ಎಚ್.ಸಿ.ತಮ್ಮೇಶ್ ಗೌಡ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಬಲವರ್ಧನೆಗೆ‌ ಶ್ರಮಿಸುವೆ : ಜಿ.ಕೆ.ಮನೋಹರ್
ಬ್ಯಾಟರಾಯನಪುರ : ಮುಂಬರಲಿರುವ ಜಿಬಿಎ ಚುನಾವಣೆ ಹಿನ್ನೆಲೆಯಲ್ಲಿ ಬ್ಯಾಟರಾಯನಪುರ ಕ್ಷೇತ್ರದ ಕೋಗಿಲು ವಾರ್ಡ್ 21ರಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಬಿಜೆಪಿ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿರುವುದಾಗಿಬ್ಯಾಟರಾಯನಪುರ ನಗರ‌‌‌ ಮಂಡಲ ಕಾರ್ಯದರ್ಶಿ ‌ಜಿ.ಕೆ.ಮನೋಹರ್ ತಿಳಿಸಿದ್ದಾರೆ.
ಜಿಬಿಎ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಕೋಗಿಲು ವಾರ್ಡ್ 21 ರಲ್ಲಿ ಬಿಜೆಪಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆ ಕುರಿತು‌ ಮಾತನಾಡಿದ ಅವರು’ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದೇನೆ, 29 ವರ್ಷಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ, ನಂತರ ತಾಲ್ಲೂಕು ಸೊಸೈಟಿ ನಿರ್ದೇಶಕನಾಗಿ ಸೇವೆ ಸಲ್ಲಿಸಿರುವ ರಾಜಕೀಯ ಅನುಭವ ಹೊಂದಿದ್ದೇನೆ.
ಕಳೆದ ಹಲವು ವರ್ಷಗಳಿಂದ ಬಿಜೆಪಿ ಪಕ್ಷದ ಸಕ್ರಿಯ‌ ಕಾರ್ಯಕರ್ತನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ‌.ತಮ್ಮೇಶ್ ಗೌಡ ಅವರ ಮಾರ್ಗರ್ಶದಲ್ಲಿ ಬ್ಯಾಟರಾಯನಪುರ ಕ್ಷೇತ್ರ ಹಾಗೂ ಕೋಗಿಲು ವಾರ್ಡ್ 21ರಲ್ಲಿ ಬಿಜೆಪಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರಮಿಸುತ್ತಿದ್ದೇನೆ. ವಿಶೇಷವಾಗಿ ಕ್ಷೇತ್ರದಲ್ಲಿನ ಮೂಲಭೂತ ಸಮಸ್ಯೆಗಳಾದ ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಚರಂಡಿ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ, ಜನಜಾಗೃತಿ ಮೂಡಿಸುತ್ತಿದ್ದು, ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಎಚ್.ಸಿ.ತಮ್ಮೇಶ್ ಅವರನ್ನು ಶಾಸಕರನ್ಮಾಗಿ ಮಾಡಬೇಕೆಂಬುದು ನಮ್ಮ ಮಹತ್ವಾಕಾಂಕ್ಷೆ ಆಗಿದ್ದು, ಕ್ಷೇತ್ರದಲ್ಲಿ ಹಳೆಯ ಸಮಸ್ಯೆಗಳ ಪರಿಹಾರದ ಜೊತೆಗೆ ಹೊಸ ಪರಿಕಲ್ಪನೆಯ ಬ್ಯಾಟರಾಯನಪುರ ನಿರ್ಮಾಣ ಮಾಡಲು ತಮ್ಮೇಶ್ ಗೌಡರಿಗೆ ಸಾಥ್ ನೀಡುವುದಾಗಿ ತಿಳಿಸಿದರು.
ಜಿಬಿಎ ಚುನಾವಣೆ ಹಿನ್ನೆಲೆಯಲ್ಲಿ ಬ್ಯಾಟರಾಯನಪುರ ಕ್ಷೇತ್ರದ ಕೋಗಿಲು ವಾರ್ಡ್ 21ರಲ್ಲಿ ಈಗಾಗಲೇ ಪಕ್ಷದ ಸಂಘಟನೆಗಾಗಿ ನಮ್ಮ ಧರ್ಮಪತ್ನಿಯವರೊಂದಿಗೆ ಶ್ರಮಿಸಲಾಗುತ್ತಿದ್ದು, ಯೋಧರಿಗೆ ಗೌರವ ಸನ್ಮಾನ, ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು ಅಗತ್ಯ ವಸ್ತುಗಳ ವಿತರಣೆ, ಕೋಗಿಲು ವಾರ್ಡ್ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಲೇಖನ ಪರಿಕರಗಳ ವಿತರಣೆ ಮತ್ತು ಬಡವರಿಗೆ ಸಹಾಯ ಹಸ್ತ ಮುಂತಾದ ಸಮಾಜ ಸೇವಾ ಕಾರ್ಯಗಳನ್ನು ಕೈಗೊಂಡಿದ್ದೇನೆ. ಬಿಜೆಪಿ ಪಕ್ಷ ಬಲವರ್ಧನೆಯ ನಿಟ್ಟಿನಲ್ಲಿ ಮನೆ ಮನೆ ಪ್ರಚಾರ, ಮತದಾರರ ಸಂಪರ್ಕ, ಮೂಲಭೂತ ಸೌಕರ್ಯಗಳ ಬಗ್ಗೆ ಜನಜಾಗೃತಿ ಮೂಡಿಸುವುದು ಮುಂತಾದ ಹಲವು ಕಾರ್ಯಗಳನ್ನು ಮಾಡಿದ್ದೇನೆ‌. ಈ ಎಲ್ಲಾ ಸೇವಾ ಸೇವಾಕಾರ್ಯ ಗಳನ್ನು ಟಿಕೆಟ್ ಆಕಾಂಕ್ಷೆಯಿಂದ ಮಾಡಿಲ್ಲ, ವಾರ್ಡ್ ನಲ್ಲಿ ಬಿಜೆಪಿ ಪಕ್ಷ ಸುಭದ್ರವಾಗಿದ್ದರೆ ಮುಂಬರುವ ಜಿಬಿಎ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಸಹಕಾರಿಯಾಗಲಿದೆ. ಕೋಗಿಲು ವಾರ್ಡ್ ನ ನಿವಾಸಿಯಾಗಿರುವ ನನಗೂ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೆಂಬ ಇಂಗಿತವಿದೆ, ಹಾಗೆಂದ ಮಾತ್ರಕ್ಕೆ ಅದನ್ನು ದುರುದ್ದೇಶದ ದೃಷ್ಟಿಯಲ್ಲಿ ನೋಡಬಾರದು, ಪಕ್ಷದ ಹೈಕಮಾಂಡ್ ಯಾರನ್ನೇ ಅಭ್ಯರ್ಥಿಯಾಗಿ ಮಾಡಿದರೂ ನನ್ನ ಸಹಕಾರ ಇರಲಿದೆ. ಪಕ್ಷಕ್ಕೆ ಕೋಗಿಲು ವಾರ್ಡ್ ನಲ್ಲಿ ಸುಭದ್ರವಾದ ನೆಲೆ ಕಲ್ಪಿಸುವ ಮೂಲಕ, ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಸುಲಭಗೊಳಿಸುವ ಸದುದ್ದೇಶ ನನ್ನದು ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *