ಪೌರಕಾರ್ಮಿಕರಿಗೆ ಕೋಳಿ, ಅನಾಥಾಶ್ರಮಗಳಿಗೆ ನೆರವು ನೀಡಿ ಬಿ.ಗುಣರಂಜನ್ ಶೆಟ್ಟಿ ಅವರ ಹುಟ್ಟುಹಬ್ಬ ಆಚರಣೆ :
ಬ್ಯಾಟರಾಯನಪುರ : ಕ್ಷೇತ್ರದ ಕೋಡಗಲಹಟ್ಟಿ ಮತ್ತು ಹುಣಸಮಾರನಹಳ್ಳಿ ಗ್ರಾಮಗಳಲ್ಲಿ ಪೌರಕಾರ್ಮಿಕರಿಗೆ ಯುಗಾದಿಯ ಕೊಡುಗೆಯಾಗಿ ಕೋಳಿ ವಿತರಣೆ, ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ಅನ್ನದಾನದ ನೆರವು ಹಾಗೂ ಇನ್ನಿತರ ಪರಿಕರಗಳ ವಿತರಣೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳ ಮೂಲಕ ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕರು, ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಗಳು, ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿ ಅವರ ಹುಟ್ಟುಹಬ್ಬವನ್ನು ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಜೆ.ಶ್ರೀನಿವಾಸ ಅವರ ನೇತೃತ್ವದಲ್ಲಿ ಅರ್ಥಪೂರ್ಣ ರೀತಿಯಲ್ಲಿ ಆಚರಿಸಲಾಯಿತು.
ನಂತರ ವೇದಿಕೆ ರಾಜ್ಯಾಧ್ಯಕ್ಷ ಜೆ.ಶ್ರೀನಿವಾಸ ಅವರು ಮಾತನಾಡಿ ‘ಜಯ ಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕರಾದ ಬಿ.ಗುಣರಂಜನ್ ಶೆಟ್ಟಿ ಅವರ ಹುಟ್ಟುಹಬ್ಬವನ್ನು ಕಳೆದ ಹಲವು ವರ್ಷಗಳಿಂದ ಬಡವರು ಮತ್ತು ಅನಾಥಾಶ್ರಮ ಗಳಿಗೆ ನೆರವು, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ವೃದ್ಧರಿಗೆ ಕಂಬಳಿ ವಿತರಣೆ ಮುಂತಾದ ಸೇವಾ ಕಾರ್ಯಗಳ ಮೂಲಕ ಅರ್ಥಪೂರ್ಣ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯ ಹುಟ್ಟುಹಬ್ಬ ಯುಗಾದಿಯ ದಿನದಂದೇ ಬಂದಿರುವುದರಿಂದಾಗಿ ಹೊಸ ವರ್ಷದ ಶುಭ ದಿನವನ್ನು ಸಂತೋಷ ಹಾಗೂ ಸಂಭ್ರಮದಿಂದ ಆಚರಿಸುವಂತಾಗಲಿ ಎಂಬ ನಿಟ್ಟಿನಲ್ಲಿ ಪೌರಕಾರ್ಮಿಕರಿಗೆ ಕೋಳಿ ವಿತರಣೆ, ವೃದ್ದಾಶ್ರಮ ಗಳಿಗೆ ಅನ್ನದಾನದ ನೆರವು ಹಾಗೂ ಇನ್ನಿತರ ಪರಿಕರಗಳ ವಿತರಣೆಯ ಮೂಲಕ ಆಚರಿಸಲಾಗುತ್ತಿದೆ. ಹುಟ್ಟುಹಬ್ಬ ಮಾತ್ರವಲ್ಲದೆ ಶಿವರಾತ್ರಿಯ ಅಂಗವಾಗಿ ಬೃಹತ್ ಕಾರ್ಯಕ್ರಮ, ಪರಿಸರ ದಿನಾಚರಣೆ, ಮಹಿಳಾ ದಿನಾಚರಣೆ ಹೀಗೆ ಹಲವು ದಿನಾಚರಣೆಗಳ ಅಂಗವಾಗಿ ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿರುವ ಬಿ.ಗುಣರಂಜನ್ ಶೆಟ್ಟಿ ಅವರ ಸಾಮಾಜಿಕ ಕಳಕಳಿ, ಸೇವಾ ಮನೋಭಾವ ನಿಜಕ್ಕೂ ಪ್ರಶಾಂಸಾರ್ಹವಾದುದು, ಇಂತಹ ದಾನಿಗಳು, ಸಮಾಜ ಸೇವಾ ಧುರೀಣರು, ಪರಿಸರ ಸಂರಕ್ಷಣೆಯ ಕಳಕಳಿಯುಳ್ಳ ಸಹೃದಯಿಗಳಿಗೆ ಭಗವಂತ ಒಳ್ಳೆಯ ಆಯಸ್ಸು , ಆರೋಗ್ಯ, ಐಶ್ವರ್ಯ, ಅಧಿಕಾರ ಕರುಣಿಸುವ ಮೂಲಕ ಇನ್ನೂ ಹೆಚ್ಚಿನ ಸೇವೆ ಮಾಡಲು ಅವಕಾಶ ನೀಡುವಂತಾಗಲಿ ಎಂದು ಈ ಗುಣರಂಜನ್ ಶೆಟ್ಟಿ ಅವರಿಗೆ ಜನ್ಮದಿನದ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ಮುಖಂಡರಾದ ವಿನಯ್, ಹರೀಶ್, ಮುನಿರಾಜು, ರಾಮಾಂಜಿನಪ್ಪ, ಸುದರ್ಶನ್, ಸೌಂದರ್ಯ, ಕಿರಣ್, ನಾರಾಯಣಸ್ವಾಮಿ ಸೇರಿದಂತೆ ಇನ್ನಿತರ ಗಣ್ಯರಿದ್ದರು.

Leave a Reply

Your email address will not be published. Required fields are marked *