ಕೃಷ್ಣಮೂರ್ತಿ, ವಸಂತ್ ಅರಕೆರೆ, ಪತಿಗೌಡ, ನವೀನ್(ತಂಬಿ), ಸಾದೇನಹಳ್ಳಿ ಪ್ರಕಾಶ್ ಗೌಡ, ಬ್ಯಾಲಕೆರೆ ಲೋಕೇಶ್, ಮಂಜುನಾಥ್, ವೆಂಕಟೇಶ್, ವಿಜಯಕುಮಾರ್ ಸೇರಿದಂತೆ ಇನ್ನಿತರರಿದ್ದರು.
