


ಯಲಹಂಕ ಮಾರುತಿ ನಗರ ಚಂದ್ರಶೇಖರ್ ರವರಿಗೆ ಹಸಿರೇ ಉಸಿರು ಟ್ರಸ್ಟ್ ವತಿಯಿಂದ ವೀಲ್ ಚೇರ ಕೊಡುಗೆ
ಯಲಹಂಕ ಮಾರುತಿ ನಗರ ನಿವಾಸಿಯಾದ .ಚಂದ್ರಶೇಖರ್ ರಸ್ತೆ ಅಪಘಾತದಲ್ಲಿ ಎರಡು ಕಾಲುಗಳಿಗೆ ತೀವ್ರ ಪೆಟ್ಟಾಗಿದ್ದು
ನಡೆಯಲಾಗದ ಸ್ಥಿತಿಯಲ್ಲಿದ್ದು ಬಹಳ ಸಮಸ್ಯೆ ಆಗಿತ್ತು, ಇದನ್ನು ಅರಿತ ಹಸಿರೇ ಉಸಿರು ಟ್ರಸ್ಟ್ ವತಿಯಿಂದ ವೀಲ್ ಚೇರನ್ನು ಕೊಡುಗೆಯಾಗಿ ನೀಡಿದರು ಈ ಸಂದರ್ಭದಲ್ಲಿ ಮುನಿರಾಜು ಸ್ವಪ್ನ ಧ್ವನಿ ಟಿವಿ ಎಡಿಟರ್ ಆದ ಸುರೇಶ್
ಹಾಗೂ ಮಂಜುನಾಥ್ ಮತ್ತು ಹಸಿರು ಉಸಿರುಟ್ರಸ್ಟ್ ನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ವಿಶ್ವಕನ್ನಡಿಗ ಬೆಟ್ಟ ಹಲಸೂರು ಡಾ. ಶ್ರೀನಿವಾಸ್ ಮೂರ್ತಿರವರು ಭಾಗವಹಿಸಿದ್ದರು ಶ್ರೀನಿವಾಸ್ ರವರು
ನಿಮ್ಮ ಸೇವೆಗೆ ನಮ್ಮ ಹಸಿರು ಉಸಿರು ಟ್ರಸ್ಟ್ ಸದಾ ಸಿದ್ಧವಾಗಿರುತ್ತದೆ ಎಂದು ಭರವಸೆ ನೀಡಿದರು ಚಂದ್ರಶೇಖರ್ ಅವರು ಶ್ರೀನಿವಾಸ್ ಮೂರ್ತಿರವರಿಗೆ ನಿಮ್ಮಂತವರು ನಮ್ಮಂತವರ ಬಡವರ ಪಾಲಿಗೆ ದೇವರಿದ್ದ ಹಾಗೆ ದಯವಿಟ್ಟು ನಿಮ್ಮ ಸಹಕಾರ ನನ್ನಂಥವರ ಅನೇಕರಿಗೆ ನಿಮ್ಮ ಸಹಾಯ ಹಸ್ತ ಇರಲಿ ದೇವರು ನಿಮಗೆ ಇದೇ ರೀತಿ ಸಮಾಜ ಸೇವೆ ಮಾಡುವ ಅವಕಾಶ ನೀಡಿ ಆಶೀರ್ವದಸಲಿ ಎಂದು ನಾನು ದೇವರು ಬೇಡಿಕೊಳ್ಳುತ್ತೇನೆ ಎಂದರು ಶ್ರೀನಿವಾಸ್ ಅಂತವರು ಇಂತಹ ಕಷ್ಟಗಳಿಗೆ ಭಾಗಿಯಾಗಲಿ ಎಂದು ಅನೇಕರ ಆಶಯ
