ಬೆಂಗಳೂರು:  ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಾರಾನಾಥ ಕೆ ಅವರು ಇಂದು ಜಿ.ಎಂ.ಪಿ.ಎಸ್ ಶಾಲೆ ಗೃಹಲಕ್ಷ್ಮಿ ಬಡಾವಣೆ ಶಾಲೆಗೆ ಭೇಟಿ ನೀಡಿ ಶಾಲೆಯ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಸಂಸ್ಥೆಯ ಡಿಜಿ ಕ್ಷೇತ್ರ ಕೇಂದ್ರದ ವತಿಯಿಂದ ವಿದ್ಯಾರ್ಥಿಗಳಿಗೆ ಪೇಪರ್ ಟ್ರಾನಿಕ್ಸ್ ಕಿಟ್ ಕುರಿತು ವಿವರವಾದ ಮಾಹಿತಿ ನೀಡಲಾಯಿತು. ಕಾಗದದ ಸಹಾಯದಿಂದ ಸರಳ ಎಲೆಕ್ಟ್ರಾನಿಕ್ ವಲಯಗಳು, ಎಲ್‌ಇಡಿ ದೀಪಗಳು ಹಾಗೂ ಸ್ವಿಚ್‌ಗಳಂತಹ ಮಾದರಿಗಳನ್ನು ತಯಾರಿಸುವ ಮೂಲಕ ವಿಜ್ಞಾನವನ್ನು ಸುಲಭವಾಗಿ ಕಲಿಯಬಹುದು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಕೈಚಳಕದ ಮೂಲಕ ವಿಜ್ಞಾನ ಕಲಿಯುವುದು ಮಕ್ಕಳಲ್ಲಿ ವಿಜ್ಞಾನ ಚಿಂತನೆ, ಸೃಜನಶೀಲತೆ ಮತ್ತು ಹೊಸ ಆವಿಷ್ಕಾರಗಳತ್ತ ಆಸಕ್ತಿ ಮೂಡಿಸುತ್ತದೆ ಎಂದು ತಿಳಿಸಿದರು. ನಂತರ ವಿದ್ಯಾರ್ಥಿಗಳಿಗೆ ಪೇಪರ್ ಟ್ರಾನಿಕ್ಸ್ ಕಿಟ್‌ಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ಅಗಸ್ತ್ಯ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಿತು.

Leave a Reply

Your email address will not be published. Required fields are marked *