






ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಪಿ.ಪ್ರಕಾಶ್ ಗೌಡ ಆಯ್ಕೆ :
ಯಲಹಂಕ : ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ನೂತನವಾಗಿ ಆಯ್ಕೆಯಾಗಿರುವ ಯಲಹಂಕ ಕ್ಷೇತ್ರದ ಸಾಧೇನಹಳ್ಳಿಯ ಎಸ್.ಪಿ.ಪ್ರಕಾಶ್ ಗೌಡ ಅವರನ್ನು ಶಾಸಕ ಎಸ್ ಆರ್ ವಿಶ್ವನಾಥ್ ಅವರು ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಡಿ.ಜಿ.ಅಪ್ಪಯ್ಯಣ್ಣ, ಯುವ ಮುಖಂಡರು, ವಿಶ್ವವಾಣಿ ಫೌಂಡೇಶನ್ ನ ನಿರ್ದೇಶಕ ಅಲೋಕ್ ವಿಶ್ವನಾಥ್, ಆರ್ ಎಸ್ ಎಸ್ ಎನ್ ಬ್ಯಾಂಕ್ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್, ಎಂ.ಜಿ.ರಾಮಮೂರ್ತಿ, ವಿಶ್ವನಾಥಪುರ ಮಂಜುನಾಥ್, ಸೋಮಶೇಖರ್, ಸಾದೇನಹಳ್ಳಿ ಅಪ್ಪಣ್ಣಗೌಡ, ಪ್ರಶಾಂತ್ ರೆಡ್ಡಿ, ಎಂ ಮೋಹನ್ ಕುಮಾರ್, ವಸಂತ ಅರಕೆರೆ, ಯುವ ಮೋರ್ಚಾ ಮುಖಂಡರಾದ ಎಚ್.ಎಸ್. ಕಿರಣ್, ಆಕಾಶ್ ಗೌಡ, ಪ್ರತಾಪ್ ಗೌಡ, ಪತಿಗೌಡ, ಮಂಜುನಾಥ್, ನವೀನ್ ಗೌಡ{ತಂಬಿ), ಮಹೇಶ್, ಅಕ್ಷತ್, ದಾಮೋದರ್, ಹರೀಶ್ ಗೌಡ ಸೇರಿದಂತೆ ಇನ್ನಿತರರಿದ್ದರು. ಇದೇ ವೇಳೆ ಬೆಂಗಳೂರು ಉತ್ತರ ಜಿಲ್ಲಾ ಯುವ ಮೋರ್ಚಾ ನೂತನ ಅಧ್ಯಕ್ಷ ಯತಿನ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಅವರನ್ನು ಸಹ ಸನ್ಮಾನಿಸಿ ಅಭಿನಂದಿಸಲಾಯಿತು.
