ಮಾರಮ್ಮ ದೇವಿಯ ಪ್ರಥಮ ವಾರ್ಷಿಕೋತ್ಸವ, ನೂತನ ಗೋಪುರಕ್ಕೆ ಭೂಮಿ ಪೂಜೆ :
ಯಲಹಂಕ : ಯಲಹಂಕ ಹಳೆ ನಗರದ ಸುಂಕಲಮ್ಮ ಗುಡಿ ಬೀದಿಯಲ್ಲಿ ಅಯೋಸಿದ್ದ ಶ್ರೀ ಮಾರಮ್ಮ ದೇವಿ ದೇವಾಲಯದ ಪ್ರಥಮ ವಾರ್ಷಿಕೋತ್ಸವ ಹಾಗೂ ಗೋಪುರ ನಿರ್ಮಾಣಕ್ಕೆ ಶಾಸಕ ಎಸ್ ಆರ್ ವಿಶ್ವನಾಥ್ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ‘ಯಲಹಂಕ ಹಳೆ ನಗರದ ಈ ಪ್ರದೇಶದಲ್ಲಿ ಈ ಹಿಂದೆ ಮಾರಮ್ಮ ದೇವಿಯ ಚಿಕ್ಕದಾದ ಗುಡಿ ಇತ್ತು. ಕಳೆದ ವರ್ಷ ಭಕ್ತಾದಿಗಳ ನೆರವು ಹಾಗೂ ಸಹಕಾರದಿಂದಾಗಿ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿದ್ದು, ಇದೀಗ ಮಾರಮ್ಮ ದೇವಿಯ ಭವ್ಯವಾದ ದೇವಾಲಯ ತಲೆಯೆತ್ತಿದ್ದು, ಮೊದಲ ವರ್ಷದ ವಾರ್ಷಿಕೋತ್ಸವವನ್ನು ಸಹ ಆಚರಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಬಹುತೇಕ ಪರಿಶಿಷ್ಟ ಜಾತಿ, ಪಂಗಡಗಳ ಜನಾಂಗ ವಾಸಿಸುತ್ತಿದ್ದು ಅವರ ಆರಾಧ್ಯ ದೇವತೆ ಮಾರಮ್ಮ ದೇವಿಯ ದೇವಾಲಯವನ್ನು ನಿರ್ಮಿಸಿರುವುದು ಸಂತೋಷದ ಸಂಗತಿ ಮಾರಮ್ಮ ದೇವಿ ತಾಯಿ ಎಲ್ಲರಿಗೂ ಒಳಿತು ಮಾಡಲಿ ಎಂದು ಶುಭ ಹಾರೈಸಿದರು.
ಬಿಜೆಪಿ ಮುಖಂಡ ಯಲಹಂಕ ಜಯಣ್ಣ ಅವರು ಮಾತನಾಡಿ ‘ಶಾಸಕ ಎಸ್ ಆರ್ ವಿಶ್ವನಾಥ್ ಅವರು ಕಾರ್ಮಿಕ ಹೋರಾಟದ ಹಿನ್ನೆಲೆಯಿಂದ ಬಂದವರು, ಹೋರಾಟದ ಮೂಲಕವೇ ರಾಜಕೀಯದಲ್ಲಿ ಮೇಲ್ಬಂಕ್ತಿಗೆ ಬಂದವರು. ಜನಸಾಮಾನ್ಯರ ಸಂಕಷ್ಟಗಳ ಬಗ್ಗೆ ಅವರಿಗೆ ಅಪಾರವಾದ ಅರಿವಿದೆ, ದುರ್ಬಲ ವರ್ಗದ ಜನರ ಸಮಸ್ಯೆಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿದ್ದಾರೆ, ಜನರ ಸಮಸ್ಯೆಗಳನ್ನು ಆಲಿಸುತ್ತಾ,, ಅವುಗಳನ್ನು ಪರಿಹರಿಸುತ್ತಾ ರಾಜಕೀಯದಲ್ಲಿ ಮೇಲ್ಪಂಕ್ತಿಯ ಸ್ಥಾನ ಪಡೆದಿದ್ದಾರೆ. ಅವರೊಬ್ಬ ಜನಸಾಮಾನ್ಯರ ನಾಯಕ ಎಂಬುದನ್ನು ಅವರ ಬಗ್ಗೆ ಮಾತನಾಡುವ ಕುಹಕಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅವರ ಬದುಕು ಹಾಗೂ ಕಾರ್ಯ ವೈಖರಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ ದೇವರಾಜಪ್ಪ ಮಾಜಿ ಬಿಬಿಎಂಪಿ ಸದಸ್ಯ ವೈ ಎನ್ ಅಶ್ವಥ್, ಯುವ ಮುಖಂಡ ವೈ ಆರ್ ರವಿ ಸೇರಿದಂತೆ ಮಾರಮ್ಮ ದೇವಿಯ ಭಕ್ತಾದಿಗಳು ಹಾಗೂ ಸ್ಥಳೀಯ ಗ್ರಾಮಸ್ಥರಿದ್ದರು.

Leave a Reply

Your email address will not be published. Required fields are marked *