
















ಯಲಹಂಕ : ಹೋಳಿ ಹಬ್ಬದ ಪ್ರಯುಕ್ತ ಯಲಹಂಕ ನಗರ ಮಂಡಲ ಬಿಜೆಪಿ ವತಿಯಿಂದ ಯಲಹಂಕ ಉಪನಗರದ ನಾಲ್ಕನೇ ಹಂತದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ’12ನೇ ವರ್ಷದ ಹೋಳಿ ಉತ್ಸವ’ ದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಹಾಗೂ ಬಿಜೆಪಿ ಯುವ ಮುಖಂಡ ಅಲೋಕ್ ವಿಶ್ವನಾಥ್ ಅವರು ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಪರಸ್ಪರ ಬಣ್ಣ ಎರಚಿ ಹೋಳಿ ಆಚರಿಸಿದರು. ಇದೇ ವೇಳೆ ಡಿಜೆ ಸಂಗೀತಕ್ಕೆ ಶಾಸಕ ಎಸ್ ಆರ್ ವಿಶ್ವನಾಥ್ ಹಾಗೂ ಯಲಹಂಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಹೆಜ್ಜೆ ಹಾಕಿ ಸಂಭ್ರಮ ಆಚರಿಸಿದರು.
ಈ ವೇಳೆ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಮಾತನಾಡಿ ‘ಹೋಳಿ ಭಾರತದ ಪ್ರಮುಖವಾದ ಬಣ್ಣಗಳ ಹಬ್ಬವಾಗಿದ್ದು, ವಸಂತ ಋತುವಿನ ಆಗಮನ ಮತ್ತು ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಸಾರುವ ಹಬ್ಬವಾಗಿದೆ. ಮಾರ್ಚ್ ತಿಂಗಳ, ಫಾಲ್ಗುಣ ಮಾಸದ ಪೂರ್ಣಿಮೆಯಂದು ಆಚರಿಸಲಾಗುವ ಈ ಹಬ್ಬದಲ್ಲಿ ಜನರು ಪರಸ್ಪರ ಬಣ್ಣ, ನೀರು ಎರಚಿ ಸಂತೋಷಪಡುತ್ತಾರೆ. ಹೋಲಿಕಾ ದಹನದೊಂದಿಗೆ ಆರಂಭವಾಗುವ ಈ ಹಬ್ಬವು ಪ್ರೀತಿ, ಸಾಮರಸ್ಯ, ಏಕತೆ ಮತ್ತು ಹಳೆಯ ದ್ವೇಷಗಳನ್ನು ಮರೆತು ಹೊಸ ಸಂಬಂಧಗಳ ಆರಂಭವನ್ನು ಸಾರುತ್ತದೆ ಎಂದರು.
ಸಂಭ್ರಮದ ಈ ಹೋಳಿ ಆಚರಣೆಯಲ್ಲಿ ಯಲಹಂಕ ನಗರ ಮಂಡಲ ಬಿಜೆಪಿ ಅಧ್ಯಕ್ಷ ಎಮ್. ಮುನಿರಾಜು, ಪ್ರಧಾನ ಕಾರ್ಯದರ್ಶಿ ವಿ.ಪವನ್ ಕುಮಾರ್, ಹಿರಿಯ ಬಿಜೆಪಿ ಮುಖಂಡರಾದ ಡಾ.ಶಶಿಕುಮಾರ್, ಚೊಕ್ಕನಹಳ್ಳಿ ವೆಂಕಟೇಶ್, ವಿ.ಎಂ.ಚಂದ್ರಯ್ಯ, ಸಿ.ರಮೇಶ್, ಎಸ್.ಟಿ.ಮೋರ್ಚಾ ಅಧ್ಯಕ್ಷ ಮೋಹನ್ ಬಿ.ಆರ್., ಎಸ್.ಸಿ. ಮೋರ್ಚಾ ಅಧ್ಯಕ್ಷ ಕೆ.ಎಂ.ಮುರಳಿ, ಮಹಿಳಾ ಮೋರ್ಚಾ ಅಧ್ಯಕ್ಷ ಬೃಂದಾವೀರೇಶ್, ಸಿ.ರಮೇಶ್, ಅಟ್ಟೂರ್ ವಾರ್ಡ್ ಬಿಜೆಪಿ ಅಧ್ಯಕ್ಷ ನಾರಾಯಣಸ್ವಾಮಿ, ಯಲಹಂಕ ಉಪನಗರ ವಾರ್ಡ್ ಅಧ್ಯಕ್ಷ ಎಸ್.ರಾಜಣ್ಣ, ಬಿಜೆಪಿ ಯುವ ಮುಖಂಡರಾದ ಕಿರಣ್, ಅಕ್ಷತ್, ಶರತ್, ಮಂಗೇಶ್ ರಾಥೋಡ್, ಮದನ್, ಅಕುಲ್, ಮಲ್ಲಿಕಾರ್ಜುನ್, ಬಿಜೆಪಿ ಮಹಿಳಾ ಮುಖಂಡರಾದ ಗೌರಿ ಮಧುರ ಸೇರಿದಂತೆ ಸಹಸ್ರಾರು ಬಿಜೆಪಿ ಕಾರ್ಯಕರ್ತರಿದ್ದರು.
