















ಆಂಡಾಳ್ ಆಶ್ರಿತ್ ಹರಿತ. ಮಗುವಿನ ಸಾಧನೆ*
ಈಗಿನ ಕಾಲದಲ್ಲಿ ಮಕ್ಕಳು ಯಾವಾಗಲೂ ಟಿವಿ ಫೋನು ಎಂದು ತಂದೆ ತಾಯಿಯ ಜೀವ ಹಿಂಡುವ ಮಕ್ಕಳನ್ನು ನಾವು ಕೇಳಿದ್ದೇವೆ ಹಾಗೂ ನೋಡಿದ್ದೇವೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕವಯಸ್ಸಿನ ಮಗು ಪ್ರಕೃತಿಯ ಬಗ್ಗೆ ಹಾಗೂ ಪರಿಸರದ ಬಗ್ಗೆ ಹೊಂದಿರುವ ಕಾಳಜಿ ಅಪಾರವಾದದ್ದು ಪರಿಸರ ಸಂರಕ್ಷಣೆಯ ಬಗ್ಗೆ ಹಾಗೂ ಪ್ರಾಣಿ ಪಕ್ಷಿಗಳ ಬಗ್ಗೆ ಇರುವಂತಹ ಅಪಾರವಾದ ಕಾಳಜಿಯನ್ನು ನಾವು ಮಗು ಚಿತ್ರಿಸಿರುವ ಚಿತ್ರಗಳನ್ನು ನೋಡಿದರೆ ನಮಗೆ ಅರ್ಥವಾಗುತ್ತದೆ. ಪ್ರತಿಯೊಬ್ಬ ತಂದೆ ತಾಯಿ ಸಹ ಮಕ್ಕಳಲ್ಲಿ ಸಾಂಪ್ರದಾಯಿಕತೆಯನ್ನು ಪರಂಪರೆಗಳನ್ನು ಸಂಸ್ಕೃತಿಯನ್ನು ಹಾಗೂ ಮಾತೃಭಾಷೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಆಗ ಮಾತ್ರ ಪ್ರಭುದ್ಧ ಭಾರತದಲ್ಲಿ ಪ್ರತಿಭಾವಂತ ಮಕ್ಕಳಾಗಿ ನಾವು ಬೆಳೆಸಲು ಸಾಧ್ಯ. ಕೇವಲ ಓದುವುದಲ್ಲ,ಕೇಳುವುದು ಚಿತ್ರ ಬಿಡಿಸುವುದು ಚಿಕ್ಕವಯಸಿನಲ್ಲೇ ದೂರದೃಷ್ಟಿಯನ್ನು ಹೊಂದಿರುವಂತಹ ಪ್ರತಿಭಾವಂತ ಮಗು ಎಂದರೆ ತಪ್ಪಾಗಲಾರದು. ಇದೆಲ್ಲದಕ್ಕೂ ಕಾರಣ ತನ್ನ ಅಜ್ಜಿ ಎಲ್ಲಾ ಕಥೆಗಳನ್ನು ಹೇಳುವುದು, ಶ್ಲೋಕಗಳನ್ನು,ಅಕ್ಷರಮಾಲೆಗಳನ್ನು,ಅಂಕಿಗಳನ್ನು, ವಾರಗಳನ್ನು, ತಿಂಗಳಗಳನ್ನು,ಸಂಗೀತವನ್ನು,ವ್ಯಾಯಾಮವನ್ನು , ಅಂಗಾಂಗಳನ್ನ ಗುರುತಿಸುವುದನ್ನು, ಮತ್ತು ತಮಿಳ್,ಕನ್ನಡ,ಹಿಂದಿ, ಸಂಸ್ಕೃತ ಹಾಗೂ ಆಂಗ್ಲ ಭಾಷೆಗಳನ್ನು ಆಂಡಾಳ್ ಐದು ತಿಂಗಳು ಮಗುವಾಗಿದ್ದಾಗಲೇ ಪರಿಚಯಿಸಿದರು. ಇದೆಲವನ್ನು ಅವರ ಅಜ್ಜಿ ಆಶಾ ಶ್ರೀಧರ್ ಮಾಡಿರುವಂತಹ ಅತ್ಯಂತ ಅಮೂಲ್ಯವಾದಂತಹ ಕೆಲಸ. ಮಗುವನ್ನು ಪ್ರಕೃತಿಯೊಂದಿಗೆ ಬೆರೆಸಿ ಪ್ರಕೃತಿಯ ಅರಿವುಗಳನ್ನ ಅರ್ಥೈಸಿರುವುದೇ ಮಗುವಿನ ಆಸಕ್ತಿಗೆ ಕಾರಣವಾಯಿತು. 2025ರ ಬೇಸಿಗೆಯಲ್ಲಿ ನಾಲ್ಕು ವರ್ಷ ಮತ್ತು 153 ದಿನಗಳ ವಯಸ್ಸಿನಲ್ಲಿ Wilsonville Public Library, Oregon ಸಣ್ಣ ಕಥಾ ಸ್ಪರ್ಧೆ ಗಾಗಿ ಕಥೆಯನ್ನು ಕಲ್ಪಿಸಿ ಕೊಂಡರು ಮತ್ತು ಕೈಯಿಂದ ಬರೆದ ಅತ್ಯಂತ ಕಿರಿಯ ಭಾರತೀಯ ಲೇಖಕಿ ಎಂಬ ಮನ್ನಣೆಯನ್ನು ಗಳಿಸಿದರು. ಪ್ರತಿ ಮನೆಯಲ್ಲಿ ನಾವುಗಳು ಟಿವಿ ಫೋನು ಇತ್ಯಾದಿ ದೂರ ಇಟ್ಟು ನಾವುಗಳು ಮಕ್ಕಳಲ್ಲಿ ಆಸಕ್ತಿದಾಯಕ ಕಥೆಗಳನ್ನು ಹೇಳಿಕೊಡುವಂತಹ ಮನಸ್ಥಿತಿ ಪೋಷಕರದಾಗಬೇಕು ಇತಿಹಾಸಗಾರರ ಕಥೆ ಹೇಳಿಕೊಡುವುದು,ಧೈರ್ಯಶಾಲಿ ಮಹಿಳೆಯರ ಕಥೆಗಳನ್ನು ಹೇಳುವುದು, ಭಾರತದ ಮೊದಲ ಶಿಕ್ಷಕಿಯಾದಂತಹ ಸಾವಿತ್ರಿಬಾಯಿ ಪುಲೆಯವರ ಕಥೆಗಳನ್ನು ಹೇಳುವುದು,ತಂದೆ ತಾಯಿ ಪೋಷಕರು ಹಿರಿಯರನು ಮತ್ತು ಕಿರಿಯರನ್ನು ಗೌರವಿಸುವಂತಹ ಸಂಸ್ಕಾರವನ್ನು ಹೇಳಿಕೊಡುವಂತಹ ಜವಾಬ್ದಾರಿ ತಂದೆ ತಾಯಿದಾಗಬೇಕು. ಪ್ರಸ್ತುತ ದಿನಗಳಲ್ಲಿ ತಂದೆ ತಾಯಿಯ ಒತ್ತಡ ಕೆಲಸಗಳಿಂದಾಗಿ ಮಕ್ಕಳ ಆಸಕ್ತಿ ಕಡಿಮೆ ಮಾಡುತ್ತಿರುವುದು ನಾವುಗಳು ಮಕ್ಕಳಿಗೆ ಮಾಡುತ್ತಿರುವ ಅತಿ ದೊಡ್ಡ ಮೋಸವಾಗುತ್ತಿದೆ. ಸಿಂಧಿ ಕಾಲೇಜಿನಲ್ಲಿ ನಡೆದಂತಹ ‘Grandma Eva Goes Camping’ ಒಂದು ಕಾರ್ಯಕ್ರಮ ಪ್ರಕೃತಿ ಸಂದೇಶವನ್ನು ನೀಡುವಂತಹ ಹಾಗೂ ಅನೇಕ ಚಿಕ್ಕ ಮಕ್ಕಳಿಗೆ ಸ್ಪೂರ್ತಿಯಾಗಿರುವಂತಹ ಪುಸ್ತಕವನ್ನು ಬಿಡುಗಡೆ ಮಾಡಿ ಮಗುವಿಗೆ ಶುಭ ಹಾರೈಸಲಾಯಿತು.ಈ ಸಂದರ್ಭದಲ್ಲಿ.ಮುಖ್ಯ ಅತಿಥಿ
ಶ್ರೀ. ಪ್ರಕಾಶ್ ಎಫ್. ಮಾಧ್ವಾನಿ
ಗೌರವ ಅತಿಥಿ
ಶ್ರೀಮತಿ ಮೈತ್ರೇಯಿ ಸತ್ಯದೇವ್. ಡಾಕ್ಟರ್ ಮಹೇಶ್ ಕುಕ್ರೇಜೆ ಖಜಾಂಚಿ ಹಿಂದಿ ಹೈಸ್ಕೂಲ್. ಮಗುವಿನ ಪೋಷಕರು ಇನ್ನು ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು
ಸ್ಥಳ: ರಾಧಾ ಕೃಷ್ಣ ಸಭಾಂಗಣ,
ಸಿಂಧಿ ಪ್ರೌಢ ಶಾಲೆ,
ಕೆಕೆ ರಸ್ತೆ ಶಾಖೆ,
ಬೆಂಗಳೂರು
