ಮಾರೇನಹಳ್ಳಿ ಮಹಿಳಾ ಸಹಕಾರ ಸಂಘದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ :

ಯಲಹಂಕ. ಬ್ಯಾಟರಾಯನಪುರ : ದಿನಾಂಕ. 8  3 2026 ರಂದು ಬ್ಯಾಟರಾಯನಪುರ ಕ್ಷೇತ್ರದ ಮಾರೇನಹಳ್ಳಿ ಮಹಿಳಾ ಸಹಕಾರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಕೀಲರು ಸಾಮಾಜಿಕ ಕಾರ್ಯಕರ್ತರಾದ ರಮ್ಯಾ ಶೆಟ್ಟಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಆಧುನಿಕ ಯುಗಮಾನದಲ್ಲಿ ಮಹಿಳೆ ಎಲ್ಲ ರಂಗಗಳಲ್ಲಿ ಅಪ್ರತಿಮ ಸಾಧನೆ ಮಾಡುತ್ತಿದ್ದು, ಭಾರತದ ಆರ್ಥಿಕತೆಯ ಬೆಳವಣಿಗೆಯಲ್ಲಿ ಮಹಿಳೆಯ ಪಾತ್ರವೂ ಸಹ ಗಣನೀಯವಾಗಿದೆ. ಹಿಂದೆ ಅಡುಗೆ ಮನೆಗೆ ಅಷ್ಟೇ ಸೀಮಿತರಾಗಿದ್ದ ಮಹಿಳೆಯರು ಇಂದು ಅಂತರಿಕ್ಷ ಯಾನ, ಆರ್ಥಿಕ, ಸಾಮಾಜಿಕ, ವೈಜ್ಞಾನಿಕ, ಕ್ಷೇತ್ರಗಳಲ್ಲಿ ಗಣನೀಯ ಮಟ್ಟದ ಸಾಧನೆ ಮಾಡುತ್ತಿದ್ದಾರೆ. ಆದರೆ ಕೆಲ ಗ್ರಾಮೀಣ ಭಾಗಗಳಲ್ಲಿ ಮಹಿಳೆಯ ಸ್ಥಿತಿಗತಿ ಇನ್ನೂ ಸುಧಾರಿಸಬೇಕಿದೆ. ಆರ್ಥಿಕವಾಗಿ ಮಹಿಳೆಯರು ಸಬಲರಾಗಬೇಕು ಎಂಬುದು ನಮ್ಮ ಧ್ಯೇಯವಾಗಿದ್ದು, ಈ ದಿಸೆಯಲ್ಲಿ ಅಗತ್ಯ ಸಹಕಾರ, ನೆರವು ನೀಡಲು ಸಿದ್ದರಿದ್ದೇವೆ ಎಂದು ಭರವಸೆ ನೀಡಿದರು.

ಮಹಿಳಾ ಸಂಘದ ಮಾರ್ಗದರ್ಶಕ, ಹಿರಿಯ ಪತ್ರಕರ್ತ ಪ್ರಕಾಶ್ ಬಾಗಲೂರು ಅವರು ಮಾತನಾಡಿ ‘ಕಿರಿದಾದ ಕಾಲುವೆಯಂತೆ ಶುರುವಾದ ಮಾರೆನಹಳ್ಳಿ ಮಹಿಳಾ ಸಹಕಾರ ಸಂಘ ಇದೀಗ ಬೆಳವಣಿಗೆ ಕಂಡು ಸರೋವರದೋಪಾದಿಯಲ್ಲಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ನದಿಯಂತೆ, ಸಮುದ್ರದಂತೆ ತನ್ನ ವಿಶಾಲತೆಯನ್ನು ವಿಸ್ತರಿಸಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದ ಅವರು, ಹೆಚ್ಚಿನ ಸಂಖ್ಯೆಯ ಮಹಿಳೆಯರು ಮಾರೇನಹಳ್ಳಿ ಮಹಿಳಾ ಸಹಕಾರ ಸಂಘದ ಸದಸ್ಯತ್ವ ಪಡೆಯುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕೆಂದು ಮಹಿಳೆಯರಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾರೇನಹಳ್ಳಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಅಮೃತ ನಂಜೇಗೌಡ ಅವರು ವಹಿಸಿದ್ದು ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಮಮತಾ ನಾಗರಾಜ್, ಅಂಗನವಾಡಿ ನಿವೃತ್ತ ಕಾರ್ಯಕರ್ತೆ ಯಶೋದಾ, ಸಿದ್ದಣ್ಣಾಚಾರ, ಅಂಗವಿಕಲರ ಕಲ್ಯಾಣ ಕಾರ್ಯಕರ್ತೆ ಪಾರ್ವತಿ, ಸಂಘದ ನಿರ್ದೇಶರಾದ, ಟಿ.ಪಿ.ರಾಜೇಶ್ವರಿ, ಪ್ರತಿಭಾ, ಮುನಿರಾಜು, ಲಕ್ಷ್ಮಿನರಸಮ್ಮ, ಜ್ಯೋತಿ, ಮನಿಷಾ, ರೂಪ, ಮುಖಂಡರಾದ ನಂಜಪ್ಪ, ಸತೀಶ್, ಮುನೇಗೌಡ, ಯಲಹಂಕ ಉಮೇಶ್, ಡಾ.ರಮೇಶ್, ಜಯರಾಮ್, ಗೋಪಾಲ್, ಸಂಘದ ಕಾರ್ಯದರ್ಶಿ ಲಾವಣ್ಯ ಸೇರಿದಂತೆ ಸ್ತ್ರೀ ಶಕ್ತಿ ಸಂಘದ ಸದಸ್ಯರಿದ್ದರು.

ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಅವರಿಗೆ ಯುಗಾದಿಯ ಉಡುಗೊರೆಯಾಗಿ ಆಹಾರ ಧಾನ್ಯಗಳ ಕಿಟ್ ವಿಚರಿಸಲಾಯಿತು.

Leave a Reply

Your email address will not be published. Required fields are marked *